Select Your Language

Notifications

webdunia
webdunia
webdunia
webdunia

ಅತ್ಯಾಚಾರ ಮಾಡಿದವನ ಮೇಲೆ ಅವಳಿಗೆ ಪ್ರೀತಿಯಂತೆ!

ಅತ್ಯಾಚಾರ ಮಾಡಿದವನ ಮೇಲೆ ಅವಳಿಗೆ ಪ್ರೀತಿಯಂತೆ!
ಢಾಕಾ , ಬುಧವಾರ, 18 ಮಾರ್ಚ್ 2015 (12:05 IST)
ಆಕೆ ಬಾಂಗ್ಲಾದ ಪ್ರಖ್ಯಾತ ನಟಿ. ಆತ ವಿಶ್ವ ಮಟ್ಟದ ಕ್ರಿಕೆಟಿಗ. ಕೆಲ ತಿಂಗಳುಗಳ ಹಿಂದೆ ಆತನ ಮೇಲೆ ಅತ್ಯಾಚಾರದ ಪ್ರಕರಣ ದಾಖಲಿಸಿದ್ದ ಆಕೆ ಆತ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದಾಗ ಏಕಾಯೇಕಿ ತಾನು ದಾಖಲಿಸಿದ್ದ ದೂರನ್ನು ವಾಪಸ್ ತೆಗೆದುಕೊಂಡಳು.  ಈಗ ನನಗಿನ್ನೂ ಆತನ ಮೇಲೆ ಪ್ರೀತಿ ಇದೆ ಅನ್ನೋ ಹೊಸ ರಾಗ ಹಾಡುತ್ತಿದ್ದಾಳೆ. 
ಆಕೆಯ ಹೆಸರು ನಜ್‌ನೈನ್ ಅಖ್ತರ್ ಹ್ಯಾಪಿ. ಬಾಂಗ್ಲಾದೇಶದ ನಟಿ. ವಿಶ್ವಕಪ್ ಆರಂಭವಾಗುವ ಕೆಲ ದಿನಗಳ ಮುನ್ನ ಈಕೆ ಮಾಧ್ಯಮಗಳಲ್ಲಿ ಸುದ್ದಿ ಮಾಡಿದ್ದಳು. ಬಾಂಗ್ಲಾ ಕ್ರಿಕೆಟ್ ತಂಡದ ಪ್ರಮುಖ ಬೌಲರ್ ರುಬೆಲ್ ಹುಸೇನ್ ವಿರುದ್ಧ ಹ್ಯಾಪಿ ವಿರುದ್ಧ ಆಕೆ ಅತ್ಯಾಚಾರದ ಆರೋಪ ಮಾಡಿದ್ದಳು. ಕೋರ್ಟ್‌ನಲ್ಲಿ ಕೇಸ್ ಕೂಡ ದಾಖಲಿಸಿದ್ದಳು. 
 
"ರುಬೆಲ್ ಮದುವೆಯಾಗುವುದಾಗಿ ನಂಬಿಸಿ ನನ್ನ ಜೊತೆ ದೈಹಿಕ ಸಂಬಂಧ ಬೆಳೆಸಿದ್ದ. ಈಗ ವಿವಾಹವಾಗಲು ನಿರಾಕರಿಸುತ್ತಿದ್ದಾನೆ" ಎಂದು ಆಕೆ ಆರೋಪಿಸಿದ್ದಳು. ಈ ಕಾರಣದಿಂದ ಬೌಲರ್‌ ಕಂಬಿ ಎಣಿಸುವಂತಾಗಿತ್ತು. ಆತ ವಿಶ್ವಕಪ್ ಆಡಲಿರುವ ತಂಡದಲ್ಲೂ ಸ್ಥಾನ ಪಡೆದಿದ್ದ. ರಾಷ್ಟ್ರದ ಹಿತಾಸಕ್ತಿಯ ಕಾರಣ ಮುಂದಿಟ್ಟಿದ್ದ ಕ್ರಿಕೆಟಿಗನ ವಕೀಲ ಬೌಲರ್ ಜಾಮೀನು ದೊರಕಿಸಿಕೊಡಲು ಯಶಸ್ವಿಯಾಗಿದ್ದ. 
 
ತಮ್ಮ ವಿರುದ್ಧದ ಆರೋಪಗಳ ಕುರಿತು ತಲೆ ಕೆಡಿಸಿಕೊಳ್ಳದ ರುಬೆಲ್ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ತಮ್ಮ ತಂಡ ಕ್ವಾರ್ಟರ್ ಫೈನಲ್ ತಲುಪಲು ಕಾರಣರಾದರು. ಇಂಗ್ಲೆಂಡ್ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ರುಬೆಲ್ ದೇಶದ ಹೀರೋ ಎನಿಸಿಕೊಂಡರು. ಇದರಿಂದ ಇಂಪ್ರೆಸ್ ಆದ ನಟಿ ಆತನ ಮೇಲೆ ನೀಡಿದ್ದ ದೂರನ್ನು ಹಿಂತಿರುಗಿ ಪಡೆದುಕೊಂಡಳು. 
 
"ಈಗ ನಾ ಆತನನ್ನು ಕ್ಷಮಿಸಿದ್ದೇನೆ. ನನಗೆ ಆತನ ಮೇಲೆ ಇನ್ನೂ ಪ್ರೀತಿ ಇದೆ. ತನ್ನ ಮಾಜಿ ಗೆಳೆಯನಿಗಾಗಿ ನಾನು ಭಾರತ- ಬಾಂಗ್ಲಾ ನಡುವೆ ನಡೆಯುವ ಸೆಮಿಫೈನಲ್ ಪಂದ್ಯವನ್ನು  ವೀಕ್ಷಿಸುವುದಾಗಿ ಹೇಳಿದ್ದಾಳೆ. ಎಲ್ಲ ದೇಶವಾಸಿಗಳಂತೆ ನಾನು ಕೂಡ ನಮ್ಮ ದೇಶ ಪ್ರಶಸ್ತಿ ಗೆಲ್ಲಲಿ ಎಂದು ಬಯಸುತ್ತೇನೆ. ಜತೆಗೆ ರುಬೆಲ್ ಉತ್ತಮ ಪ್ರದರ್ಶನ ನೀಡಲಿ ಎಂದು ಹಾರೈಸುತ್ತೇನೆ", ಎಂದು 19 ರ ಹರೆಯದ ನಟಿ ಹೇಳಿದ್ದಾಳೆ. 

Share this Story:

Follow Webdunia kannada