Select Your Language

Notifications

webdunia
webdunia
webdunia
webdunia

ಯುವರಾಜ್ ಸಿಂಗ್ ಆಯ್ತು. ಇನ್ನೀಗ ಈ ಕ್ರಿಕೆಟಿಗನಿಗೆ ಮದುವೆ ಸಂಭ್ರಮ

ಯುವರಾಜ್ ಸಿಂಗ್ ಆಯ್ತು. ಇನ್ನೀಗ ಈ ಕ್ರಿಕೆಟಿಗನಿಗೆ ಮದುವೆ ಸಂಭ್ರಮ
NewDelhi , ಸೋಮವಾರ, 5 ಡಿಸೆಂಬರ್ 2016 (13:31 IST)
ನವದೆಹಲಿ: ಯುವರಾಜ್ ಸಿಂಗ್ ಮದುವೆ ಅಂತ ಮೂರು ದಿನ ಮದುಮಗನ ಡ್ರೆಸ್ ನಲ್ಲಿ ಮಿಂಚಿದ್ದು ಆಯ್ತು. ಇದೀಗ ಇಶಾಂತ್ ಶರ್ಮಾ ಸರದಿ. ಬಾಸ್ಕೆಟ್ ಬಾಲ್ ಆಟಗಾರ್ತಿ ಪ್ರತಿಮಾ ಸಿಂಗ್ ರನ್ನು ವಿವಾಹವಾಗುತ್ತಿರುವ ಇಶಾಂತ್ ಇದೀಗ ಆಮಂತ್ರಣ ಪತ್ರಿಕೆ ಹಂಚುವುದರಲ್ಲಿ ಬ್ಯುಸಿಯಾಗಿದ್ದಾರೆ.

ಇಶಾಂತ್ ಕೂಡಾ ಯುವರಾಜ್ ಸಿಂಗ್ ರಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿದ್ದಾರೆ. ತಮ್ಮ ವುಡ್ ಬಿ ಪತ್ನಿ ಪ್ರತಿಮಾ ಜತೆ ಮೋದಿಯವರನ್ನು ಭೇಟಿಯಾದ ಇಶಾಂತ್ ಮದುವೆಗೆ ಆಹ್ವಾನಿಸಿದ್ದಾರೆ. ಡಿಸೆಂಬರ್ 9 ರಂದು ದೆಹಲಿಯಲ್ಲಿ ಈ ವಿವಾಹ ಕಾರ್ಯಕ್ರಮ ನಡೆಯಲಿದೆ.

ಆದರೆ ಈ ಮದುವೆ ಟೀಂ ಇಂಡಿಯಾ ಆಟಗಾರರು ಭಾಗವಹಿಸಲಾರರು. ಯಾಕೆಂದರೆ ಗುರುವಾರದಿಂದ ಇಂಗ್ಲೆಂಡ್ ವಿರುದ್ಧ ನಾಲ್ಕನೇ  ಟೆಸ್ಟ್ ಪಂದ್ಯ ಆರಂಭವಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಾಕಿ ವಿಶ್ವಕಪ್ ನಲ್ಲಿ ಭಾರತವೇ ಫೇವರಿಟ್