Select Your Language

Notifications

webdunia
webdunia
webdunia
webdunia

ಶೂನ್ಯ ಸಂಪಾದನೆಯಲ್ಲೂ ದಾಖಲೆ ಮುರಿದ ನಾಯಕ ಧೋನಿ

ಶೂನ್ಯ ಸಂಪಾದನೆಯಲ್ಲೂ ದಾಖಲೆ ಮುರಿದ ನಾಯಕ ಧೋನಿ
ನವದೆಹಲಿ , ಮಂಗಳವಾರ, 23 ಡಿಸೆಂಬರ್ 2014 (09:36 IST)
ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸ್ಕೋರ್ ಮಾಡದಿರುವಾಗ ಕೂಡ ದಾಖಲೆಗಳನ್ನು ಮುರಿಯುತ್ತಿದ್ದಾರೆ. ಅಂಕಿಅಂಶಗಳ ಪ್ರಕಾರ, ಧೋನಿ ಭಾರತದ ಟೆಸ್ಟ್ ನಾಯಕನಾಗಿ ಇನ್ನೊಂದು ಪ್ರಥಮವನ್ನು ಸಾಧಿಸಿದ್ದಾರೆ.

ಶನಿವಾರ ಭಾರತ ಬ್ರಿಸ್ಬೇನ್ ಟೆಸ್ಟ್‌ನಲ್ಲಿ  4ವಿಕೆಟ್‌‍ಗಳಿಂದ ಸೋತಾಗ ಧೋನಿ ತಮ್ಮ 8ನೇ ಟೆಸ್ಟ್ ಶೂನ್ಯವನ್ನು ಸ್ಕೋರ್ ಮಾಡುವ ಮೂಲಕ 8 ಅಥವಾ ಅದಕ್ಕಿಂತ ಹೆಚ್ಚು ಶೂನ್ಯ ಸಂಪಾದನೆ ಮಾಡಿದ ಪ್ರಥಮ ಭಾರತದ ನಾಯಕರೆನಿಸಿದರು.

ಹಿಂದಿನ ಭಾರತದ ದಾಖಲೆಯನ್ನು ಮನ್ಸೂಲ್ ಅಲಿ ಖಾನನ್ ಪಟೌಡಿ ಹೊಂದಿದ್ದು, ನಾಯಕನಾಗಿ 7 ಬಾರಿ ಪಟೌಡಿ ತಮ್ಮ ಖಾತೆ ತೆರೆಯುವಲ್ಲಿ ವಿಫಲರಾಗಿದ್ದರು. ಧೋನಿ ಒಬ್ಬ ಯಶಸ್ವಿ ನಾಯಕರಾಗಿದ್ದು, ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ 2-0ಯಿಂದ ಭಾರತ ಹಿನ್ನಡೆ ಅನುಭವಿಸಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್ ಮತ್ತು ನಾಯಕ 8 ಸೊನ್ನೆಗಳಿಗೆ ಔಟಾದವರಲ್ಲಿ ಧೋನಿ ಮಾತ್ರ ಒಳಗೊಂಡಿದ್ದಾರೆ. ಒಟ್ಟಾರೆಯಾಗಿ ಧೋನಿ ಶೂನ್ಯ ಸಂಪಾದನೆ ಮಾಡಿದ ನಾಯಕರ ಪೈಕಿ ಪಟ್ಟಿಯಲ್ಲಿ ಮೂರನೆಯವರಾಗಿದ್ದು ನ್ಯೂಜಿಲೆಂಡ್ ನಾಯಕ ಫ್ಲೆಮಿಂಗ್ ಟೆಸ್ಟ್ ಕ್ರಿಕೆಟ್‌ನಲ್ಲಿ 13 ಬಾರಿ ಸೊನ್ನೆಗೆ ಔಟಾಗಿದ್ದಾರೆ.

Share this Story:

Follow Webdunia kannada