ನಾಯಕ ರೋಹಿತ್ ಶರ್ಮಾಗೂ ಧೋನಿಯೇ ಬಾಸ್!

Webdunia
ಸೋಮವಾರ, 18 ಡಿಸೆಂಬರ್ 2017 (09:28 IST)
ವಿಶಾಖಪಟ್ಟಣ: ಟೀಂ ಇಂಡಿಯಾದಲ್ಲಿ ನಾಯಕ ಯಾರೇ ಆಗಿರಲಿ, ಫೀಲ್ಡಿಂಗ್ ಮಾಡುವಾಗ ಬಾಸ್ ನಾನೇ ಎನ್ನುವುದನ್ನು ಧೋನಿ ನಿನ್ನೆಯ ಪಂದ್ಯದಲ್ಲಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
 

ನಿನ್ನೆ ಶ್ರೀಲಂಕಾ ಆರಂಭಿಕರು ಚೆನ್ನಾಗಿ ಆಡುತ್ತಿದ್ದರು. ರನ್ ರೇಟ್ ಸರಾಸರಿ 6 ರ ಮೇಲಿತ್ತು. ಆಗ ಧೋನಿಯ ಸಲಹೆ ಮೇರೆಗೆ ಕುಲದೀಪ್ ಯಾದವ್ ರನ್ನು ಕಣಕ್ಕಿಳಿಸಿದ ರೋಹಿತ್ ಯಶಸ್ಸು ಕಂಡರು. ಇದಕ್ಕೆ ಮೊದಲು ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯು ಗೆ ಮನವಿ ಸಲ್ಲಿಸಿದಾಗ ಅಂಪಾಯರ್ ಪುರಸ್ಕರಿಸಲಿಲ್ಲ.  ಈ ಸಂದರ್ಭದಲ್ಲಿ ರಿವ್ಯೂ ಬೇಡ ಎಂದು ರೋಹಿತ್ ರನ್ನು ತಡೆದರು. ರಿಪ್ಲೇಯಲ್ಲಿ ನೋಡಿದಾಗ ಧೋನಿ ತೀರ್ಮಾನ ಸರಿಯಾಗಿಯೇ ಇತ್ತು.

ಇದರ ನಡುವೆ ಆಗಾಗ ಫೀಲ್ಡಿಂಗ್ ಸೆಟ್ ಮಾಡಲು, ಬೌಲರ್ ಗಳನ್ನು ಬದಲಾಯಿಸಲು ಧೋನಿಯೇ ರೋಹಿತ್ ಗೆ ಮಾರ್ಗದರ್ಶ ನೀಡುತ್ತಿದ್ದುದು ಕಂಡುಬರುತ್ತಿತ್ತು. ಕೊಹ್ಲಿ ನಾಯಕನಾಗಿದ್ದರೂ ಧೋನಿಯೇ ಹೆಚ್ಚು ಫೀಲ್ಡಿಂಗ್ ಸೆಟ್ ಮಾಡುವ ಕೆಲಸ ಮಾಡುತ್ತಿರುತ್ತಾರೆ ಎನ್ನುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮೆಸ್ಸಿ ಕಾರ್ಯಕ್ರಮಕ್ಕೆ ನಿರಾಕರಣೆ, ಮಮತಾ ಸರ್ಕಾರದ ವಿರುದ್ಧ ರಾಜ್ಯಪಾಲರ ಪ್ರಶ್ನೆ

ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನನ್ನೂ ಇದ್ದೂ ಇಲ್ಲದಂತೆ ಸೈಡ್ ಲೈನ್ ಮಾಡುತ್ತಿದ್ದಾರಾ ಗಂಭೀರ್

Video: ಮೆಸ್ಸಿಯನ್ನು ನೋಡಲು ಬಿಡಲಿಲ್ಲ ಎಂದು ನಮ್ಮದೇ ಫುಟ್ಬಾಲ್ ಮೈದಾನವನ್ನು ಪುಡಿಗಟ್ಟಿದ ಯುವಕರು

ಭಾರತಕ್ಕೆ ಬಂದ ಲಿಯೋನೆಲ್ ಮೆಸ್ಸಿಗಾಗಿ ಹನಿಮೂನ್ ಕ್ಯಾನ್ಸಲ್ ಮಾಡಿದ ನವವಿವಾಹಿತರು

Video: ಪಂದ್ಯ ಮುಗಿದರೂ ಇಳಿಯದ ಗಂಭೀರ್ ಸಿಟ್ಟು: ದ್ರಾವಿಡ್ ಹೀಗರ್ಲಿಲ್ಲ ಎಂದ ಫ್ಯಾನ್ಸ್

ಮುಂದಿನ ಸುದ್ದಿ
Show comments