Webdunia - Bharat's app for daily news and videos

Install App

ಬಾಲಿವುಡ್‌‌ನಲ್ಲಿ ಕ್ರಿಕೆಟರ್ ಶ್ರೀಶಾಂತ್ ಸೆಕೆಂಡ್ ಇನ್ನಿಂಗ್ಸ್

Webdunia
ಸೋಮವಾರ, 24 ನವೆಂಬರ್ 2014 (12:01 IST)
ಐಪಿಎಲ್‌‌ ಪಂದ್ಯದಲ್ಲಿ ಸ್ಪಾಟ್​​ ಫಿಕ್ಸಿಂಗ್​’ ಆರೋಪ ಹೊತ್ತುಕೊಂಡು​ ಬಿಸಿಸಿಐನಿಂದ ಅಜೀವ ನಿಷೇಧಕ್ಕೊಳಗಾಗಿ ತಮ್ಮ ಕ್ರಿಕೆಟ್ ಭವಿಷ್ಯಕ್ಕೆ ಕುತ್ತು ತಂದುಕೊಂಡ ಶ್ರೀಶಾಂತ್ ಬಾಲಿವುಡ್ ಪ್ರವೇಶಿಸುವುದು ಖಚಿತವಾಗಿದೆ. 
ಕೇರಳ ಮೂಲದ 31 ವರ್ಷದ ಕ್ರಿಕೆಟರ್,  ಕೌಶ್ತುಭ ನಾರಾಯಣ ನಿಯೋಗಿ ನಿರ್ದೇಶನದ 'ಕ್ಯಾಬರೆಟ್' ಎಂಬ ಚಿತ್ರದಲ್ಲಿ ಮಲಯಾಳಿ ಮೆಂಟರ್ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ. ಈ ವಿಷಯವನ್ನು ಚಿತ್ರದ ನಿರ್ಮಾಪಕಿ ಪೂಜಾ ಭಟ್​​  ಖಚಿತ ಪಡಿಸಿದ್ದಾರೆ. ಇದೊಂದು ನೃತ್ಯ ಪ್ರಧಾನ ಚಿತ್ರ ಎನ್ನಲಾಗುತ್ತಿದೆ. 
 
ಚಿತ್ರದಲ್ಲಿ ರಿಚ್ಚ ಚಡ್ಡಾಳ ಡ್ಯಾನ್ಸ್​​ ಮೆಂಟರ್​​ ಆಗಿ ಶ್ರೀಶಾಂತ್​​  ನಟಿಸಲಿದ್ದಾರೆ. ಈ ಪಾತ್ರಕ್ಕಾಗಿ ನಿರ್ಮಾಪಕಿ ಪೂಜಾ ಭಟ್​​ ಅನುಭವಿ ನಟನಿಗಾಗಿ ಹುಡುಕುತಿದ್ದರಂತೆ. ಶ್ರೀಶಾಂತ್​​‌ನನ್ನು ನೋಡಿದ್ಮೇಲೆ ಈ ಪಾತ್ರಕ್ಕೆ ಆತನೇ ಸೂಕ್ತ ಅನ್ನಿಸಿತು ಎಂದು ಪೂಜಾ ಹೇಳಿದ್ದಾರೆ. 
 
ಜೈಲು ಶಿಕ್ಷೆ ಮುಗಿಸಿಕೊಂಡು ಬಂದ ಶ್ರೀಶಾಂತ ಕಹಿ ಗಳಿಗೆಗಳನ್ನು ಮರೆಯಲು ಸಂಗೀತದ ಮೊರೆ ಹೋಗಿದ್ದರು. ಮ್ಯೂಸಿಕ್, ನೃತ್ಯ​​ ನಿಜಕ್ಕೂ ಅವರಿಗೆ ಸಾಂತ್ವನವನ್ನು ನೀಡಿದ್ದವು. ಈಗ ಅದೇ ನೃತ್ಯ ಅವರ ಜೀವನವನ್ನು ಕೈ ಹಿಡಿದು ನಡೆಸಲು ಹೊರಟಿದೆ.
 
ತಮ್ಮ ಕ್ರಿಕೆಟ್ ಜೀವನವನ್ನು ಅಪಮಾನಕರವಾಗಿ ಮೊಟಕುಗೊಳಿಸಿಕೊಂಡ ಶ್ರೀಶಾಂತ್, ಈಗ​​​ ಹೊಸದೊಂದು ವೃತ್ತಿ ಬದುಕಿಗೆ ಕಾಲಿಡುತ್ತಿದ್ದಾರೆ. ಅದು ಸಹ ಬಾಲಿವುಡ್‌ನಲ್ಲಿ !....'ಕೇರಳ ಎಕ್ಸಪ್ರೆಸ್' ದ್ವಿತೀಯ ಇನ್ನಿಂಗ್ಸ್ ಹೇಗಿರುತ್ತೆ ಎಂಬುದನ್ನು ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments