Webdunia - Bharat's app for daily news and videos

Install App

ಟೀಂ ಇಂಡಿಯಾ ವಿರುದ್ಧ ಸರಣಿ ಸೋತಿದ್ದಕ್ಕೆ ಬ್ರಿಟಿಷ್ ಪತ್ರಕರ್ತನಿಗೆ ಟ್ವಿಟರ್ ನಲ್ಲಿ ಟಾಂಗ್!

Webdunia
ಬುಧವಾರ, 21 ಡಿಸೆಂಬರ್ 2016 (10:14 IST)
ಮುಂಬೈ: ವೀರೇಂದ್ರ ಸೆಹ್ವಾಗ್ ಮತ್ತು ಬ್ರಿಟಿಷ್ ಪತ್ರಕರ್ತ ಪೀರ್ಸ್ ಮಾರ್ಗನ್ ರಿಯೋ ಒಲಿಂಪಿಕ್ಸ್ ಸಂದರ್ಭದಲ್ಲಿ ಮಾಡಿದ ಟ್ವಿಟರ್ ವಾರ್ ಎಲ್ಲರಿಗೂ ನೆನಪಿದೆ ತಾನೇ? ಆವತ್ತು ಮಾಡಿದ ಟ್ವೀಟ್ ಗೆ ಈಗಲೂ ಭಾರತೀಯ ಅಭಿಮಾನಿಗಳು ಅವಕಾಶ ಸಿಕ್ಕಾಗಲೆಲ್ಲಾ ಮಾರ್ಗನ್ ಗೆ ಟಾಂಗ್ ಕೊಡುವ ಅವಕಾಶವನ್ನು ಕಳೆದುಕೊಳ್ಳುವುದೇ ಇಲ್ಲ.

ರಿಯೋ ಒಲಿಂಪಿಕ್ಸ್ ನಲ್ಲಿ ಇದುವರೆಗೆ ಕೇವಲ 5 ಚಿನ್ನದ ಪದಕ ಗೆದ್ದಿದ್ದಕ್ಕೆ 1.2 ಬಿಲಿಯನ್ ಜನತೆಯಿರುವ ಭಾರತೀಯರು ಈ ಮಟ್ಟಿಗೆ ಸೆಲೆಬ್ರೇಷನ್ ಮಾಡುತ್ತಿರುವುದೇಕೋ ಎಂದು ಮಾರ್ಗನ್ ಆವತ್ತು ಟೀಕಿಸಿದ್ದರು. ಇದಕ್ಕೆ ವೀರೇಂದ್ರ ಸೆಹ್ವಾಗ್ ಮತ್ತು ಅವರ ನಡುವೆ ಹಲವು ಟ್ವೀಟರ್ ವಾರ್ ನಡೆದಿತ್ತು.

ಈಗಂತೂ ಇಂಗ್ಲೆಂಡ್ ವಿರುದ್ಧ ಯಾವುದೇ ಕ್ರೀಡೆಯಲ್ಲಿ ಗೆದ್ದರೂ ಭಾರತೀಯ ಅಭಿಮಾನಿಗಳು ಮಾರ್ಗನ್ ರನ್ನು ಕುಟುಕುವುದನ್ನು ಮರೆಯುವುದಿಲ್ಲ. ನಿನ್ನೆ ಟೆಸ್ಟ್ ಸರಣಿ ಗೆದ್ದದ್ದಕ್ಕೂ ಸೆಹ್ವಾಗ್ ಜಡ್ಡೂ, ಇಂಗ್ಲೆಂಡ್ ಗೆ ಸ್ವಲ್ಪ ಲಡ್ಡೂ ಪಾರ್ಸೆಲ್ ಮಾಡಿಸು. ಕ್ರಿಕೆಟ್ ಜನಕರನ್ನು ಸೋಲಿಸುವುದು ನಿಜಕ್ಕೂ ವಿಶೇಷ” ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಗೆ ಹಲವು ಮಂದಿ ಪ್ರತಿಕ್ರಿಯಿಸಿದ್ದು, ಮಾರ್ಗನ್ ರನ್ನು ಹಿಗ್ಗಾ ಮುಗ್ಗಾ ಕೆಣಕಿದ್ದಾರೆ. ಭಾರತ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಷ್ಟೇ ಸಂಖ್ಯೆಯಿಂದ ಇಂಗ್ಲೆಂಡ್ ಸರಣಿ ಸೋತಿತು ಎಂದು ಅಭಿಮಾನಿಯೊಬ್ಬ ಮಾಡಿದ ಟ್ವೀಟ್ ಗೆ ಮಾರ್ಗನ್ ಟ್ವೀಟ್ ಮಾಡಿದ್ದಾರೆ. “ನಿಜವಾದ ಮಾತು. ಆದರೆ ನನಗೆ ಇಂಗ್ಲೆಂಡ್ ನ ಪ್ರದರ್ಶನದಿಂದ ನಾಚಿಕೆಯಾಗಿದೆ” ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಜಸ್ಪ್ರೀತ್ ಬುಮ್ರಾಗೆಲ್ಲಾ ನಾವು ಹೆದರಲ್ಲ ಎಂದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್

IND vs ENG: ಭಾರತದ ವಿರುದ್ಧ ಕಣಕ್ಕಿಳಿಯಲಿರುವ 11 ಆಟಗಾರರ ಪಟ್ಟಿ ಪ್ರಕಟಿಸಿದ ಇಂಗ್ಲೆಂಡ್

ತುಳುನಾಡಿನ ಅಳಿಯ ಸೂರ್ಯಕುಮಾರ್‌ಗೆ ಹರ್ನಿಯಾ ನೋವು: ಚಿಕಿತ್ಸೆಗೆ ಇಂಗ್ಲೆಂಡ್‌ನತ್ತ ಸ್ಟಾರ್‌ ಕ್ರಿಕೆಟಿಗ

ಸೂರ್ಯಕುಮಾರ್ ಯಾದವ್ ಗೆ ಕಾಡುತ್ತಿದೆ ಈ ಆರೋಗ್ಯ ಸಮಸ್ಯೆ: ಕೆಲವು ದಿನ ಕ್ರಿಕೆಟ್ ನಿಂದ ದೂರ

IND vs ENG: ಲೀಡ್ಸ್ ಪಿಚ್ ನಲ್ಲಿ ಮೊದಲ ದಿನ ಇಷ್ಟು ರನ್ ಬಂದರೂ ಸಾಕು

ಮುಂದಿನ ಸುದ್ದಿ
Show comments