ಬಾಂಗ್ಲಾದೇಶ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ವಿಕೆಟ್ ಕೀಪರ್ ಗಳೊಳಗೇ ಪೈಪೋಟಿ!

Webdunia
ಬುಧವಾರ, 1 ಫೆಬ್ರವರಿ 2017 (09:49 IST)
ಮುಂಬೈ: ಎಲ್ಲರೂ ಇದನ್ನು ಬಹುಶಃ ಮರೆತೇ ಬಿಟ್ಟಿದ್ದಾರೆ. ಕ್ರಿಕೆಟ್ ಪ್ರಿಯರು ಎದುರು ನೋಡುತ್ತಿರುವುದು ಆಸ್ಟ್ರೇಲಿಯಾ ಸರಣಿಯನ್ನೇ. ಅದಕ್ಕಿಂತ ಮೊದಲು ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಏಕಮಾತ್ರ ಟೆಸ್ಟ್ ಸರಣಿಗೆ ಭಾರತ ತಂಡದೊಳಗೇ ನಡೆದಿದೆ.

 
ಅರೇ ಏನಾಯಿತು? ಟೀಂ ಇಂಡಿಯಾ ಆಟಗಾರರಲ್ಲಿ ಒಡಕು ಮೂಡಿತೇ ಎಂದು ಗಾಬರಿಯಾಗಬೇಡಿ. ಅಸಲಿಗೆ ಈಗ ಭಾರತ ತಂಡಕ್ಕೆ ವಿಕೆಟ್ ಕೀಪರ್ ಆಗಿ ಯಾರನ್ನು ಆಯ್ಕೆ ಮಾಡುವುದು ಎಂಬ ಸಂಕಟ ಆಯ್ಕೆ ಸಮಿತಿಯದ್ದಾಗಿತ್ತು. ಇಂಗ್ಲೆಂಡ್ ಸರಣಿಯಲ್ಲಿ ಉತ್ತಮವಾಗಿ ಆಡಿದ ಪಾರ್ಥಿವ್ ಪಟೇಲ್ ರನ್ನು ಆಯ್ಕೆ ಮಾಡುವುದೋ, ಖಾಯಂ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾಗೆ ಮಣೆ ಹಾಕುವುದೋ ಎಂಬ ತಲೆನೋವು ಕಾಡಿತ್ತು.

ಆದರೆ ನಿನ್ನೆ ಸಭೆ ಸೇರಿದ ಆಯ್ಕೆ ಸಮಿತಿ ಪಾರ್ಥಿವ್ ಗೆ ಕೊಕ್ ನೀಡಿ ಸಹಾರನ್ನು ಆಯ್ಕೆ ಮಾಡಿದೆ. ಅಚ್ಚರಿಯೆಂದರೆ ತಮಿಳುನಾಡಿನ ಅಭಿನವ್ ಮುಕುಂದ್ ಗೆ ಬುಲಾವ್ ನೀಡಲಾಗಿದೆ. ಸ್ಪಿನ್ ಧ್ವಯರಾದ ರವಿಚಂದ್ರನ್ ಅಶ್ವಿನ್,  ರವೀಂದ್ರ ಜಡೇಜಾ ಜತೆಗೆ ಅಮಿತ್ ಮಿಶ್ರಾಗೂ ಸ್ಥಾನ ಕಲ್ಪಿಸಲಾಗಿದೆ. ಕರ್ನಾಟಕದ ಕೆಎಲ್ ರಾಹುಲ್, ಕರುಣ್ ನಾಯರ್ ಸ್ಥಾನ ಪಡೆದಿದ್ದಾರೆ. ತಂಡದ ವಿವರ ಇಂತಿದೆ.

ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್,  ಮುರಳಿ ವಿಜಯ್, ಚೇತೇಶ್ವರ ಪೂಜಾರ, ಅಜಿಂಕ್ಯ ರೆಹಾನೆ, ವೃದ್ಧಿಮಾನ್ ಸಹಾ, ರವಿಚಂದ್ರನ್ ಅಶ್ವಿನ್,  ರವೀಂದ್ರ ಜಡೇಜಾ,  ಜಯಂತ್ ಯಾದವ್,  ಅಮಿತ್ ಮಿಶ್ರಾ, ಇಶಾಂತ್ ಶರ್ಮಾ,  ಭುವನೇಶ್ವರ ಕುಮಾರ್, ಅಭಿನವ್ ಮುಕುಂದ್,  ಉಮೇಶ್ ಯಾದವ್, ಕರುಣ್ ನಾಯರ್,  ಹಾರ್ದಿಕ್ ಪಾಂಡ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯಾ ಕಪ್ ಟ್ರೋಫಿ ಕೊಡ್ತೀನಿ ಆದ್ರೆ ಒಂದು ಷರತ್ತು: ಮೊಹ್ಸಿನ್ ನಖ್ವಿ ಕೊಬ್ಬು ಎಷ್ಟಿದೆ ನೋಡಿ

ಮೂವರು ಕ್ರಿಕೆಟಿಗರ ಭವಿಷ್ಯವನ್ನೇ ಕೊಂದು ಹಾಕಿದ ಬಿಸಿಸಿಐ: ಇದೆಂಥಾ ಅನ್ಯಾಯ

ಮೊದಲ ಪಂದ್ಯದಲ್ಲಿ ಫೇಲ್ ಆಗಿದ್ದಕ್ಕೆ ರೋಹಿತ್ ಶರ್ಮಾರದ್ದು ಏನು ಕಮಿಟ್ ಮೆಂಟ್

ರಿಷಬ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌, ಗಾಯದಿಂದ ಚೇತರಿಸಿಕೊಂಡ ಪಂತ್‌ಗೆ ಬಿಸಿಸಿಐ ಹೊಸ ಜವಾಬ್ದಾರಿ

ವೇತನ ಮಾತ್ರ ಪುರುಷರಷ್ಟೇ ಬೇಕು, ಪರ್ಫಾರ್ಮೆನ್ಸ್ ಝೀರೋ: ಟ್ರೋಲ್ ಆದ ಮಹಿಳಾ ಕ್ರಿಕೆಟಿಗರು

ಮುಂದಿನ ಸುದ್ದಿ
Show comments