Select Your Language

Notifications

webdunia
webdunia
webdunia
webdunia

ಸಾಮಾಜಿಕ ಜಾಲತಾಣಗಳಲ್ಲಿ ಧೋನಿ ಮಗಳ ಫೋಟೋ !

ಸಾಮಾಜಿಕ ಜಾಲತಾಣಗಳಲ್ಲಿ ಧೋನಿ ಮಗಳ ಫೋಟೋ !
ನವದೆಹಲಿ , ಸೋಮವಾರ, 30 ಮಾರ್ಚ್ 2015 (11:41 IST)
ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಆಸ್ಟ್ರೇಲಿಯಾದಿಂದ ಮರಳಿ ತಮ್ಮ ಮಗಳನ್ನು ಪ್ರಥಮ ಬಾರಿ ತಮ್ಮ ಮಡಿಲಲ್ಲಿಟ್ಟುಕೊಂಡು ಮುದ್ದಾಡಿಸಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಹ ಧೋನಿ ಒಬ್ಬ ಪುಟ್ಟ ಹೆಣ್ಣು ಮಗುವನ್ನು ಎತ್ತಿಕೊಂಡಿರುವ ದೃಶ್ಯ ಹರಿದಾಡುತ್ತಿದೆ. ಆ ಮಗು ಧೋನಿಯ ಸುಪುತ್ರಿ ಎಂದು ಹೇಳಲಾಗುತ್ತಿದೆ. ಆದರೆ ಅದು ಅವರದೇ ಮಗು ಎಂಬುದು ಸ್ಪಷ್ಟವಾಗಿಲ್ಲ.

ಈ ಚಿತ್ರದಲ್ಲಿ ಧೋನಿ ಎತ್ತಿಕೊಂಡಿರುವ ಮಗು ಒಂದುವರೆ ತಿಂಗಳಿಗಿಂತ ದೊಡ್ಡದ್ದು ಎನ್ನುವುದು ಸ್ಪಷ್ಟವಾಗುತ್ತದೆ. ಅಲ್ಲದೇ ಧೋನಿಯ ಮುಖಭಾವವು ಸಹ ಈಗ ಅವರಿರುವಂತೆ ಇಲ್ಲ. 
 
ವಾಸ್ತವ ಸಂಗತಿ ಏನೇ ಇರಲಿ. ಈ ಫೋಟೋ ಏಕೆ ವೈರಲ್ ಆಗುತ್ತಿದೆ ಎಂದರೆ ಎಲ್ಲರೂ ಧೋನಿ ಮಗಳ ಚಿತ್ರವನ್ನು ನೋಡಲು ಬಯಸಿದ್ದಾರೆ. 
 
ಕಳೆದ ತಿಂಗಳು ಮಗಳು ಹುಟ್ಟಿದಾಗ ಧೋನಿ ಆಸ್ಟ್ರೇಲಿಯಾದಲ್ಲಿದ್ದರು. ತನಗೆ ದೇಶವೇ ಮುಖ್ಯ, ವಿಶ್ವಕಪ್ ಮುಗಿಯುವವರೆಗೆ ನನ್ನ ಮಗಳನ್ನು ನೋಡಲು ಹೋಗುವುದಿಲ್ಲ ಎಂದು ಧೋನಿ ಹೇಳಿದ್ದರು. 
 
ಧೋನಿ ಪತ್ನಿ ಸಾಕ್ಷಿ ಸಹ ಈ ಹಿಂದೆ ಪುತ್ರಿಯ ಭಾವಚಿತ್ರವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. ಆದರೆ ಅದರಲ್ಲಿ ಮಗುವಿನ ಮುಖ  ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. 

Share this Story:

Follow Webdunia kannada