Webdunia - Bharat's app for daily news and videos

Install App

ದವಡೆ ಕ್ಯಾನ್ಸರ್‌ : ಚೇತರಿಕೆಯ ಹಾದಿಯಲ್ಲಿ ಕಾಮೆಂಟೇಟರ್ ಅರುಣ್ ಲಾಲ್

Webdunia
ಶನಿವಾರ, 23 ಏಪ್ರಿಲ್ 2016 (14:08 IST)
ಭಾರತದ ಓಪನರ್ ಆಗಿದ್ದ ಅರುಣ್ ಲಾಲ್ ಪ್ರಸಕ್ತ ಕ್ರಿಕೆಟ್ ಕಾಮೆಂಟೇಟರ್ ಕೆಲಸ ನಿರ್ವಹಿಸುತ್ತಿದ್ದು, ಭಾರತದ ಟಿವಿಯಿಂದ ಸ್ವಲ್ಪ ಸಮಯ ಮಿಸ್ಸಿಂಗ್ ಆಗಿದ್ದರು. ಇದಕ್ಕೆ  ಅರುಣ್ ಲಾಲ್ ಅವರ ದವಡೆ ಕ್ಯಾನ್ಸರ್‌ ವಿರುದ್ಧ ಮೌನ ಸಮರವೇ ಕಾರಣವಾಗಿತ್ತು. 2016ರ ಜನವರಿಯಲ್ಲಿ ಅದನ್ನು ಗುರುತಿಸಲಾಯಿತು. 
 
 60 ವರ್ಷದ ಅರುಣ್ ಲಾಲ್ ಕೊಲ್ಕತಾದ ಆಸ್ಪತ್ರೆಯಲ್ಲಿ ಶನಿವಾರ 14 ಗಂಟೆಗಳ ಶಸ್ತ್ರಕ್ರಿಯೆಗೆ ಒಳಗಾಗಿದ್ದು, ಇದರಲ್ಲಿ ದವಡೆಯನ್ನು ಬದಲಿಸುವುದು ಸಹ ಸೇರಿದೆ. ಇದೊಂದು ಅಪರೂಪದ ಮತ್ತು ಅಪಾಯಕಾರಿ ಕ್ಯಾನ್ಸರ್. ನಾನು ಕಠಿಣ ಚಿಕಿತ್ಸಾ ಪ್ರಕ್ರಿಯೆಗೆ ಒಳಪಡುವ ಮುಂಚೆ ಸಕಾಲದಲ್ಲಿ ಇದರ ಲಕ್ಷಣವನ್ನು ಗುರುತಿಸಲಾಯಿತು. ಈಗ ಮರು ಜೀವ ಸಿಕ್ಕಿದಂತಾಗಿದೆ. ಕಠಿಣ ಹಾದಿಯನ್ನು ಸವೆಸಿದರೂ ಅದ್ಭುತ ಕಾರ್ಯನಿರ್ವಹಿಸಿದ ವೈದ್ಯರಿಗೆ ಚಿರಋಣಿಯಾಗಿರುತ್ತೇನೆ ಎಂದು ಅರುಣ್ ಲಾಲ್ ಹೇಳಿದರು. 
 
ಕ್ಯಾನ್ಸರ್‌ ವಿರುದ್ಧ ಹೋರಾಟ ನಡೆಸಿದವರಲ್ಲಿ ಲಾಲ್ ಅವರೊಬ್ಬರೇ ಅಲ್ಲ. ಟೀಂಇಂಡಿಯಾದ ಪಂದ್ಯ ವಿಜೇತ ಆಟಗಾರ ಯುವರಾಜ್ ಸಿಂಗ್ ಅವರಿಗೆ ಕೂಡ 2011ರಲ್ಲಿ ಕ್ಯಾನ್ಸರ್ ಇರುವುದನ್ನು ಗುರುತಿಸಲಾಗಿತ್ತು.
 
 ಯುವರಾಜ್ ಯಶಸ್ವಿಯಾಗಿ ಚಿಕಿತ್ಸೆ ಪಡೆದ ಬಳಿಕ ತಿಳಿಸಿದ್ದೇನೆಂದರೆ,  ನಾನು ಕ್ಯಾನ್ಸರ್‌ಗೆ ಒಳಪಟ್ಟಾಗ, ನನಗೆ ಮಾತ್ರವೇಕೆ ಎಂದು ದೇವರಲ್ಲಿ ಕೇಳಿದೆ. ಆದರೆ ನನಗೆ ಪಂದ್ಯ ಶ್ರೇಷ್ಟ ಪ್ರಶಸ್ತಿ ಸಿಕ್ಕಿದಾಗ ನನಗೆ ಮಾತ್ರ ಏಕೆಂದು ಕೇಳಲಿಲ್ಲ. ಆದ್ದರಿಂದ ಇವೆಲ್ಲಾ ಜೀವನದ ಭಾಗವಾಗಿದೆ ಎಂದು ಯುವರಾಜ್ ಹೇಳಿದ್ದರು. ಲಾಲ್ 16 ಟೆಸ್ಟ್ ಪಂದ್ಯಗಳನ್ನು ಮತ್ತು 13ಏಕದಿನಗಳನ್ನು 82ರಿಂದ 89ರ ನಡುವೆ ಆಡಿದ್ದಾರೆ. ಶ್ರೀಲಂಕಾ ವಿರುದ್ಧ ಚೊಚ್ಚಲ ಪಂದ್ಯದಲ್ಲಿ ಅವರು 63ರನ್ ಸ್ಕೋರ್ ಮಾಡಿದ್ದರು.  ಆದಾಗ್ಯೂ ಅವರ ಉತ್ತಮ ಸಾಧನೆಯು 1987ರಲ್ಲಿ ಕೋಲ್ಕತಾದಲ್ಲಿ ಪಾಕಿಸ್ತಾನ ವಿರುದ್ದ ಪಂದ್ಯವಾಗಿತ್ತು. 
 
ರಣಜಿ ಟ್ರೋಫಿಯಲ್ಲಿ ವಿಪುಲ ರನ್ ಸ್ಕೋರರ್ ಆಗಿದ್ದ ಅರುಣ್ ಲಾಲ್ 53 ರನ್ ಸರಾಸರಿಯಲ್ಲಿ 6763 ರನ್ ಗಳಿಸಿದ್ದರು. ಸರ್ವಕಾಲಿಕ ಒಟ್ಟು ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಅವರನ್ನು ಇರಿಸಲಾಗಿತ್ತು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments