Select Your Language

Notifications

webdunia
webdunia
webdunia
webdunia

ತಡವಾಗಿಯಾದರೂ, ಎಂಎಸ್ ಧೋನಿ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ ಮಾತೇನು?!

ತಡವಾಗಿಯಾದರೂ, ಎಂಎಸ್ ಧೋನಿ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ ಮಾತೇನು?!
NewDelhi , ಶುಕ್ರವಾರ, 6 ಜನವರಿ 2017 (10:50 IST)
ನವದೆಹಲಿ: ಎಂಎಸ್ ಧೋನಿ ಸೀಮಿತ ಓವರ್ ಗಳ ಪಂದ್ಯದ ನಾಯಕತ್ವಕ್ಕೆ ಗುಡ್ ಬೈ ಹೇಳಿ ಎರಡು ದಿನವಾಗುತ್ತಾ ಬಂತು. ಸದಾ ಟ್ವಿಟರ್ ನಲ್ಲಿ ಕ್ರಿಯಾಶೀಲರಾಗಿರುವ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ನಿನ್ನೆ ಏನೂ ಪ್ರತಿಕ್ರಯಿಸಿರಲಿಲ್ಲ. ಆದರೆ ಇಂದು ಧೋನಿ ಬಗ್ಗೆ ಟ್ವೀಟ್ ಮಾಡಿದ್ದಾರೆ.

“ನೀವು ಯಾವತ್ತೂ ಯುವಕರಿಗೆ ಪ್ರೋತ್ಸಾಹ ನೀಡುವ ನಾಯಕ. ಸದಾ ಯುವಕರ ಬೆನ್ನಿಗೆ ನಿಂತು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು. ನೀವು ಯಾವತ್ತಿಗೂ ನನ್ನ ನಾಯಕ ಮಹಿ ಭಾಯ್” ಎಂದು ಟ್ವೀಟ್ ಮಾಡಿದ್ದಾರೆ.

ಇಂದು ಧೋನಿ ಸ್ಥಾನಕ್ಕೆ ಕೊಹ್ಲಿಯನ್ನು ಅಧಿಕೃತವಾಗಿ ಏಕದಿನ ಪಂದ್ಯಗಳಿಗೂ ನಾಯಕನಾಗಿ ಘೋಷಿಸುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ಕೊಹ್ಲಿ ತಮ್ಮ ಮೆಚ್ಚಿನ ನಾಯಕನನ್ನು ನೆನಪಿಸಿಕೊಂಡಿದ್ದಾರೆ. ವಿಶೇಷವೆಂದರೆ ತಮ್ಮ ಮೆಚ್ಚಿನ ನಾಯಕನಿಗೇ ಕೊಹ್ಲಿ ಈಗ ನಾಯಕನಾಗಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಮಹಿಳೆಯರ ಕುರಿತು ವೀರೇಂದ್ರ ಸೆಹ್ವಾಗ್ ಕಾಮೆಂಟ್ ಏನು?