Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾಗೆ ಸೇವೆ ಮಾಡಿದ್ದಕ್ಕೆ ಧೋನಿಗೆ ಸಿಕ್ಕಿತು ಗಿಫ್ಟ್!

ಟೀಂ ಇಂಡಿಯಾಗೆ ಸೇವೆ ಮಾಡಿದ್ದಕ್ಕೆ ಧೋನಿಗೆ ಸಿಕ್ಕಿತು ಗಿಫ್ಟ್!
NewDelhi , ಗುರುವಾರ, 11 ಮೇ 2017 (10:16 IST)
ನವದೆಹಲಿ: ಟೀಂ ಇಂಡಿಯಾಗೆ ಇದುವರೆಗೆ ಧೋನಿ ಮಾಡಿದ ಸಾಧನೆ ಅಪಾರ. ಆ ಸಾಧನೆಯನ್ನು ಗುರುತಿಸಿ ಅವರಿಗೊಂದು ದುಬಾರಿ ಗಿಫ್ಟ್ ಸಿಕ್ಕಿದೆ.

 
ಎಲಾನ್ ಗ್ರೂಪ್ ಸಂಸ್ಥೆ ಗುರುಗಾಂವ್ ನಲ್ಲಿ ತಾನು ಮಾಡುತ್ತಿರುವ ಹೊಸ ಅಪಾರ್ಟ್ ಮೆಂಟ್ ಯೋಜನೆಯಲ್ಲಿ ಧೋನಿಗೆ ಒಂದು ದುಬಾರಿ ಬೆಲೆಯ ಅಪಾರ್ಟ್ ಮೆಂಟ್ ಗಿಫ್ಟ್ ಆಗಿ ನೀಡಿದೆ.

‘ಭಾರತೀಯ ಕ್ರಿಕೆಟಿಗೆ ಅವರ ಅಪಾರ ಸೇವೆಯನ್ನು ಪರಿಗಣಿಸಿ ಈ ಬಹುಮಾನ ನೀಡಲಾಗಿದೆ. ಇನ್ನು ಮುಂದೆಯೂ ಅವರು ಯುವ ಆಟಗಾರರಿಗೆ ಮಾದರಿಯಾಗಿರಲಿ’ ಎಂದು ಸಂಸ್ಥೆಯ ಮುಖ್ಯಸ್ಥ ರಾಕೇಶ್ ಕಪೂರ್ ತಿಳಿಸಿದ್ದಾರೆ.

ಸುಮಾರು ಸಾವಿರ ಚದರ ಅಡಿಯ ಅಪಾರ್ಟ್ ಮೆಂಟ್ ಇದಾಗಿದ್ದು, 1.5 ಕೋಟಿ ರೂ. ಮೌಲ್ಯದ್ದಾಗಿದೆ. ಎಲಾನ್ ಮಿರಾಕಲ್ ಎಂಬ ಈ ಅಪಾರ್ಟ್ ಮೆಂಟ್ ನ ಒಂದು ಫ್ಲೋರ್ ನ್ನು ಭಾರತೀಯ ಕ್ರಿಕೆಟ್ ಗೇ ಅರ್ಪಿಸಲಾಗುವುದು ಎಂದು ಸಂಸ್ಥೆ ಹೇಳಿಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿಗೆ ಟೀಕೆಗಳ ಸುರಿಮಳೆ