Select Your Language

Notifications

webdunia
webdunia
webdunia
webdunia

ಭಾರತ ಸರಣಿಗೂ ಮೊದಲೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಮರ್ಮಾಘಾತ

ಭಾರತ ಸರಣಿಗೂ ಮೊದಲೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಮರ್ಮಾಘಾತ
Sydney , ಶುಕ್ರವಾರ, 27 ಜನವರಿ 2017 (11:57 IST)
ಸಿಡ್ನಿ: ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ.  ಇದರ ಬೆನ್ನಲ್ಲೇ ತಂಡ ಆತಂಕಕ್ಕೀಡಾಗುವಂತಹ ಘಟನೆ ನಡೆದಿದೆ. ಅಂತಹದ್ದೇನಾಯಿತು ತಿಳಿಯಬೇಕಾದರೆ ಈ ಸುದ್ದಿ ಓದಿ.
 

ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಸದ್ಯ ಹಿರಿಯ ಆಟಗಾರ ಮಾತ್ರವಲ್ಲ,  ಫಾರ್ಮ್ ನಲ್ಲಿರುವ ಆಟಗಾರ. ಆದರೆ ಇದೀಗ ಪಾದದ ಗಾಯಕ್ಕೊಳಗಾಗಿದ್ದು, ನ್ಯೂಜಿಲೆಂಡ್ ಸರಣಿಯಿಂದ ಔಟಾಗಿದ್ದಾರೆ.  ಇನ್ನೇನು ಪ್ರಮುಖ ಭಾರತ ಪ್ರವಾಸ ಆರಂಭಗೊಳ್ಳಲಿದ್ದು, ಆಗಲೇ ನಾಯಕನಿಗೆ ಇಂತಹಾ ಪರಿಸ್ಥಿತಿ ಬಂದಿರುವುದು ಆಸೀಸ್ ತಂಡ ಆತಂಕಕ್ಕೊಳಗಾಗುವಂತೆ ಮಾಡಿದೆ.

ಈಗಾಗಲೇ ವಿಕೆಟ್ ಕೀಪರ್ ಬಿ ಜೆ ವಾಲ್ಟಿಂಗ್ ಗಾಯಗೊಂಡು ನ್ಯೂಜಿಲೆಂಡ್ ಸರಣಿ ತಪ್ಪಿಸಿಕೊಳ್ಳುತ್ತಿದ್ದಾರೆ. ಹೀಗೆ ಒಬ್ಬರಾದ ಮೇಲೆ ಒಬ್ಬರು ಗಾಯಗೊಳ್ಳುತ್ತಿರುವುದು ಆಸೀಸ್ ತಂಡದ ಆತಂಕ್ಕೆ ಕಾರಣವಾಗಿದೆ. ಸ್ಮಿತ್ ಚೇತರಿಸಿಕೊಳ್ಳಲು ಇನ್ನೂ 10 ದಿನ ಬೇಕಂತೆ. ಅಲ್ಲಿಗೆ ಭಾರತ ಪ್ರವಾಸ ಕೈಗೊಳ್ಳುವ ಹೊತ್ತಿಗೆ ನಾಯಕ ಸುಧಾರಿಸಬಹುದೆಂಬ ವಿಶ್ವಾಸದಲ್ಲಿ ಆಸೀಸ್ ತಂಡವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಗೀತೆ ಹಾಡುವ ಬದಲು ಚುಯಿಂಗಮ್ ಜಗಿದು ವಿವಾದಕ್ಕೀಡಾದ ಟೀಂ ಇಂಡಿಯಾ ಕ್ರಿಕೆಟಿಗ