Daily Horoscope
✕

ಟಿ20 ಕ್ರಿಕೆಟ್ ಗೆ ನಿವೃತ್ತಿ: ಧೋನಿ ಹೇಳಿದ್ದೇನು?

Webdunia
ಸೋಮವಾರ, 13 ನವೆಂಬರ್ 2017 (08:17 IST)
ಮುಂಬೈ: ಟಿ20 ಕ್ರಿಕೆಟ್ ಮಾದರಿಗೆ ಧೋನಿ ನಿವೃತ್ತಿ ಹೇಳಲಿ ಎಂದು ಅಭಿಪ್ರಾಯಗಳು ಕೇಳಿಬರುತ್ತಿರುವ ಬೆನ್ನಲ್ಲೇ ಸ್ವತಃ ಧೋನಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

 
 ‘ಎಲ್ಲರಿಗೂ ಅವರವರ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದೆ’ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಧೋನಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಒಬ್ಬ ಮನುಷ್ಯ 70 ವರ್ಷ ಜೀವಿಸಬಹುದಾದರೆ, ಕ್ರಿಕೆಟ್ ಆಡುವುದು 10 ರಿಂದ 15 ವರ್ಷ. ಕೆಲವರು ಅಪರೂಪಕ್ಕೆ 20 ವರ್ಷ ಕ್ರಿಕೆಟ್ ಆಡುತ್ತಾರೆ. ಆ ಸಂದರ್ಭದಲ್ಲಿ ಮಾತ್ರ ನಿಮಗೆ ಹೆಮ್ಮೆಯಿಂದ ನಾನು ದೇಶವನ್ನು ಪ್ರತಿನಿಧಿಸುತ್ತೇನೆ ಎನ್ನಲು ಸಾಧ್ಯ. ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ ಎನ್ನುವುದೇ ನನಗೆ ದೊಡ್ಡ ಸ್ಪೂರ್ತಿ’ ಎಂದು ಧೋನಿ ಹೇಳಿದ್ದಾರೆ.

‘ನಾನು ಯಾವತ್ತೂ ಫಲಿತಾಂಶದ ಕಡೆಗೆ ಗಮನ ಹರಿಸುವುದಿಲ್ಲ. ನನ್ನ ಆಲೋಚನೆ ಮಟ್ಟ ಹೇಗೆ ಕೆಲಸ ಮಾಡುತ್ತದೆ ಎನ್ನುವುದರ ಬಗ್ಗೆ ಮಾತ್ರ ಯೋಚಿಸುತ್ತೇನೆ’ ಎಂದು ಧೋನಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಕ್ಟೋಬರ್ 5 ಅಥವಾ 6ರಂದು ಭಾರತದ ಟೆಸ್ಟ್ ಮತ್ತು ವೈಟ್ ಬಾಲ್ ತಂಡಗಳ ಆಯ್ಕೆ ಪ್ರಕಟ

ಟೀಂ ಇಂಡಿಯಾ ಪರ ರೋಹಿತ್, ಕೊಹ್ಲಿ ಮುಂದಿನ ಸರಣಿ ಆಡೋದು ಯಾವಾಗ: ಇಲ್ಲಿದೆ ವೇಳಾಪಟ್ಟಿ

ಏಷ್ಯನ್ ಗೇಮ್ಸ್ 2026: 85 ಪದಕಗಳೊಂದಿಗೆ 4ನೇ ಸ್ಥಾನ ಪಡೆದು ಅಭಿಯಾನ ಮುಗಿಸಿದ ಭಾರತ

IND vs WI: ಕೆಎಲ್ ರಾಹುಲ್ ರೌದ್ರಾವತಾರಕ್ಕೆ ಬೆಚ್ಚಿದ ವಿಂಡೀಸ್ ಬೌಲರ್ ಗಳು

IND vs WI: ದೇವ್ರಾಣೆ ಇನ್ನು ರೋಹಿತ್ ಶರ್ಮಾ ಬಗ್ಗೆ ಕೆಟ್ಟ ಮಾತಾಡಲ್ಲ: ಅಭಿಮಾನಿಗಳು ಶಪಥ ಮಾಡಿದ್ದೇಕೆ

ಮುಂದಿನ ಸುದ್ದಿ
Show comments