Webdunia - Bharat's app for daily news and videos

Install App

ಅವಳು ಧೋನಿ ಮಗಳಲ್ಲ !

Webdunia
ಗುರುವಾರ, 2 ಏಪ್ರಿಲ್ 2015 (10:29 IST)
ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಆಸ್ಟ್ರೇಲಿಯಾದಿಂದ ಮರಳಿ ತಮ್ಮ ಮಗಳನ್ನು ಪ್ರಥಮ ಬಾರಿ ತಮ್ಮ ಮಡಿಲಲ್ಲಿಟ್ಟುಕೊಂಡು ಮುದ್ದಾಡಿಸಿ ಆಗಿತ್ತೋ ಇಲ್ಲವೋ. ಆಗಲೇ ಸಾಮಾಜಿಕ ಜಾಲತಾಣಗಳಲ್ಲಿ ಧೋನಿ ಒಬ್ಬ ಪುಟ್ಟ ಹೆಣ್ಣು ಮಗುವನ್ನು ಎತ್ತಿಕೊಂಡಿರುವ ದೃಶ್ಯ ಹರಿದಾಡಲು ಪ್ರಾರಂಭವಾಗಿತ್ತು ಮತ್ತು ಆ ಮಗು ಧೋನಿಯ ಪುತ್ರಿ ಎಂಬಂತೆ ಬಿಂಬಿಸಲಾಗುತ್ತಿತ್ತು. ಆದರೆ ಅದು ತಮ್ಮ ಮಗುವಲ್ಲ ಎಂದು ಸ್ವತಃ ಧೋನಿ ಪತ್ನಿ ಸಾಕ್ಷಿ ಬುಧವಾರ ಸ್ಪಷ್ಟೀಕರಿಸಿದ್ದಾರೆ. 

ಆ ಚಿತ್ರದಲ್ಲಿ ಧೋನಿ ಎತ್ತಿಕೊಂಡಿರುವ ಮಗು ಒಂದುವರೆ ತಿಂಗಳಿಗಿಂತ ದೊಡ್ಡದ್ದು ಎನ್ನುವುದು ಸ್ಪಷ್ಟವಾಗುತ್ತಿದೆ. ಅಲ್ಲದೇ ಧೋನಿಯ ಮುಖಭಾವವು ಸಹ ಈಗ ಅವರಿರುವಂತೆ ಇಲ್ಲ. 
 
ಆದರೆ ಫೋಟೋ ಮಾತ್ರ ಕಳೆದೊಂದು ವಾರದಿಂದ ವೈರಲ್ ಆಗಿ ಹರಿದಾಡುತ್ತಿದೆ. ಈಗ ಅದು ತಮ್ಮ ಮತ್ತು ಧೋನಿ ಮಗಳು ಝೀವಾ ಅಲ್ಲ ಎಂದು ಸಾಕ್ಷಿ ಟ್ವಿಟರ್ ಮೂಲಕ ವಿಷದ ಪಡಿಸಿದ್ದಾರೆ. 
 
ಧೋನಿ ಪತ್ನಿ ಸಾಕ್ಷಿ ಸಹ ಈ ಹಿಂದೆ ಪುತ್ರಿಯ ಭಾವಚಿತ್ರವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. ಸಾಕ್ಷಿ ತಮ್ಮ ಮಗಳ ಕೈ ಹಿಡಿದುಕೊಂಡಿದ್ದ ಫೋಟೋದಲ್ಲಿ ಮಗುವಿನ ಮುಖ  ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರು ಧೋನಿ ಮಗು ಹಿಡಿದುಕೊಂಡಿರುವ ವಿಡಿಯೋ 2013ರಲ್ಲಿ ಯೂ- ಟ್ಯೂಬ್‌ನಲ್ಲಿ 2013ರಲ್ಲಿ ಮೊದಲ ಬಾರಿಗೆ ಪೋಸ್ಟ್ ಆಗಿತ್ತು. ಆದರೀಗ ವೈರಲ್ ಆಗಿ ಹರಿದಾಡುತ್ತಿದೆ. 
 
ಕಳೆದ ತಿಂಗಳು ಮಗಳು ಫೆಬ್ರವರಿ 7 ರಂದು ಮಗಳು ಹುಟ್ಟಿದಾಗ ಧೋನಿ ಆಸ್ಟ್ರೇಲಿಯಾದಲ್ಲಿದ್ದರು. ತನಗೆ ದೇಶವೇ ಮುಖ್ಯ, ವಿಶ್ವಕಪ್ ಮುಗಿಯುವವರೆಗೆ ನನ್ನ ಮಗಳನ್ನು ನೋಡಲು ಹೋಗುವುದಿಲ್ಲ ಎಂದು ಧೋನಿ ಹೇಳಿದ್ದರು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments