Webdunia - Bharat's app for daily news and videos

Install App

ದುಲೀಪ್ ಟ್ರೋಫಿ: ಫೈನಲ್‌ಗೇರಿದ ಇಂಡಿಯಾ ರೆಡ್

Webdunia
ಶುಕ್ರವಾರ, 2 ಸೆಪ್ಟಂಬರ್ 2016 (15:44 IST)
ಇಂಡಿಯಾ ರೆಡ್ ಮತ್ತು ಇಂಡಿಯಾ ಬ್ಲ್ಯೂ ನಡುವಿನ ದುಲೀಪ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಎರಡನೆಯ ಪಂದ್ಯ ಮಳೆರಾಯನ ಕಾಟದಿಂದಾಗಿ ನಿರೀಕ್ಷೆಯಂತೆಯೇ ಡ್ರಾ ಆಗಿದೆ. 

ಈ ಡ್ರಾದಿಂದ ಒಂಡು ಅಂಕವನ್ನು ಗಳಿಸಿದ ಯುವರಾಜ್ ಪಡೆ ಒಟ್ಟು ಅಂಕವನ್ನು 7ಕ್ಕೇರಿಸಿಕೊಂಡು ಅಂತಿಮ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ 
 
ನಾಲ್ಕು ದಿನಗಳ ಕಾಲ ಕೇವಲ 78.2 ಓವರ್ ಆಡಲು ಮಾತ್ರ ಸಾಧ್ಯವಾಗಿದ್ದು ಎರಡು ಪಂದ್ಯಗಳು ಒಂದೊಂದು ಅಂಕವನ್ನು ಹಂಚಿಕೊಂಡವು. ಆರಂಭಿಕ ಪಂದ್ಯದಲ್ಲಿ ಸುರೇಶ್ ರೈನಾ ನೇತೃತ್ವದ ಇಂಡಿಯಾ ಗ್ರೀನ್ ವಿರುದ್ಧ ಸೆಣಸಾಡಿದ್ದ ರೆಡ್ ಗೆಲುವಿನ ಕೇಕೆ ಹಾಕುವುದರ ಮೂಲಕ 6 ಅಂಕಗಳನ್ನು ಬುಟ್ಟಿಗೆ ಹಾಕಿಕೊಂಡಿತು. 
 
ಸೆಪ್ಟೆಂಬರ್ 4 ರಂದು ಬ್ಲ್ಯೂ ಮತ್ತು ಗ್ರೀನ್ ನಡುವೆ ಕದನ ಏರ್ಪಡಲಿದ್ದು ಫಲಿತಾಂಶ ರೆಡ್ ವಿರುದ್ಧ ಫೈನಲ್‌ನಲ್ಲಿ ಕಾದಾಡಲಿರುವ ತಂಡವನ್ನು ನಿರ್ಧರಿಸಲಿದೆ. 
 
ಈ ಪಂದ್ಯದಲ್ಲಿ ಇನ್ನಿಂಗ್ಸ್ ಮುನ್ನಡೆ ಅಥವಾ ಗೆದ್ದ ತಂಡ ಫೈನಲ್‌ಗೇರಲಿದೆ. ಒಂದು ವೇಳೆ ಪಂದ್ಯವನ್ನು ಮಳೆ ನುಂಗಿ ಹಾಕಿದರೆ ಅಂಕಗಳು ಮತ್ತೆ ಇಬ್ಭಾಗವಾಗಲಿವೆ. 
 
ಸಂಕ್ಷಿಪ್ತ ಸ್ಕೋರ್: ಇಂಡಿಯಾ ಬ್ಲ್ಯೂ 285/5 -( 78.2 ಓವರ್) ಮಾಯಾಂಕ್ ಅಗ್ರವಾಲ್ 92, ಗೌತಮ್ ಗಂಭೀರ್ 77, ಕುಲದೀಪ್ ಯಾದವ್ 4/78.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪಟೌಡಿ ಟ್ರೋಫಿ ಹೆಸರು ವಿವಾದಕ್ಕೆ ಕೊನೆಗೂ ಮೌನ ಮುರಿದ ಸಚಿನ್ ತೆಂಡೂಲ್ಕರ್‌

ಹುಡುಗಿಯಾಗಿ ಬದಲಾದ ಕ್ರಿಕೆಟಿಗ: ಐಸಿಸಿ, ಬಿಸಿಸಿಐಗೆ ಅನಯಾ ಬಂಗಾರ್‌ ವಿಶೇಷ ಮನವಿ

IND vs ENG test: ಭಾರತ, ಇಂಗ್ಲೆಂಡ್ ಟೆಸ್ಟ್ ಸರಣಿಯ ಲೈವ್ ವೀಕ್ಷಣೆ ಎಲ್ಲಿ, ಟೈಂ ವಿವರ ಇಲ್ಲಿದೆ

ಜಸ್ಪ್ರೀತ್ ಬುಮ್ರಾಗೆಲ್ಲಾ ನಾವು ಹೆದರಲ್ಲ ಎಂದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್

IND vs ENG: ಭಾರತದ ವಿರುದ್ಧ ಕಣಕ್ಕಿಳಿಯಲಿರುವ 11 ಆಟಗಾರರ ಪಟ್ಟಿ ಪ್ರಕಟಿಸಿದ ಇಂಗ್ಲೆಂಡ್

ಮುಂದಿನ ಸುದ್ದಿ
Show comments