ಬ್ರೇಕಿಂಗ್!! ಧೋನಿ ನಾಯಕತ್ವ ತ್ಯಜಿಸುವಂತೆ ಸೂಚಿಸಿದ್ದು ಬಿಸಿಸಿಐ?!

Webdunia
ಸೋಮವಾರ, 9 ಜನವರಿ 2017 (10:30 IST)
ಮುಂಬೈ: ಭಾರತ ಸೀಮಿತ ಓವರ್ ಗಳ ನಾಯಕ ಧೋನಿ ನಾಯಕತ್ವ ತ್ಯಜಿಸಿದ್ದು ಎಲ್ಲೆಡೆ ಸುದ್ದಿಯಾಗಿದ್ದು, ಕೊಹ್ಲಿಗಾಗಿ ಅವರೇ ಸ್ಥಾನ ಬಿಟ್ಟುಕೊಟ್ಟರು ಎಂಬ ಮಾತುಗಳು ಕೇಳಿಬರುತ್ತಿತ್ತು. ಆದರೆ ಇದೀಗ ಬಂದ ವರದಿಯನ್ನು ನಂಬುವುದಾದರೆ, ಸ್ವತಃ ಬಿಸಿಸಿಐ ಧೋನಿಗೆ ನಾಯಕತ್ವಕ್ಕೆ ರಾಜೀನಾಮೆ ನೀಡಲು ಸೂಚಿಸಿತ್ತಂತೆ!


ಇದಕ್ಕೆ ಕಳೆದ ವರ್ಷ ಸೆಪ್ಟೆಂಬರ್ ನಲ್ಲೇ ವೇದಿಕೆ ಸಿದ್ಧವಾಗಿತ್ತಂತೆ. ಮೊನ್ನೆ ನಡೆದ ಜಾರ್ಖಂಡ್ ರಣಜಿ ಸೆಮಿಫೈನಲ್ ನಲ್ಲಿ ಇದು ಸಮಾಪ್ತಿಯಾಯಿತು ಎನ್ನಲಾಗಿದೆ. 2019 ರ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಹೊಸದಾಗಿ ನೇಮಕವಾದ ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಹೊಸ ತಂಡವನ್ನು ಕಟ್ಟಲು ರೆಡಿಯಾಗುತ್ತಿತ್ತು.

ಇತ್ತೀಚೆಗೆ ಕೊಹ್ಲಿ ಜನಪ್ರಿಯತೆ ಹೆಚ್ಚಿದ ಹಿನ್ನಲೆಯಲ್ಲಿ ಮತ್ತು ಮುಂಬರುವ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ರಣಜಿ ಪಂದ್ಯದ ನಡುವೆ ಆಯ್ಕೆ ಸಮಿತಿ ಅಧ್ಯಕ್ಷ ಪ್ರಸಾದ್ ಧೋನಿಯೊಂದಿಗೆ ಮಾತುಕತೆ ನಡೆಸಿದರು. ಆಗ ಯಾಕೆ ಕೊಹ್ಲಿಯನ್ನೇ ಎಲ್ಲಾ ಮಾದರಿಗೂ ನಾಯಕನಾಗಿ ಮಾಡಬೇಕು ಎಂದು ಮನವರಿಕೆ ಮಾಡಿಕೊಟ್ಟರು. ನಂತರ ಧೋನಿ ರಾಜೀನಾಮೆ ನೀಡಲು ಸೂಚಿಸಿದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಇದು ಎಷ್ಟು ಸತ್ಯ, ಸುಳ್ಳು ಎಂದು ಗೊತ್ತಿಲ್ಲ. ಆದರೆ ಧೋನಿ ಇತ್ತೀಚೆಗಷ್ಟೇ 2019 ರವರೆಗೆ ಮುಂದುವರಿಯಲು ಬಯಸಿರುವುದಾಗಿ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಹಾಗಾಗಿ ಬಿಸಿಸಿಐ ಪರೋಕ್ಷವಾಗಿ ಧೋನಿಯನ್ನು ಕೆಳಗಿಳಿಸುವುದಕ್ಕೆ ಕಾರಣವಾಯಿತು ಎನ್ನಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮೆಸ್ಸಿ ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತಗೆ ಬಿಗ್‌ ಶಾಕ್

ಮೆಸ್ಸಿ ಕಾರ್ಯಕ್ರಮಕ್ಕೆ ನಿರಾಕರಣೆ, ಮಮತಾ ಸರ್ಕಾರದ ವಿರುದ್ಧ ರಾಜ್ಯಪಾಲರ ಪ್ರಶ್ನೆ

ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನನ್ನೂ ಇದ್ದೂ ಇಲ್ಲದಂತೆ ಸೈಡ್ ಲೈನ್ ಮಾಡುತ್ತಿದ್ದಾರಾ ಗಂಭೀರ್

Video: ಮೆಸ್ಸಿಯನ್ನು ನೋಡಲು ಬಿಡಲಿಲ್ಲ ಎಂದು ನಮ್ಮದೇ ಫುಟ್ಬಾಲ್ ಮೈದಾನವನ್ನು ಪುಡಿಗಟ್ಟಿದ ಯುವಕರು

ಭಾರತಕ್ಕೆ ಬಂದ ಲಿಯೋನೆಲ್ ಮೆಸ್ಸಿಗಾಗಿ ಹನಿಮೂನ್ ಕ್ಯಾನ್ಸಲ್ ಮಾಡಿದ ನವವಿವಾಹಿತರು

ಮುಂದಿನ ಸುದ್ದಿ
Show comments