Webdunia - Bharat's app for daily news and videos

Install App

ಮೊದಲ ಏಕದಿನ ಸರಣಿ ಗೆದ್ದ ವಿರಾಟ್ ಕೊಹ್ಲಿಗೆ ಧೋನಿ ಕೊಟ್ಟ ವಿಶೇಷ ಉಡುಗೊರೆ!

Webdunia
ಸೋಮವಾರ, 23 ಜನವರಿ 2017 (16:30 IST)
ಮುಂಬೈ: ಕಟಕ್ ನಲ್ಲಿ ಭಾರತ ದ್ವಿತೀಯ ಏಕದಿನ ಪಂದ್ಯ ಗೆಲ್ಲುವುದರೊಂದಿಗೆ ಇಂಗ್ಲೆಂಡ್ ವಿರುದ್ಧ ಸರಣಿ ಕೈವಶ ಮಾಡಿಕೊಂಡಿತು. ಈ ಸರಣಿ ಗೆಲುವು ವಿರಾಟ್ ಕೊಹ್ಲಿಗೆ ನಾಯಕನಾಗಿ ಮೊದಲ ಏಕದಿನ ಸರಣಿ ಗೆಲುವು. ಇದಕ್ಕಾಗಿ ಮಾಜಿ ನಾಯಕ ಧೋನಿ ಕೊಟ್ಟ ಉಡುಗೊರೆ ಏನೆಂದು ನೀವು ತಿಳಿದುಕೊಳ್ಳಲೇಬೇಕು.


ನಾಯಕರಾಗಿದ್ದಾಗ ಧೋನಿ ಸಾಮಾನ್ಯವಾಗಿ ಯಾವುದೇ ಸರಣಿ ಗೆಲುವಿನ ನಂತರ ನೆನಪಿಗಾಗಿ ಸ್ಟಂಪ್ ಕಿತ್ತುಕೊಂಡು ಹೋಗುತ್ತಿದ್ದರು. ಆದರೆ ಇತ್ತೀಚೆಗೆ ಸ್ಟಂಪ್ ಗೆ ಎಲ್ ಇಡಿ ಬಲ್ಬ್ ಬಳಸುವ ಕಾರಣ, ಆಟಗಾರರು ಸ್ಟಂಪ್ ಕೀಳುವಂತಿಲ್ಲ.  ದ್ವಿತೀಯ ಏಕದಿನ ಪಂದ್ಯ ಗೆದ್ದ ಮೇಲೆ ಧೋನಿ ತಾವು ಸ್ಟಂಪ್ ಕೀಳಲಿಲ್ಲ. ಅದರ ಬದಲು ಆ ಪಂದ್ಯದಲ್ಲಿ ಬಳಸಿ ಬಾಲ್ ನ್ನು ಪಡೆದು ಅದರ ಮೇಲೆ ತಮ್ಮ ಸಹಿ ಹಾಕಿ ಕೊಹ್ಲಿಗೆ ಉಡುಗೊರೆಯಾಗಿ ನೀಡಿದರು.

ಉಡುಗೊರೆಯನ್ನು ನಗು ನಗುತ್ತಲೇ ಸ್ವೀಕರಿಸಿದ್ದ ಕೊಹ್ಲಿ ಈ ವಿಷಯವನ್ನು ಕೋಲ್ಕೊತ್ತಾ ಪಂದ್ಯದ ನಂತರ ಬಹಿರಂಗಪಡಿಸಿದ್ದರು. “ಹೌದು. ಎಂಎಸ್ ನನಗೆ ಕಟಕ್ ನಲ್ಲಿ ಬಾಲ್ ಉಡುಗೊರೆಯಾಗಿ ನೀಡಿದರು. ಯಾಕೆಂದರೆ ಈ ದಿನಗಳಲ್ಲಿ ಸ್ಟಂಪ್ ತುಂಬಾ ದುಬಾರಿ. ಹಾಗಾಗಿ ಧೋನಿ ಇದು ನಿನ್ನ ಮೊದಲ ಸರಣಿ ಗೆಲುವು. ಇದು ನಿನಗೆ ವಿಶೇಷ ಎನ್ನುತ್ತಾ ತಮ್ಮ ಸಹಿ ಹಾಕಿದ ಬಾಲ್ ಕೊಟ್ಟರು” ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವೈಭವ್‌ ಸೂರ್ಯವಂಶಿಯ ಹಾದಿಯಲ್ಲಿ ಸ್ನೇಹಿತ ಅಯಾನ್‌ ರಾಜ್‌: ತ್ರಿಶತಕ ಸಿಡಿಸಿದ ಬಿಹಾರದ 13ರ ಪೋರ

ಭಾರತ, ಇಂಗ್ಲೆಂಡ್ ಸರಣಿಗೆ ನನ್ನ ಹೆಸರಿಡಬೇಡಿ ಎಂದ ಸಚಿನ್ ತೆಂಡುಲ್ಕರ್: ಕಾರಣ ಕೇಳಿದ್ರೆ ಹೆಮ್ಮೆ

Rohit Sharma: ಟೀಂ ಇಂಡಿಯಾ ಬಸ್ ನಲ್ಲಿ ರೋಹಿತ್ ಶರ್ಮಾ ಸೀಟ್ ಈಗ ಯಾರದ್ದು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ಮುಂದಿನ ಸುದ್ದಿ
Show comments