Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಗೆ ನಾಲ್ಕನೇ ಕ್ರಮಾಂಕ ಸೂಕ್ತ: ವಿವಿಯನ್ ರಿಚರ್ಡ್ಸ್

ವಿರಾಟ್ ಕೊಹ್ಲಿಗೆ ನಾಲ್ಕನೇ ಕ್ರಮಾಂಕ ಸೂಕ್ತ: ವಿವಿಯನ್ ರಿಚರ್ಡ್ಸ್
ಸಿಡ್ನಿ , ಶನಿವಾರ, 24 ಜನವರಿ 2015 (14:41 IST)
ಕಳಪೆ ಬ್ಯಾಟಿಂಗ್ ಫಾರ್ಮ್‌ನಿಂದಾಗಿ ಅಗ್ರಶ್ರೇಯಾಂಕದಿಂದ ನಾಲ್ಕನೇ ಸ್ತಾನಕ್ಕೆ ಕುಸಿತ ಕಂಡಿರುವ ಟೀಂ ಇಂಡಿಯಾ ತಂಡದ ಬ್ಯಾಟ್ಸ್‌ಮೆನ್ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿ ಆಡಿದಲ್ಲಿ ಯಶಸ್ಸು ಕಾಣಬಹುದು ಎಂದು ವೆಸ್ಟ್ ಇಂಡೀಸ್‌‌ನ ಹಿರಿಯ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಹೇಳಿದ್ದಾರೆ.
 
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡ ಪ್ರಸ್ತುತ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ತ್ರೀಕೋನ ಸರಣಿಯಲ್ಲಿ ಪಾಲ್ಗೊಂಡಿದೆ.
 
ಮೆಲ್ಬೋರ್ನ್ ಮತ್ತು ಬ್ರೆಸ್ಬೆನ್‌ನಲ್ಲಿ ನಡೆದ ಪಂದ್ಯಗಳಲ್ಲಿ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿ ಆಡಿ ಕೇವಲ 9 ಮತ್ತು 4 ರನ್‌ಗಳನ್ನು ಮಾತ್ರ ಗಳಿಸಲು ಯಶಸ್ವಿಯಾಗಿದ್ದರು. ಆದರೆ, ಕೊಹ್ಲಿ ನಾಲ್ಕನೇ ಸ್ಥಾನದಲ್ಲಿ ಆಡಿದಲ್ಲಿ ಮಾತ್ರ ಎದುರಾಳಿ ತಂಡದ ಮೊತ್ತವನ್ನು ಹಿಂದಿಕ್ಕಿಲು ಸಾಧ್ಯ ಎಂದು ಧೋನಿ ಅಭಿಪ್ರಾಯಪಟ್ಟಿದ್ದಾರೆ.
 
ಯಾವುದೇ ಬ್ಯಾಟ್ಸ್‌ಮೆನ್‌ಗೆ ತಂಡದ ನಾಲ್ಕನೇ ಸ್ಥಾನದಲ್ಲಿ ಆಡುವುದು ಉತ್ತಮ ಎನ್ನುವುದೇ ನನ್ನ ಅಭಿಪ್ರಾಯವಾಗಿದೆ ಎಂದು ರಿಚರ್ಡ್ಸ್ ತಿಳಿಸಿದ್ದಾರೆ.
 

Share this Story:

Follow Webdunia kannada