ವಕೀಲಿ ವೃತ್ತಿಗಾಗಿ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಕ್ರಿಕೆಟರ್!

Webdunia
ಗುರುವಾರ, 27 ಏಪ್ರಿಲ್ 2017 (07:38 IST)
ಲಂಡನ್: ಕ್ರಿಕೆಟಿಗನಾಗುವುದೇ ಅದೃಷ್ಟ ಎನ್ನುವ ಈ ಕಾಲದಲ್ಲಿ ಸಾಕಷ್ಟು ಅವಕಾಶಗಳಿದ್ದೂ,  ಕ್ರಿಕೆಟಿಗರೊಬ್ಬರು ನಿವೃತ್ತಿ ಘೋಷಿಸಿ ವಕೀಲಿ ವೃತ್ತಿ ಅಭ್ಯಾಸ ಮಾಡಲು ಹೊರಟಿದ್ದಾರೆ.

 
ಇಂಗ್ಲೆಂಡ್ ಆಟಗಾರ ಝಫರ್ ಅನ್ಸಾರಿ ಈ ಕ್ರಿಕೆಟಿಗ. ಅವರು ಇತ್ತೀಚೆಗಷ್ಟೇ ಭಾರತ ಪ್ರವಾಸ ಮಾಡಿದ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದರು. ಆಲ್ ರೌಂಡರ್ ಆಗಿರುವ ಅನ್ಸಾರಿಗೆ ಈಗ ಕಾನೂನು ಓದುವ ಮನಸ್ಸಾಗಿದೆಯಂತೆ.

ಅದಕ್ಕೇ 25 ವರ್ಷಕ್ಕೇ ಕ್ರಿಕೆಟ್ ಗೆ ಗುಡ್ ಬೈ ಹೇಳಿ ಪುಸ್ತಕ ಹಿಡಿಯಲು ಹೊರಟಿದ್ದಾರೆ. 8 ನೇ ವರ್ಷದಿಂದ ಕ್ರಿಕೆಟ್ ಬದುಕು ಪ್ರಾರಂಭಿಸಿದ ಅನ್ಸಾರಿ ಏಳು ವರ್ಷದಿಂದ ಸ್ಪರ್ಧಾತ್ಮಕ ಕ್ರಿಕೆಟ್ ನಲ್ಲಿದ್ದಾರೆ.

‘ಕ್ರಿಕೆಟ್ ಬಿಡುವುದು ನನಗೆ ಬೇಸರದ ಸಂಗತಿಯಾಗಿತ್ತು. ಅಷ್ಟಕ್ಕೂ ಅದುವೇ ನನ್ನ ಜೀವನದ ಪರಮ ಗುರಿಯಾಗಿರಲಿಲ್ಲ. ನನಗೆ ಬೇರೆ ಗುರಿಯಿತ್ತು. ಅದಕ್ಕೇ ಕ್ರಿಕೆಟ್ ಬಿಡುತ್ತಿದ್ದೇನೆ’ ಎಂದು ಅನ್ಸಾರಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿಶೇಷ ಸಾಮಾರ್ಥ್ಯವುಳ್ಳ ಅಭಿಮಾನಿಯೊಂದಿಗಿನ ನಡೆಗೆ ವಿರಾಟ್, ಅನುಷ್ಕಾಗೆ ಭಾರೀ ಟೀಕೆ

ಐಪಿಎಲ್‌ ಮಿನಿ ಹರಾಜಿನಲ್ಲಿ ಕನ್ನಡಿಗರಿಗೆ ಭಾರೀ ನಿರಾಸೆ: ಆರ್‌ಸಿಬಿಗೆ ಘಟಾನುಘಟಿಗಳ ಎಂಟ್ರಿ

IND vs SA: ಸರಣಿ ಗೆಲ್ಲುವ ಉತ್ಸಾಹದಲ್ಲಿರುವ ಟೀಂ ಇಂಡಿಯಾಗೆ ಕ್ಯಾಪ್ಟನ್, ವೈಸ್ ಕ್ಯಾಪ್ಟನ್ ನದ್ದೇ ಚಿಂತೆ

ಐಪಿಎಲ್ ಹರಾಜು ಯಾಕೆ ಭಾರತದಲ್ಲಿ ನಡೆಯಲ್ಲ: ಪ್ರಿಯಾಂಕ್ ಖರ್ಗೆ ತಕರಾರು

ಆರ್‌ಸಿಬಿ ತವರು ನೆಲದಲ್ಲಿಯೇ ಐಪಿಎಲ್‌ ಉದ್ಘಾಟನಾ ಪಂದ್ಯ

ಮುಂದಿನ ಸುದ್ದಿ
Show comments