Webdunia - Bharat's app for daily news and videos

Install App

33ರ ಹರೆಯಕ್ಕೆ ಕಾಲಿಟ್ಟ ಮುಂಚೂಣಿಯ ವೇಗಿ ಜಹೀರ್ ಖಾನ್

Webdunia
ಶುಕ್ರವಾರ, 7 ಅಕ್ಟೋಬರ್ 2011 (12:25 IST)
ಭಾರತ ಕ್ರಿಕೆಟ್ ತಂಡದ ಮುಂಚೂಣಿಯ ಎಡಗೈ ವೇಗಿ ಜಹೀರ್ ಖಾನ್ ಶುಕ್ರವಾರ 33ರ ಹರೆಯಕ್ಕೆ ಕಾಲಿರಿಸಿದ್ದಾರೆ. ಪ್ರಸ್ತುತ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿರುವ ಜಹೀರ್ ಖಾನ್, ದೇಶಕ್ಕೆ 28 ವರ್ಷಗಳ ನಂತರ ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

PTI


11 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ಅನುಭವ ಹೊಂದಿರುವ ಈ ಬರೋಡಾ ವೇಗಿ, 2000ನೇ ಇಸವಿಯಲ್ಲಿ ಅಕ್ಟೋಬರ್‌ನಲ್ಲಿ ಕೀನ್ಯಾ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪಾದರ್ಪಣೆ ಮಾಡಿದ್ದರು. ಅಲ್ಲಿಂದೀಚೆಗೆ ತಮ್ಮ ಕೆರಿಯರ್‌ನಲ್ಲಿ ಹಲವು ಏರುಬೀಳು, ಫಿಟೆನೆಸ್ ಹಾಗೂ ಗಾಯದ ಸಮಸ್ಯೆಗಳನ್ನು ಎದುರಿಸಿದ್ದ ಜಹೀರ್, ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವ ಮೂಲಕ ಒಬ್ಬ ಪರಿಪೂರ್ಣ ಸ್ವಿಂಗ್ ಬೌಲರ್ ಆಗಿ ಮೂಡಿ ಬರುವಲ್ಲಿ ಯಶಸ್ವಿಯಾಗಿದ್ದರು.

ಎರಡೂ ದಿಕ್ಕುಗಳಿಗೆ ಸ್ವಿಂಗ್ ಮಾಡಬಲ್ಲ ಸಾಮರ್ಥ್ಯವುಳ್ಳ ಜಹೀರ್ ಖಾನ್ ಅವರ ಇದೇ ಕೌಶಲ್ಯವನ್ನು ಪಾಕಿಸ್ತಾನದ ದಿಗ್ಗಜ ವೇಗಿ ವಾಸೀಮ್ ಅಕ್ರಂ ಸೇರಿದಂತೆ ಅನೇಕ ಮಾಜಿ ಕ್ರಿಕೆಟಿಗರು ಮುಕ್ತಕಂಠವಾಗಿ ಪ್ರಶಂಸಿಸಿದ್ದರು.

ಏಕದಿನಕ್ಕೆ ಕಾಲಿರಿಸಿದ್ದ ಒಂದೇ ತಿಂಗಳೊಳಗೆ ಟೆಸ್ಟ್ ಸರಣಿಗೂ ಪಾದರ್ಪಣೆ ಮಾಡಿಕೊಂಡಿದ್ದ ಜಹೀರ್, ಸೌರವ್ ಗಂಗೂಲಿ ನಾಯಕತ್ವದಲ್ಲಿ ಜಾವಗಲ್ ಶ್ರೀನಾಥ್ ಹಾಗೂ ಅಜಿತ್ ಅಗರ್‌ಕರ್ ಅವರಂತಹ ಅನುಭವಿ ಬೌಲರುಗಳ ಜತೆ ಕೆಲಸ ಮಾಡುವ ಅದೃಷ್ಟ ಪಡೆದಿದ್ದರು. ಆ ಪಂದ್ಯದಲ್ಲಿ ಮೂರು ವಿಕೆಟುಗಳನ್ನು ಕಬಳಿಸಿದ್ದ ಜಹೀರ್ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರು.

ಹಲವು ಬಾರಿ ಸ್ನಾಯು ಸೆಳೆತದ ಜೊತೆ ಹೋರಾಡಿ ಬಂದಿದ್ದ ಜಹೀರ್ ಖಾನ್ ಅವರಿಗೆ 2003-04ರ ಅವಧಿ ಪರೀಕ್ಷೆಯ ಕಾಲಘಟ್ಟವಾಗಿತ್ತು. ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದಲೂ 'ಬಿ' ಗ್ರೇಡ್‌ನಿಂದ 'ಸಿ' ದರ್ಜೆಗೆ ಹಿಂಬಡ್ತಿಯನ್ನೂ ಪಡೆದಿದ್ದರು. ಇದರಂತೆ 2005ರಲ್ಲಿ ತಂಡದಿಂದಲೂ ಹೊರಗಟ್ಟಲಾಗಿತ್ತ.ು

ಆದರೆ ಕ್ರಿಕೆಟ್‌ಗೆ ಮೂಲತತ್ವಕ್ಕೆ ಅಂಟಿಕೊಂಟಿದ್ದ ಜಹೀರ್, ದೇಶಿಯ ಕ್ರಿಕೆಟ್‌ನಲ್ಲಿ ಬರೋಡಾದಿಂದ ಮುಂಬೈಗೆ ಸ್ಥಳಾಂತರವಾದರು. 2006-07ರ ರಣಜಿ ಅವಧಿಯಲ್ಲಿ ಬಂಗಾಳ ವಿರುದ್ಧದ ಮೊದಲ ಪಂದ್ಯದಲ್ಲೇ ಒಂಬತ್ತು ವಿಕೆಟುಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಕೌಂಟಿ ಕ್ರಿಕೆಟ್ ಸಹ ಒಬ್ಬ ಪರಿಪೂರ್ಣ ಬೌಲರ್ ಆಗಿ ಮೂಡಿಬರಲು ಜಹೀರ್‌ಗೆ ನೆರವಾಗಿತ್ತು. 2006ರಲ್ಲಿ ವಾರ್ಕ್‌ಸ್ಟೆರ್‌ಶೈರ್ ಪರ ಡೆಬ್ಯುಟ್ ಮಾಡಿದ್ದ ಜಹೀರ್, ಚೊಚ್ಚಲ ಪಂದ್ಯದಲ್ಲೇ 10 ವಿಕೆಟುಗಳನ್ನು ಕಬಳಿಸಿದರು. ಇದು 100 ವರ್ಷದ ಇತಿಹಾಸದಲ್ಲೇ ವಾರ್ಕ್‌ಸ್ಟೆರ್‌ಶೈರ್ ಬೌಲರ್‌ ಒರ್ವನಿಂದ ಡೆಬ್ಯುಟ್ ಪಂದ್ಯದಲ್ಲೇ ದಾಖಲಾದ ಹತ್ತು ವಿಕೆಟುಗಳ ಸಾಧನೆಯಾಗಿದೆ.

ರಾಷ್ಟ್ರೀಯ ತಂಡಕ್ಕೆ ಭರ್ಜರಿ ಪುನರಾಗಮನ ಮಾಡಿಕೊಂಡಿದ್ದ ಜಹೀರ್, ವಿಕೆಟ್ ಟೆಕಿಂಗ್ ಬೌಲರ್ ಎನಿಸಿಕೊಂಡರು. ತಂಡದ ಪಾಲಿಗೆ ನಿರ್ಣಾಯಕ ಪಾತ್ರ ವಹಿಸುತ್ತಿದ್ದ ಜಹೀರ್, ಸ್ಲಾಗ್ ಓವರುಗಳಲ್ಲೂ ಅದ್ಭುತ ದಾಳಿ ಸಂಘಟಿಸಿದರು. ಇದರ ಪರಿಣಾಮವೆಂಬಂತೆ ಭಾರತ 28 ವರ್ಷಗಳ ನಂತರ ವಿಶ್ವಕಪ್ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.

ಪ್ರಸ್ತುತ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಜಹೀರ್, ಇಂಗ್ಲೆಂಡ್ ಪ್ರವಾಸಕ್ಕೆ ಅಲಭ್ಯರಾಗಿದ್ದಾರೆ. ಆದರೆ ಮುಂಬರುವ ಆಸ್ಟ್ರೇಲಿಯಾ ಪ್ರವಾಸದ ವೇಳೆ ಪುನರಾಮನ ಮಾಡಿಕೊಳ್ಳುವ ಭರವಸೆಯಲ್ಲಿದ್ದಾರೆ.

PTI


ಪೂರ್ಣ ಹೆಸರು: ಜಹೀರ್ ಖಾನ್
ಜನನ: ಅಕ್ಟೋಬರ್ 7, 1978, ಶ್ರೀರಾಮಪುರ, ಮಹಾರಾಷ್ಟ್ರ
ಪ್ರಮುಖ ತಂಡಗಳು: ಭಾರತ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ರಣಜಿ ತಂಡ, ಏಷ್ಯಾ ಇಲೆವೆನ್, ವಾರ್ಕ್‌ಸ್ಟೆರ್‌ಶೈರ್
ಪ್ರಮುಖ ಪಾತ್ರ: ಬೌಲರ್
ಬ್ಯಾಟಿಂಗ್ ಶೈಲಿ: ಬಲಗೈ
ಬೌಲಿಂಗ್ ಶೈಲಿ: ಎಡಗೈ ಮಧ್ಯಮಗತಿಯ ವೇಗಿ

ಏಕದಿನ ಕೆರಿಯರ್

ಬೌಲಿಂಗ್ ಸಾಧನೆ: ಪಂದ್ಯ- 191, ವಿಕೆಟ್- 273, ಅತ್ಯುತ್ತಮ ಬೌಲಿಂಗ್- 5/42, ಬೌಲಿಂಗ್ ಸರಾಸರಿ- 28.84, ಎಕಾನಮಿ- 4.91, 5 ವಿಕೆಟ್- 1, 4 ವಿಕೆಟ್- 7
ಬ್ಯಾಟಿಂಗ್ ಸಾಧನೆ: ಪಂದ್ಯ- 191, ರನ್- 781, ಗರಿಷ್ಠ- 34*, ಸರಾಸರಿ- 12.20, ಶತಕ- 0, ಅರ್ಧಶತಕ- 0 ಕ್ಯಾಚ್- 42

ಟೆಸ್ಟ್ ಕೆರಿಯರ್

ಬೌಲಿಂಗ್ ಸಾಧನೆ: ಪಂದ್ಯ- 79, ವಿಕೆಟ್- 273, ಅತ್ಯುತ್ತಮ ಬೌಲಿಂಗ್- 7/87, ಬೌಲಿಂಗ್ ಸರಾಸರಿ- 31.78, ಎಕಾನಮಿ- 3.28, 5 ವಿಕೆಟ್- 10, 4 ವಿಕೆಟ್- 13, 10 ವಿಕೆಟ್ (ಪಂದ್ಯವೊಂದರಲ್ಲಿ)- 1
ಬ್ಯಾಟಿಂಗ್ ಸಾಧನೆ: ಪಂದ್ಯ- 79, ರನ್- 1045, ಗರಿಷ್ಠ- 75*, ಸರಾಸರಿ- 12.74, ಶತಕ- 0, ಅರ್ಧಶತಕ- 3, ಕ್ಯಾಚ್- 18

ವೆಬ್ದುನಿಯಾವನ್ನು ಓದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments