Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಭುಜದ ನೋವನ್ನು ಅಣಕಿಸಿದ ಆಸ್ಟ್ರೇಲಿಯಾ!

ವಿರಾಟ್ ಕೊಹ್ಲಿ ಭುಜದ ನೋವನ್ನು ಅಣಕಿಸಿದ ಆಸ್ಟ್ರೇಲಿಯಾ!
Ranchi , ಶನಿವಾರ, 18 ಮಾರ್ಚ್ 2017 (15:56 IST)
ರಾಂಚಿ:  ದ್ವಿತೀಯ ಟೆಸ್ಟ್ ನಿಂದ ಆರಂಭವಾದ ಆನ್ ಫೀಲ್ಡ್ ಮಾತಿನ ಯುದ್ಧ ತೃತೀಯ ಟೆಸ್ಟ್ ನ ತೃತೀಯ ದಿನದಲ್ಲೂ ಮುಂದುವರಿದಿದೆ. ಯಾಕೋ ಈ ಸರಣಿ ಕೊಹ್ಲಿ ವರ್ಸಸ್ ಆಸ್ಟ್ರೇಲಿಯಾ ಎನ್ನುವಂತಾಗಿದೆ.


 
ನಿನ್ನೆಯಿಡೀ ಭುಜದ ನೋವಿನಿಂದಾಗಿ ಮೈದಾನಕ್ಕಿಳಿಯದಿದ್ದ ನಾಯಕ ವಿರಾಟ್ ಕೊಹ್ಲಿ ಇಂದು ಬ್ಯಾಟಿಂಗ್ ಗೆ ಇಳಿದಿದ್ದಾರೆ. ಆದರೆ ಅವರು ಔಟಾದಾಗ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಮತ್ತು ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಜೋರಾಗಿ ಕಿರುಚಿ ಸಂಭ್ರಮಾಚರಿಸಿದ್ದಲ್ಲದೆ, ಭುಜ ಮುಟ್ಟಿಕೊಂಡು ಕೊಹ್ಲಿಯನ್ನು ಅಣಕಿಸಿದರು.

 
ಇದಕ್ಕೆ ಸ್ಥಳದಲ್ಲಿ ಅಂಪಾಯರ್ ಗಳು ಎಚ್ಚರಿಕೆಯನ್ನೂ ನೀಡಿದರು. ಉಭಯ ತಂಡಗಳು ಕೊಂಚ ಜವಾಬ್ಧಾರಿಯುತವಾಗಿ ವರ್ತಿಸಬೇಕೆಂದು ಕಳೆದ ಪಂದ್ಯದ ಡಿಆರ್ ಎಸ್ ಘಟನೆಯ ನಂತರ ಎಚ್ಚರಿಸಲಾಗಿತ್ತು.

 
ಹಾಗಿದ್ದರೂ, ಈ ಪಂದ್ಯದಲ್ಲಿ ಮತ್ತೊಮ್ಮೆ ಇಂತಹ ಘಟನೆ ಪುನರಾವರ್ತಿಸಲು ನಾಂದಿ ಹಾಡಿದ್ದು ಸ್ವತಃ ಕೊಹ್ಲಿಯೇ.  ಭಾರತ 149 ರನ್ ಗಳಿಸಿದ್ದಾಗ ಚೇತೇಶ್ವರ ಪೂಜಾರ ವಿರುದ್ಧ ಆಸ್ಟ್ರೇಲಿಯನ್ನರು ಎಲ್ ಬಿಡಬ್ಲ್ಯುಗೆ ಡಿಆರ್ ಎಸ್ ಮನವಿ ಮಾಡಿಕೊಂಡರು. ಈ ವೇಳೆ ತೀರ್ಪು ಭಾರತೀಯರ ಪರವಾಗಿ ಬಂತು. ಹೀಗೆ ಪದೇ ಪದೇ ಡಿಆರ್ ಎಸ್ ಮನವಿ ಮಾಡಿ ವಿಫಲವಾದ ಆಸೀಸ್ ತಂಡವನ್ನು ಅಣಕಿಸುವಂತೆ ಡ್ರೆಸ್ಸಿಂಗ್ ರೂಂನಲ್ಲಿದ್ದ ಕೊಹ್ಲಿ ಬಾಗಿಲು ತೆರೆದು ಬಾಲ್ಕನಿಯತ್ತ ಬಂದು ಜೋರಾಗಿ ಕಿರುಚಿ ಸಂಭ್ರಮಾಚರಿಸಿದ್ದರು. ಇದೇ ಕಾರಣಕ್ಕೆ ಆಸ್ಟ್ರೇಲಿಯಾ ಕೂಡಾ ಕೊಂಚ ಅತಿರೇಕವೆನಿಸುವ ರೀತಿಯಲ್ಲಿ ಸಂಭ್ರಮಾಚರಿಸಿಕೊಂಡಿತು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಕ್ರೀಸ್ ಗೆ ಬರುವ ಮೊದಲು ಒಂದು ಲಂಚ್ ಬ್ರೇಕ್!