Select Your Language

Notifications

webdunia
webdunia
webdunia
webdunia

ಅತೀ ದೊಡ್ಡ ಮ್ಯಾಚ್ ವಿನ್ನರ್ ಆಗಿ ಸದಾ ಉಳಿಯಲಿರುವ ಅನಿಲ್ ಕುಂಬ್ಳೆ

ಅತೀ ದೊಡ್ಡ ಮ್ಯಾಚ್ ವಿನ್ನರ್ ಆಗಿ ಸದಾ ಉಳಿಯಲಿರುವ ಅನಿಲ್ ಕುಂಬ್ಳೆ
ನವದೆಹಲಿ: , ಶನಿವಾರ, 25 ಜೂನ್ 2016 (15:57 IST)
ಭಾರತ ಕ್ರಿಕೆಟ್ ತಂಡದ ಹೊಸ ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ ನೇಮಕವನ್ನು ಸ್ವಾಗತಿಸಿದ ದೀರ್ಘ ಕಾಲದ ಬೌಲಿಂಗ್ ಸಂಗಾತಿ ಹರ್ಭಜನ್ ಸಿಂಗ್ , ಕ್ರಿಕೆಟ್ ಸಾಂಪ್ರದಾಯಿಕ ಸ್ವರೂಪದಲ್ಲಿ ಕುಂಬ್ಳೆ ಭಾರತಕ್ಕೆ ಅತೀ ದೊಡ್ಡ ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿದ ಆಟಗಾರರಾಗಿದ್ದರೆಂದು ಶ್ಲಾಘಿಸಿದ್ದಾರೆ.
 
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಅತೀ ದೊಡ್ಡ ಮ್ಯಾಚ್ ವಿನ್ನರ್ ಆಗಿ ಕುಂಬ್ಳೆ ಉಳಿದಿದ್ದಾರೆ. ಈ ತಂಡದಲ್ಲಿ ಕೂಡ ಗೆಲ್ಲುವುದಕ್ಕೆ ಅದೇ ರೀತಿಯ ಹಸಿವನ್ನು ಅವರು ಉಂಟುಮಾಡುತ್ತಾರೆಂದು ಭಜ್ಜಿ ಆಶಿಸಿದರು. 
 
ಭಾರತದ ಕೋಚ್ ಖಾಲಿ ಹುದ್ದೆಗೆ ಕುಂಬ್ಳೆ ಅಖಾಡಕ್ಕಿಳಿದ ಸುದ್ದಿಗೆ ಪ್ರತಿಕ್ರಿಯಿಸಿದ ಮೊದಲ ಕೆಲವು ಕ್ರಿಕೆಟರುಗಳಲ್ಲಿ ಭಜ್ಜಿ ಕೂಡ ಒಬ್ಬರಾಗಿದ್ದರು.  ಹರ್ಭಜನ್ ಮತ್ತು ಕುಂಬ್ಳೆ ಅವರ ವೃತ್ತಿಜೀವನದಲ್ಲಿ ಕ್ರಿಕೆಟ್‌ನ ಎಲ್ಲಾ ಮಾದರಿಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಅಚ್ಚರಿಯ  ಎಸೆತಗಳನ್ನು ಹಾಕುವ ಮೂಲಕ ತಬ್ಬಿಬ್ಬುಗೊಳಿಸುತ್ತಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ರವಿ ಶಾಸ್ತ್ರಿಗೆ ಕೋಚ್ ಸಂದರ್ಶನ ಪ್ರಕ್ರಿಯೆಯಲ್ಲಿ ಗಂಗೂಲಿ ಏಕೆ ಹಾಜರಿರಲಿಲ್ಲ?