Select Your Language

Notifications

webdunia
webdunia
webdunia
webdunia

ಧೋನಿ ಕಾರು ಅಡ್ಡಗಟ್ಟಿದ ಹುಚ್ಚು ಅಭಿಮಾನಿ

ಧೋನಿ ಕಾರು ಅಡ್ಡಗಟ್ಟಿದ ಹುಚ್ಚು ಅಭಿಮಾನಿ
Ranchi , ಶುಕ್ರವಾರ, 10 ಮಾರ್ಚ್ 2017 (09:27 IST)
ರಾಂಚಿ: ಮಹೇಂದ್ರ ಸಿಂಗ್ ಧೋನಿ ಹುಚ್ಚು ಅಭಿಮಾನಿಯೊಬ್ಬನ ಬಗ್ಗೆ ನಿನ್ನೆಯಷ್ಟೇ ಒಂದು ವರದಿ ಓದಿದ್ದೇವೆ. ಇದು ಮತ್ತೊಬ್ಬ ಹುಚ್ಚು ಅಭಿಮಾನಿಯೊಬ್ಬನ ಕತೆ. ಅಷ್ಟಕ್ಕೂ ಆತ ಮಾಡಿದ್ದೇನು? ಈ ಸ್ಟೋರಿ ಓದಿ.

 
ಧೋನಿ ರಾಂಚಿಯ ವಿಮಾನ ನಿಲ್ದಾಣದಿಂದ ತಮ್ಮ ಹೆಮ್ಮೆಯ ಹಮ್ಮರ್ ಕಾರ್ ನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲೇ ಧೋನಿಯನ್ನು ನೋಡಿದ್ದ ಅವರ ಅಭಿಮಾನಿ ಹುಡುಗಿ, ಧೋನಿಯನ್ನು ಹಿಂಬಾಲಿಸಿದ್ದಳು.

ಧೋನಿ ಹಮ್ಮರ್ ಚಲಾಯಿಸಿಕೊಂಡು ವಿಮಾನ ನಿಲ್ದಾಣದಿಂದ ಹೊರ ಹೋಗುವಾಗ ಆಕೆ ಹಮ್ಮರ್ ಗೆ ಅಡ್ಡ ನಿಂತು ಧೋನಿಯನ್ನು ತಡೆಯುವ ಪ್ರಯತ್ನ ಮಾಡಿದ್ದಳು. ಆದರೆ ಭದ್ರತಾ ಸಿಬ್ಬಂದಿಗಳು ಆಕೆಯನ್ನು ತಡೆದರು. ಈ ವೇಳೆ ನಡೆದ ಚಕಮಕಿಯಲ್ಲಿ ಆಕೆಯ ಬ್ಯಾಗ್ ಕೆಳ ಬಿದ್ದು, ಅದರ ಮೇಲೆ ಧೋನಿ ಕಾರು ಹರಿದಿತ್ತು.

ಕಾರು ಮುನ್ನಡೆಸಿದ ನಂತರ ಹಿಂತಿರುಗಿ ನೋಡಿದ ನಂತರ ಹುಡುಗಿಗೆ ಯಾವುದೇ ಅಪಾಯವಾಗಿಲ್ಲವೆಂದು ಖಚಿತಪಡಿಸಿಕೊಂಡು ಧೋನಿ ತಮ್ಮ ಪಾಡಿಗೆ ತಾವು ಮರಳಿದರು. ಇತ್ತ ಹುಡುಗಿ ಮಾತ್ರ ಧೋನಿಯ ಜತೆ ಸೆಲ್ಫಿ,  ಅಥವಾ ಅಟೋಗ್ರಾಫ್ ಪಡೆಯಲಾಗದೇ ನಿರಾಸೆಯಿಂದ ಕುಳಿತಳು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿಯನ್ನೇ ತಪ್ಪಿತಸ್ಥ ಎಂದಿದ್ದಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಬಿಸಿಸಿಐ ಕೆಂಡ