Select Your Language

Notifications

webdunia
webdunia
webdunia
webdunia

ಮಟನ್ ಶಾಪ್ ಆಯ್ತು.. ಇದೀಗ ಬಟ್ಟೆ ವ್ಯಾಪಾರಕ್ಕಿಳಿದ ಪಾಕಿಸ್ತಾನಿ ಕ್ರಿಕೆಟಿಗ!

ಮಟನ್ ಶಾಪ್ ಆಯ್ತು.. ಇದೀಗ ಬಟ್ಟೆ ವ್ಯಾಪಾರಕ್ಕಿಳಿದ ಪಾಕಿಸ್ತಾನಿ ಕ್ರಿಕೆಟಿಗ!
Karachi , ಗುರುವಾರ, 2 ಫೆಬ್ರವರಿ 2017 (13:54 IST)
ಕರಾಚಿ: ಪಾಕಿಸ್ತಾನ ಕ್ರಿಕೆಟಿಗರು ಭಾರತದ ಕ್ರಿಕೆಟಿಗರಷ್ಟು ಶ್ರೀಮಂತರಲ್ಲ ಎನ್ನುವುದು ಗೊತ್ತಿರುವ ಸಂಗತಿಯೇ. ಹೀಗಿರುವಾಗ ಜೀವನ ನಿರ್ವಹಣೆಗೆ ಏನಾದರೂ ಕಸುಬು ಬೇಕಲ್ಲಾ? ಅದಕ್ಕೆ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಬಟ್ಟೆ ಅಂಗಡಿ ತೆರೆದಿದ್ದಾರೆ.

 
ಇದಕ್ಕೆ ಮೊದಲು ಇಂಜಿ ಮಾಂಸದ ಅಂಗಡಿ ತೆರೆದಿದ್ದರು. ಇದೀಗ ಜವಳಿ ಅಂಗಡಿ ತೆರೆದಿದ್ದಾರೆ. ಇದಕ್ಕೆ ಲೆಜೆಂಡ್ಸ್ ಆಫ್ ಇಂಜಮಾಮ್ ಎಂದು ಹೆಸರಿಟ್ಟಿದ್ದಾರೆ. ವಿಶೇಷವೆಂದರೆ ಈ ಅಂಗಡಿ ಆರಂಭ ಮಹೋತ್ಸವಕ್ಕೆ ಪಾಕ್ ನ ಮಾಜಿ, ಹಾಲಿ ಕ್ರಿಕೆಟಿಗರೆಲ್ಲಾ ಬಂದಿದ್ದಾರೆ.

ಹೇಳಿ ಕೇಳಿ ಇಂಜಮಾಮ್ ಪಾಕ್ ನ ಆಯ್ಕೆ ಸಮಿತಿ ಮುಖ್ಯಸ್ಥ. ಹೀಗಿರುವಾಗ ಅಧ್ಯಕ್ಷರನ್ನು ಸಂತೋಷಪಡಿಸಲಾದರೂ ಬಾರದೇ ಆದೀತೇ. ಅದಕ್ಕೆ ನಾಯಕ ಮಿಸ್ಬಾ ಉಲ್ ಹಕ್,  ಮೊಹಮ್ಮದ್ ಯೂಸಫ್,  ಕಮ್ರಾನ್ ಅಕ್ಮಲ್,  ಅಹಮ್ಮದ್ ಶೆಹಜಾದ್ ಸೇರಿದಂತೆ ಪ್ರಮುಖರೆಲ್ಲಾ ಬಂದು ಅಂಗಡಿಯ ಬೋರ್ಡ್ ಮುಂದೆ ನಿಂತು ಫೋಟೋ ತೆಗೆಸಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬ್ಯಾಟ್ ನಿಂದ ಒಂದು ಗ್ರಾಂ ಕಡಿಮೆಯಾದರೂ ರಾಹುಲ್ ದ್ರಾವಿಡ್ ಗೆ ಗೊತ್ತಾಗುತ್ತಿಂತೆ!