Select Your Language

Notifications

webdunia
webdunia
webdunia
webdunia

ಗೇಲ್ ಬಾರಿಸಿದ ಚೆಂಡನ್ನು ತರಲು ನದಿಗೆ ಹಾರಿದ ಅಭಿಮಾನಿ!

ಗೇಲ್ ಬಾರಿಸಿದ ಚೆಂಡನ್ನು ತರಲು ನದಿಗೆ ಹಾರಿದ ಅಭಿಮಾನಿ!
ಟೌಂಟನ್ , ಮಂಗಳವಾರ, 2 ಜೂನ್ 2015 (11:51 IST)
ವೆಸ್ಟ್ಇಂಡಿಸ್ , ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಸ್ಪೋಟಕ ಬ್ಯಾಟ್ಸಮನ್ ಕ್ರಿಸ್ ಗೇಲ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ!. ಅವರು ಬಾರಿಸಿದ ಸಿಕ್ಸರ್ ಕಣ್ಣಿಗೆ ಕಾಣದಷ್ಟು ದೂರ ಹೋಗಿ ಬೀಳುವುದು ಸಾಮಾನ್ಯವೇ ಬಿಡಿ. ಅದನ್ನು ಹುಡುಕುವ ಸಾಹಸಕ್ಕೂ ಯಾರೂ ಹೋಗಲಾರರು.
 

 

 
ಆದರೆ ಗೇಲ್ ಅವರ ಕಟ್ಟಾ ಅಭಿಮಾನಿಯೊಬ್ಬ ಗೇಲ್ ಬಾರಿಸಿದ ಚೆಂಡನ್ನು ಮರಳಿ ತರುವ ರಿಸ್ಕ್ ತೆಗೆದುಕೊಂದ. ಅದರಲ್ಲಿ ಯಶಸ್ವಿಯೂ ಆದ. ಅಷ್ಟಕ್ಕೂ ಆತ  ಏನು ಮಾಡಿದ ಗೊತ್ತಾ?
 
ಭಾನುವಾರ ಕೆಂಟ್ ವಿರುದ್ಧದ ಟಿ20 ಪಂದ್ಯದಲ್ಲಿ ಸಾಮರ್‌ಸೆಟ್  ತಂಡದ ಪರ ಆಡುತ್ತಿದ್ದ ಗೇಲ್ ಸಿಕ್ಸರ್ ಒಂದನ್ನು ಎತ್ತಿದರು. ಆ ಚೆಂಡು ಕ್ರೀಡಾಂಗಣವನ್ನು ದಾಟಿ ಹತ್ತಿರದಲ್ಲಿ ಹರಿಯುತ್ತಿದ್ದ ನದಿಯೊಂದರಲ್ಲಿ ಬಿತ್ತು. ಚೆಂಡು ಎಲ್ಲಿ ಹೋಗಿ ಬೀಳುತ್ತದೆ ಎಂದು ನೋಡುತ್ತಿದ್ದ ಅವರ ಅಭಿಮಾನಿ ಕಾರ್ನವೆಲ್ ಮಾರ್ಟಿನ್ ಎಂಬ ಯುವಕ ತಣ್ಣಗೆ ಕೊರೆಯುವ ಚಳಿಯಲ್ಲೂ ನದಿಗೆ ಹಾರಿ ಬಾಲ್ ಎತ್ತಿಕೊಂಡೇ ಮರಳಿದ. 
 
ಮಾರ್ಟಿನ್ ಅಭಿಮಾನಕ್ಕೆ ಮನಸೋತ ಗೇಲ್ ಅದೇ ಬಾಲ್ ಮೇಲೆ ಹಸ್ತಾಕ್ಷರ ಬರೆದು ಅವನಿಗೆ ಉಡುಗೊರೆಯಾಗಿ ನೀಡಿದರು. ತನ್ನ ಮೆಚ್ಚಿನ ಕ್ರಿಕೆಟರ್ ಜತೆ ಮಾರ್ಟಿನ್ ಸೆಲ್ಫ್ ತೆಗೆದುಕೊಂಡು ಸಂಭ್ರಮಿಸಿದ.
 ಈ ಪಂದ್ಯದಲ್ಲಿ ಗೇಲ್ ಕೇವಲ 61 ಎಸೆತಗಳಲ್ಲಿ 151 ರನ್ ಚಚ್ಚಿದರು. ಆದರೆ ಅವರ ತಂಡ 3 ರನ್‌ಗಳ ಸೋಲನ್ನು ಅನುಭವಿಸಿತು. 

Share this Story:

Follow Webdunia kannada