Select Your Language

Notifications

webdunia
webdunia
webdunia
webdunia

ಬ್ರೆಂಡನ್ ಮೆಕ್ಕಲಂ ಜೀವನ ಚರಿತ್ರೆ ಡಿಕ್ಲೇರ್ಡ್

ಬ್ರೆಂಡನ್ ಮೆಕ್ಕಲಂ ಜೀವನ ಚರಿತ್ರೆ ಡಿಕ್ಲೇರ್ಡ್
Wellington , ಮಂಗಳವಾರ, 25 ಅಕ್ಟೋಬರ್ 2016 (13:39 IST)
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕ್ಕಲಂ ಜೀವನ ಚರಿತ್ರೆ ಬಿಡುಗಡೆಯಾಗಿದೆ. ಇದರಲ್ಲಿ ಅವರು ಪ್ರಮುಖವಾಗಿ ರಾಸ್ ಟೇಲರ್ ನಾಯಕತ್ವದ ಬಗ್ಗೆ ಉಲ್ಲೇಖಿಸಿದ್ದಾರೆ.

ಡೇನಿಯಲ್ ವೆಟೊರಿ ನಂತರ ನಾಯಕನ ಚುಕ್ಕಾಣಿ ಹಿಡಿದಿದ್ದ ರಾಸ್ ಟೇಲರ್ ತಂಡದೊಂದಿಗೆ ಸರಿಯಾಗಿ ಸಂವಹನ ನಡೆಸುತ್ತಿರಲಿಲ್ಲ ಎಂದು ಅವರು ದೂರಿದ್ದಾರೆ. ಅಲ್ಲದೆ ತಮ್ಮ ಮತ್ತು ಟೇಲರ್ ನಡುವಿನ ವೈಮನಸ್ಯದ ಬಗ್ಗೆ ಬರೆದಿದ್ದಾರೆ.

‘ತಂಡದ  ಸಭೆಗಳಲ್ಲಿ ಮುಖ್ಯ ಕೋಚ್ ಮೈಕ್ ಹಸನ್ ಮಾತನಾಡುತ್ತಿದ್ದರು. ನಮ್ಮೆಲ್ಲರ ಅಭಿಪ್ರಾಯಗಳನ್ನು ರಾಸ್ ಕೇಳುತ್ತಿರಲಿಲ್ಲ. ಅವರು ಏನೂ ಮಾತನಾಡುತ್ತಿರಲಿಲ್ಲ. ಅವರು ಹೇಳುತ್ತಿದ್ದುದು ಒಂದೇ, ನಾನು ತಂಡದ ನಾಯಕ ಇದು ನಮ್ಮ ಯೋಜನೆ. ಈ ರೀತಿ ನಾವು ಸಾಗಬೇಕು ಎಂದು. ಆದರೆ ಸಹ ಆಟಗಾರರೊಂದಿಗೆ ಏನನ್ನೂ ಹೇಳುತ್ತಿರಲಿಲ್ಲ” ಎಂದು ಪುಸ್ತಕದಲ್ಲಿ ಅವರು ಬರೆದುಕೊಂಡಿದ್ದಾರೆ.

ಟೇಲರ್ ನಾಯಕತ್ವದ ಬಗ್ಗೆ ಅವರು ನಾಯಕರಾಗಿದ್ದಾಗಲೇ ಮೆಕ್ಕಲಂ ಬಹಿರಂಗವಾಗಿ ಟೀಕಿಸಿದ್ದರು.  ಇದೇ ಕಾರಣಕ್ಕೆ ಅವರು ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು ಎನ್ನಲಾಗುತ್ತಿತ್ತು. ಅವರ ನಂತರ ಮೆಕ್ಕಲಂ ನ್ಯೂಜಿಲೆಂಡ್ ತಂಡದ ಚುಕ್ಕಾಣಿ ಹಿಡಿದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ನಾಲ್ಕನೇ ಏಕದಿನ ಆಡಲಿರುವ ಟೀಂ ಇಂಡಿಯಾ