Webdunia - Bharat's app for daily news and videos

Install App

ವಿಶ್ವಕಪ್ ಎತ್ತಿಸಿದ ಧೋನಿ ಚಾಂಪಿಯನ್ ಸಿಕ್ಸ್‌ ಹಿಂದಿನ ಪ್ರೇರಣೆ ಪೊಲೀಸ್ ಠಾಣೆ

Webdunia
ಶನಿವಾರ, 17 ಸೆಪ್ಟಂಬರ್ 2016 (12:09 IST)
ಭಾರತ 2011ರ ವಿಶ್ವಕಪ್‌ನ್ನು ಎತ್ತಿ ಹಿಡಿದ ಕ್ಷಣವನ್ನು ನೀವ್ಯಾರು ಮರೆಯಲಾರಿರಿ. ನಾಯಕ ಧೋನಿ ಸಿಡಿಸಿದ ಸಿಕ್ಸರ್ ಅಂದು ಭಾರತಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದು ನಿಮಗೆಲ್ಲ ಗೊತ್ತೇ ಇದೆ. ಇದು ಅಂತಿಂಥ ಸಿಕ್ಸ್ ಅಲ್ಲ. ಭಾರತೀಯ ಕ್ರಿಕೆಟ್ ಅಭಿಮಾನಿಗಳ ನರನಾಡಿಗಳಲ್ಲಿ ಸಂಚಲನ ಮೂಡಿಸಿದ ಸಿಕ್ಸ್. ಈ ಸಿಕ್ಸರ್‌ಗೆ ಪ್ರೇರಣೆ ಯಾರು ಗೊತ್ತಾ? ಇದರ ಹಿಂದಿರುವ ನೋವಿನ ಕಥೆ ಏನು ಗೊತ್ತಾ? ಈ ಒಂದು ಸಿಕ್ಸರ್‌ಗಾಗಿ ಧೋನಿ ನಾಲ್ಕು ವರ್ಷ ಪ್ರಾಕ್ಟಿಸ್ ಮಾಡಿದ್ದೇಕೆ?

 
ಪ್ರತಿ ಯಶಸ್ಸಿನ ಹಿಂದೆ ಒಂದು ದೊಡ್ಡ ನೋವಿನ ಕಥೆ ಇರುತ್ತದೆ ಎನ್ನುತ್ತಾರೆ. ಹೌದು ಭಾರತಕ್ಕೆ ಎರಡನೆಯ ವಿಶ್ವ ಕಪ್ ದೊರಕಿಸಿಕೊಟ್ಟ ಚಾಂಪಿಯನ್ ಸಿಕ್ಸ್‌ನ್ನು ನೆನೆಪಿಸಿಕೊಂಡರೆ ಇವತ್ತು ಕೂಡ ಮೈ ರೋಮಾಂಚನಗೊಳ್ಳತ್ತದೆ. ಗೊತ್ತಿಲ್ಲದೇ 'ಭಲೇ ಧೋನಿ' ಎಂಬ ಉದ್ಗಾರ ನಮ್ಮಿಂದ ಹೊರಡುತ್ತದೆ. ಈ ಚಾಂಪಿಯನ್ ಸಿಕ್ಸ್ ಬಾರಿಸೋಕೆ ಧೋನಿ ಪಟ್ಟ ಕಷ್ಟ ಅಷ್ಟಿಟ್ಟಲ್ಲ. 9 ವರ್ಷಗಳ ಹಿಂದೆ ಅದೊಂದು ಘಟನೆ ನಡೆಯದೇ ಹೋಗಿದ್ದರೆ ಅವರು ಈ ಸಿಕ್ಸರ್ ಬಾರಿಸುತ್ತಿರಲಿಲ್ಲವೇನೋ? ಭಾರತ ಮತ್ತೊಂದು ವಿಶ್ವ ಕಪ್ ಎತ್ತಿ ಹಿಡಿಯುತ್ತಿರಲಿಲ್ಲವೇನೋ?
 
ಹಾಗಾದರೆ, ಯಾವ ಘಟನೆ ಆ ಸಿಕ್ಸರ್‌ಗೆ ಕಾರಣವಾಯ್ತು?  ಅನ್ನೋ ಕಥೆ ನಿಜಕ್ಕೂ ರೋಮಾಂಚನಕಾರಿಯಾಗಿದೆ.
 
ಅದು ಮಾರ್ಚ್ 17 , 2007. ಭಾರತ ಕ್ರಿಕೆಟ್ ಇತಿಹಾಸದಲ್ಲಿ ಕರಾಳ ದಿನ. ಅಂದು ಭಾರತ ಬಾಂಗ್ಲಾದ ಕೈಯ್ಯಲ್ಲಿ ಸೋತು ವಿಶ್ವ ಕಪ್ ಪಂದ್ಯವಳಿಯಿಂದ ಹೊರಬಿತ್ತು. ಸೌರವ್ ,ದ್ರಾವಿಡ್, ಸೇರಿದಂತೆ ಭಾರತ ಕ್ರಿಕೆಟ್ ತಂಡದ ಆಟಗಾರರು ನಿದ್ದೆ ಇಲ್ಲದೇ ಕಳೆದಿದ್ದು ಅದೇ ದಿನ. ಸರಿಯಾಗಿ 9 ವರ್ಷಗಳ ಹಿಂದೆ ನಡೆದ ಕೆಟ್ಟ ದಿನವನ್ನು ಧೋನಿ ಇಂದು ಕೂಡ ಮರೆಯಲಾರರು. ಅದನ್ನು ನೆನಪಿಸಿಕೊಂಡರೆ ಅವರಿಗೆ ನಿರಾಶೆ, ಆತಂಕ ಮನೆ ಮಾಡುತ್ತದೆ. ಆ ದಿನ ಧೋನಿ ಕನಸಲ್ಲೂ ಕಾಡೋಕೆ ಸುರು ಮಾಡಿಬಿಡುತ್ತದೆ. 
 
ಸೋತ ನೋವಿನಲ್ಲಿ ಭಾರತಕ್ಕೆ ಬಂದಳಿಸಿದ ತಂಡಕ್ಕೆ ಇಲ್ಲಿ ಕಾದಿದ್ದು ಅಪಮಾನ, ಭಾರತೀಯ ಅಭಿಮಾನಿಗಳ ಆಕ್ರೋಶ. ಸೌರವ್, ಸಚಿನ್, ದ್ರಾವಿಡ್ ಸೇರಿದಂತೆ ಕ್ರಿಕೆಟಿಗರ ಪೋಸ್ಟರ್ ಸುಟ್ಟು ಅಭಿಮಾನಿಗಳು ತಮ್ಮಲ್ಲಿದ್ದ ಕೋಪವನ್ನು ಹೊರ ಹಾಕಿದರು. ಧೋನಿ ಅವರು ರಾಂಚಿಯಲ್ಲಿ ಕಟ್ಟುತ್ತಿದ್ದ ಮನೆಯ ಮೇಲೂ ಕಲ್ಲೆಸೆಯಲಾಯಿತು. ಆಟಗಾರರನ್ನು ಭದ್ರತೆ ದೃಷ್ಟಿಯಿಂದ ದೆಹಲಿ ಪೊಲೀಸ್ ದೆಹಲಿ ಠಾಣೆಗೆ ಕಳುಹಿಸಲಾಯಿತು. 
 
ಠಾಣೆಯಲ್ಲಿ ಕುಳಿತ ಧೋನಿಗೆ ಮುಜುಗರವಾಗಿತ್ತು. ಆ ಒದ್ದಾಟ ಅವರಲ್ಲಿ ಕಿಚ್ಚನ್ನು ಹುಟ್ಟಿಸಿತು. ಭಾರತೀಯ ಕ್ರಿಕೆಟ್‌ಗೆ ಹೊಸ ಭಾಷ್ಯ ಬರೆಯೋಕೆ ನಾಂದಿಯಾಯಿತು. ಆ ಪೊಲೀಸ್ ಠಾಣೆಯೇ ಧೋನಿ ಚಾಂಪಿಯನ್ ಸಿಕ್ಸರ್ ಹೊಡೆಯಲು ಕಾರಣವಾಯ್ತು. ಧೋನಿ ಅಂದೇ ನಿರ್ಧರಿಸಿದ್ದರಂತೆ. ನಾನೊಬ್ಬ ಒಳ್ಳೆಯ ಕ್ರಿಕೆಟಿಗನಾಗಬೇಕು. ಭಾರತಕ್ಕೆ ವಿಶ್ವ ಕಪ್‌ನ್ನು ಗೆಲ್ಲಿಸಿಕೊಡಬೇಕು ಎಂದು ಪಣ ತೊಟ್ಟರಂತೆ ಅವರು. ಪೊಲೀಸ್ ಠಾಣೆಯಲ್ಲಾದ ಮುಜುಗರ, ಸಂದಿಗ್ಧ ಪರಿಸ್ಥಿತಿ ಅವರನ್ನು ಬಡೆದೆಬ್ಬಿಸಿ ನಿಲ್ಲಿಸಿತಂತೆ.
 
ಈ ಛಲ ಹೊತ್ತುಕೊಂಡು ನಾಲ್ಕು ವರ್ಷ ಕಠಿಣ ಪರಿಶ್ರಮಗೈದ ಧೋನಿ 2011ರ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕ್ ವಿರುದ್ಧ 
ಸಾಲಿಡ್ ಸಿಕ್ಸ್‌ನಿಂದ್ ಗೇಮ್ ಫಿನಿಷ್ ಮಾಡಿದರು. ಹಿಂದೆ ಕಲ್ಲು ಹೊಡೆಸಿಕೊಂಡ ಅಭಿಮಾನಿಗಳ ಹೆಗಲೇರಿ ರಾಜನಾಗಿ ಮೆರೆದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli: ವಿರಾಟ್ ಕೊಹ್ಲಿ ಕಟೌಟ್ ಮುಂದೆ ಕುರಿ ಕಡಿದ ಫ್ಯಾನ್ಸ್ ಅರೆಸ್ಟ್

Rohit Sharma: ರೋಹಿತ್ ಶರ್ಮಾ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಟೀಂ ಇಂಡಿಯಾ ಹಿರಿಯ ಆಟಗಾರ

Mohammed Siraj: ಮೊಹಮ್ಮದ್ ಸಿರಾಜ್ ಗೆ ವಜ್ರದ ಉಂಗುರ ಗಿಫ್ಟ್ ಮಾಡಿದ ರೋಹಿತ್ ಶರ್ಮಾ

IPL 2025: ಔಟ್ ಮಾಡೋ.. ಕಾವ್ಯಾ ಮಾರನ್ ಎಕ್ಸ್ ಪ್ರೆಷನ್ ಗೆಂದೇ ಕ್ಯಾಮರಾ ಇಡ್ಬೇಕು: ವಿಡಿಯೋ

DC vs SRH match: ಬೇಕಿದ್ದಾಗ ಯಾವತ್ತೂ ಆಡಲ್ಲ, ಟ್ರೋಲ್ ಆದ ಕೆಎಲ್ ರಾಹುಲ್

ಮುಂದಿನ ಸುದ್ದಿ
Show comments