Webdunia - Bharat's app for daily news and videos

Install App

ಭಾರತ ಸರಣಿಗೂ ಮೊದಲೇ ಶ್ರೀಲಂಕಾ ತಂಡದಲ್ಲೊಂದು ಬಿಗ್ ಶಾಕ್

Webdunia
ಬುಧವಾರ, 12 ಜುಲೈ 2017 (10:00 IST)
ಕೊಲೊಂಬೋ: ಮಹತ್ವದ ಭಾರತ ಸರಣಿಗೆ ಮೊದಲು ಶ್ರೀಲಂಕಾ ಕ್ರಿಕೆಟ್ ತಂಡದ ದೊಡ್ಡ ವಿಕೆಟ್ ಪತನವಾಗಿದೆ. ಅಂದರೆ, ಯಶಸ್ವೀ ನಾಯಕನೆಂದೇ ಹೆಗ್ಗಳಿಕೆ ಪಡೆದಿದ್ದ ಆಂಜಲೋ ಮ್ಯಾಥ್ಯೂಸ್ ಮೂರೂ ಮಾದರಿಯ ಕ್ರಿಕೆಟ್ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ.


ದುರ್ಬಲ ಜಿಂಬಾಬ್ವೆ ವಿರುದ್ಧ ಏಕದಿನ ಸರಣಿ ಸೋತ ಮೇಲೆ ಬೇಸತ್ತಿರುವ ನಾಯಕ ಮ್ಯಾಥ್ಯೂಸ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಜಿಂಬಾಬ್ವೆ ವಿರುದ್ಧದ ಅಂತಿಮ ಏಕದಿನ ಪಂದ್ಯಕ್ಕೂ ಮೊದಲು ಮ್ಯಾಥ್ಯೂಸ್ ನಾಯಕತ್ವ ತ್ಯಜಿಸುವ ಸುಳಿವು ನೀಡಿದ್ದರು. ಅದನ್ನೀಗ ನಿಜ ಮಾಡಿದ್ದಾರೆ.

ಜಿಂಬಾಬ್ವೆ ವಿರುದ್ಧ ತವರಿನಲ್ಲಿ ನಡೆದ ಏಕದಿನ ಸರಣಿಯಲ್ಲಿ ಲಂಕಾ 3-2 ಅಂತರದಿಂದ ಸೋತು ಅವಮಾನ ಅನುಭವಿಸಿದ್ದಾರೆ. ಇದಾದ ಬಳಿಕ ತನ್ನ ನಿರ್ಧಾರ ಪ್ರಕಟಿಸಿರುವ ಮ್ಯಾಥ್ಯೂಸ್ ಇದು ನನ್ನ ವೃತ್ತಿ ಜೀವನದಲ್ಲೇ ಅತ್ಯಂತ ಕಳಪೆ ಸರಣಿಯಾಗಿತ್ತು ಎಂದು ಬಣ್ಣಿಸಿದ್ದಾರೆ. ಇದರಿಂದಾಗಿ ಮುಂಬರುವ ಭಾರತ ಸರಣಿಗೆ ಲಂಕಾ ಹೊಸ ನಾಯಕನನ್ನು ಹುಡುಕಬೇಕಿದೆ.

ಭಾರತದ ವಿರುದ್ಧ ಲಂಕಾ ಟೆಸ್ಟ್, ಏಕದಿನ ಮತ್ತು ಟಿ20 ಸರಣಿ ಆಡಲಿದೆ. ಮ್ಯಾಥ್ಯೂಸ್ ಕೂಡಾ ಭಾರತ ಸರಣಿ ಕಠಿಣದ್ದಾಗಲಿದೆ ಎಂದು ಒಪ್ಪಿಕೊಂಡಿದ್ದು, ಅದಕ್ಕಿಂತ ಮೊದಲು ತಮ್ಮ ತಂಡದ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ.. ಸೆಹ್ವಾಗ್ ಯಾಕೆ ಕೋಚ್ ಹುದ್ದೆಗೆ ಆಯ್ಕೆಯಾಗಲಿಲ್ಲ ಗೊತ್ತೇ?!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನೀವು ಗ್ರೇಟ್‌: ಸಿರಾಜ್‌ಗೆ ಭಾವನಾತ್ಮಕ ಸಂದೇಶ ಕಳುಹಿಸಿದ ವಿರಾಟ್ ಕೊಹ್ಲಿ ಸಹೋದರಿ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ 2027 ರ ವಿಶ್ವಕಪ್ ಕನಸಿಗೆ ಬಿಸಿಸಿಐ ಕೊಳ್ಳಿ

ಓವಲ್ ಟೆಸ್ಟ್ ನಲ್ಲಿ ಭಾರತದ ವಿರುದ್ಧ ಮೋಸದಾಟದ ಆರೋಪ ಹೊರಿಸಿದ ಪಾಕ್ ಕ್ರಿಕೆಟಿಗ

ಬಾಗಲಕೋಟೆಯ ವಿದ್ಯಾರ್ಥಿನಿಯ ಸಂಕಷ್ಟಕ್ಕೆ ಮಿಡಿದ ಸ್ಟಾರ್ ಕ್ರಿಕೆಟಿಗನ ಹೃದಯ, ಮಾಡಿದ್ದೇನು ಗೊತ್ತಾ

IND vs ENG: ಟೀಂ ಇಂಡಿಯಾ ಗೆಲ್ಲದಂತೆ ಪಿಚ್ ಕ್ಯುರೇಟರ್ ಮಾಡಿದ್ದ ಕುತಂತ್ರವೇನು ಗೊತ್ತಾ

ಮುಂದಿನ ಸುದ್ದಿ
Show comments