Webdunia - Bharat's app for daily news and videos

Install App

ವಿರಾಟ್ ನನ್ನ ಪ್ಲೈಟ್ ಟಿಕೆಟ್ ಹಣ ವಾಪಸ್ ಕೊಡೊ: ಅನುಷ್ಕಾ !

Webdunia
ಶುಕ್ರವಾರ, 27 ಮಾರ್ಚ್ 2015 (12:05 IST)
ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಸೋಲುಗಳಿಸಿದ್ದಕ್ಕೆ ನಿರಾಶರಾಗಿರುವ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ಮನಬಂದಂತೆ ತಮ್ಮ ಆಕ್ರೋಶವನ್ನು ತೋರ್ಪಡಿಸುತ್ತಿದ್ದಾರೆ. ಕಳೆದೊಂದು ತಿಂಗಳಿಂದ ಭಾರತ ತಂಡವನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸಿದ್ದ ಅಭಿಮಾನಿಗಳು ಈಗ ತೆಗಳಿಕೆ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. 

ಅಭಿಮಾನಿಗಳ  ಕೋಪ ಪಂದ್ಯ ವೀಕ್ಷಿಸಲು ಸಿಡ್ನಿಗೆ ತೆರಳಿದ್ದ ಕೊಹ್ಲಿ ಪ್ರೇಯಸಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾಳನ್ನು ಬಿಟ್ಟಿಲ್ಲ. ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಫೇಸ್ಬುಕ್, ವಾಟ್ಸ್- ಅಪ್‌ಗಳಲ್ಲಿ ಕೊಹ್ಲಿ ವೈಫಲ್ಯಕ್ಕೆ ಅನುಷ್ಕಾಳನನ್ನು ದೂಷಿಸಿ ಟೀಕೆ, ವ್ಯಂಗ್ಯಗಳ ಸುರಿಮಳೆಯೇ ಸುರಿಯುತ್ತಿದೆ. ತಮಾಷೆಭರಿತವಾದ ಕಮೆಂಟ್‌ಗಳಲ್ಲಿ ಕೆಲವು ಇಲ್ಲಿವೆ ಓದಿ..
 
* ವಿರಾಟ್ ಕೊಹ್ಲಿ ಗಮನ ಆಟದ  ಬದಲಿಗೆ ಅನುಷ್ಕಾಳ ಕಡೆ ವಾಲಿದ್ದರಿಂದ ಅವರು ಕೇವಲ 1 ರನ್‌ಗೆ ಔಟಾಗಿ ಪೆವಿಲಿಯನ್‌ಗೆ 
 
ಮರಳಿದರು.
 
*ತಮ್ಮ ಗೆಳೆಯ 1 ಓವರ್ ಬೌಲಿಂಗ್ ಮಾಡುವುದನ್ನು, 1 ಕ್ಯಾಚ್ ಕೈ ಚೆಲ್ಲುವುದನ್ನು ಮತ್ತು, 1 ರನ್ ಗಳಿಸುವುದನ್ನು ನೋಡಲು 
 
ಅನುಷ್ಕಾ ಮುಂಬೈಯಿಂದ ಸಿಡ್ನಿಗೆ ಹೋಗಬೇಕಿತ್ತೇ?
 
*ಯಶಸ್ವಿ  ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂದು ಹೇಳುತ್ತಾರೆ. ಪುರುಷನ ಯಶಸ್ಸನ್ನು ಹಾಳುಗೆಡವುದರ ಹಿಂದೆಯೂ 
 
ಮಹಿಳೆ ಇರುತ್ತಾಳೆ. ಅದಕ್ಕೆ ಸಾಕ್ಷಿ ಅನುಷ್ಕಾ ಶರ್ಮಾ
 
*ಕೊಹ್ಲಿ ಬ್ಯಾಟಿಂಗ್‌ಗಿಳಿಯುವಾಗ ಶರ್ಮಾ ಜತೆ ಅಂಟಿಕೊಂಡಿರು ಎಂದು ಧೋನಿ ಹೇಳಿದ್ದರಂತೆ. ಧೋನಿ ಹೇಳಿದ್ದು ಕ್ರೀಸ್‌ನಲ್ಲಿದ್ದ 
 
ರೋಹಿತ್ ಶರ್ಮಾ ಬಗೆಗೆ, ಕೊಹ್ಲಿ ಅಂದುಕೊಂಡಿದ್ದು ವೀಕ್ಷಕರ ಗ್ಯಾಲರಿಯಲ್ಲಿದ್ದ ಅನುಷ್ಕಾ ಶರ್ಮಾ ಎಂದು.
 
*ನಾಯಕಿ ಕಂಡ ತಕ್ಷಣ ನಾಯಕ ವಿರೋಧಿಗಳ ವಿರುದ್ಧ ಸಿಡಿದು ನಿಲ್ಲಲು ಇದು ಸಿನಿಮಾವಲ್ಲ. 
 
* ಅನುಷ್ಕಾ: ಡಾರ್ಲಿಂಗ್ ತಡ ಮಾಡಬೇಡ, ಇಂದು ಡಿನ್ನರ್‌ಗೆ ಹೋಗೋಣ
  ಕೊಹ್ಲಿ: You dont worry My love, ನಾನು ಹೀಗೆ ಹೋಗಿ, ಹೀಗೆ ಬಂದೆ
 
*ಅನುಷ್ಕಾ: ಮೈದುನರ ದಿಬ್ಬಣದೊಂದಿಗೆ ಇದೋ ನಾನು ಹೊರಟೆ
 
* ಭಾರತ ತಂಡ ಲಗೇಜು ಪ್ಯಾಕ್ ಮಾಡುವುದಕ್ಕೆ ನೆರವಾಗಲು ಅನುಷ್ಕಾ ಸಿಡ್ನಿಗೆ ಹೋದರೆ?
 
* ಅನುಷ್ಕಾ: ವಿರಾಟ್ ನನ್ನ ಪ್ಲೈಟ್ ಟಿಕೆಟ್ ಹಣ ವಾಪಸ್ ಕೊಡೊ ದುರುಳ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments