Select Your Language

Notifications

webdunia
webdunia
webdunia
webdunia

. ಅನುಷ್ಕಾ ಗುಂಗಿನಲ್ಲಿರುವ ಕೊಹ್ಲಿ ಕ್ರಿಕೆಟ್ ಆಟವನ್ನು ಮರೆತರೇ?

. ಅನುಷ್ಕಾ ಗುಂಗಿನಲ್ಲಿರುವ ಕೊಹ್ಲಿ  ಕ್ರಿಕೆಟ್ ಆಟವನ್ನು ಮರೆತರೇ?
ಲಂಡನ್ , ಶನಿವಾರ, 19 ಜುಲೈ 2014 (18:51 IST)
ವಿರಾಟ್  ಕೊಹ್ಲಿ ಅವರು ಇಂಗ್ಲೆಂಡ್‌ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ಮಾಡುತ್ತಿರುವುದು ಅಭಿಮಾನಿಗಳನ್ನು ನಿರಾಶೆಗೊಳಿಸಿದೆ. ಆದರೆ ಕೊಹ್ಲಿ ಇದಕ್ಕೆ ತಲೆಕೆಡಿಸಿಕೊಳ್ಳದೇ ಆಟದ ಜೊತೆ ಸ್ವಲ್ಪ ಪ್ರೇಮವೂ ಮಿಕ್ಸ್ ಆಗಿರಲಿ ಎಂದು ಅನುಷ್ಕಾ ಜೊತೆ ಜಾಲಿಯಾಗಿ ಕಳೆಯುತ್ತಿದ್ದಾರೆ.

ಇದಕ್ಕೆ ಬಿಸಿಸಿಐ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿರುವುದು ವಿರಾಟ್‌ಗೆ ಆಕಾಶಕ್ಕೆ ಎರಡೇ ಗೇಣು ಎಂಬ ಖುಷಿಯಲ್ಲಿದ್ದಾರೆ.  ಟೀಂ ಇಂಡಿಯಾ ತಂಗಿದ್ದ ಹೊಟೆಲ್ ಕೋಣೆಯಿಂದ ಹೊರಬಿದ್ದ ವಿರಾಟ್ ಅನುಷ್ಕಾ ಶರ್ಮಾ ಜೊತೆ ರಾಜಾರೋಷವಾಗಿ ತಿರುಗುತ್ತಿದ್ದಾರೆ. 
 
  ಕದ್ದು ಮುಚ್ಚಿ ಪ್ರೀತಿ ಪ್ರೇಮ ಎಂದು ಸುತ್ತಾಡುತ್ತಿದ್ದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಮಿಲನಕ್ಕೆ ಬಿಸಿಸಿಐ ಅನುಮತಿ ನೀಡಿರುವಂತೆ ಕಾಣುತ್ತಿದೆ. ಕೊಹ್ಲಿ ಮತ್ತು ಅನುಷ್ಕಾ ಇಂಗ್ಲೆಂಡ್‌ನಲ್ಲಿ ಒಂದೇ ಕೋಣೆಯನ್ನು ಹಂಚಿಕೊಂಡು ಸುಖಲೋಲುಪತೆಯಲ್ಲಿ ಮೈಮರೆತಿದ್ದಾರೆ.

ಸುಮಾರು 45 ದಿನಗಳವೆರೆಗೆ ಕೊಹ್ಲಿ ಮತ್ತು ಅನುಷ್ಕಾ ಮಿಲನಮಹೋತ್ಸವಕ್ಕೆ ಅಡ್ಡಿಯಿಲ್ಲದಂತಾಗಿದೆ. ಆದರೆ ಅನುಷ್ಕಾ ಗುಂಗಿನಲ್ಲಿ ಕೊಹ್ಲಿ ಕ್ರಿಕೆಟ್ ಆಟವನ್ನು ಮರೆಯುತ್ತಿದ್ದಾರೆಯೇ ಎಂಬ ಭಾವನೆ ಮೂಡಿದೆ. ಏಕೆಂದರೆ ಕಳೆದ ಎರಡು ಟೆಸ್ಟ್‌ಗಳಲ್ಲಿ ವಿರಾಟ್ ಕೊಹ್ಲಿ ಅಷ್ಟೊಂದು ಉತ್ತಮ ಪ್ರದರ್ಶನ ನೀಡದೇ ಅಭಿಮಾನಿಗಳನ್ನು ನಿರಾಶೆಗೊಳಿಸಿದ್ದಾರೆ. 

Share this Story:

Follow Webdunia kannada