Select Your Language

Notifications

webdunia
webdunia
webdunia
webdunia

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ವಜಾ ಮಾಡಬೇಕು: ಸುಪ್ರೀಂಕೋರ್ಟ್ ಸೂಚನೆ

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ವಜಾ ಮಾಡಬೇಕು: ಸುಪ್ರೀಂಕೋರ್ಟ್ ಸೂಚನೆ
ನವದೆಹಲಿ , ಗುರುವಾರ, 27 ನವೆಂಬರ್ 2014 (12:29 IST)
ಚೆನ್ನೈ ಸೂಪರ್ ಕಿಂಗ್ಸ್ ಅಧಿಕಾರಿ ಗುರುನಾಥ್ ಮೇಯಪ್ಪನ್ ಅವರು ಬೆಟ್ಟಿಂಗ್‌ನಲ್ಲಿ ತಪ್ಪಿತಸ್ಥರು ಎಂದು ಮುದ್ಗಲ್ ಸಮಿತಿ ವರದಿ ನೀಡಿರುವುದರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಯಾವುದೇ ತನಿಖೆಯಿಲ್ಲದೇ ಯಾಕೆ  ವಜಾ ಮಾಡಬಾರದೆಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. 

ಮೇಯಪ್ಪನ್ ಅವರು ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರ ಅಳಿಯರಾಗಿದ್ದು, ಶ್ರೀನಿವಾಸನ್ ಸ್ವತಃ ಸಂಘರ್ಘ ಹಿತಾಸಕ್ತಿ ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ. ಈ ವಾರದ ಆರಂಭದಲ್ಲಿ ಸುಪ್ರೀಂಕೋರ್ಟ್ ಶ್ರೀನಿವಾಸನ್ ಅವರನ್ನು ತರಾಟೆಗೆ ತೆಗೆದುಕೊಂಡು, ಐಪಿಎಲ್ ಅಧ್ಯಕ್ಷರಾಗಿ ನಿಮ್ಮ ಕೆಲಸ ಐಪಿಎಲ್ ಪಂದ್ಯಾವಳಿಯನ್ನು ನಿರ್ವಹಿಸುವುದು ಮತ್ತು ಅದನ್ನು ಸ್ವಚ್ಛವಾಗಿಡುವುದು.

ಟೀಂ ಮಾಲೀಕರಾಗಿ ನಿಮ್ಮ ಕರ್ತವ್ಯವೇನು? ಪಂದ್ಯಾವಳಿಯಲ್ಲಿ ಗೆಲ್ಲುವುದು. ಎರಡು ಬಾರಿಯ ಚಾಂಪಿಯನ್ ಸಿಎಸ್‌ಕೆಯನ್ನು ಯಾರು ನಿಯಂತ್ರಿಸುತ್ತಿದ್ದಾರೆ ಎಂದು ಗುರುವಾರದ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ತಿಳಿಯಬಯಸಿತು.

ಬಿಸಿಸಿಐ ಅಧ್ಯಕ್ಷರಾಗಿ ಶ್ರೀನಿವಾಸನ್ ಸ್ಥಾನ ನ್ಯಾಯಸಮ್ಮತ ಪಂದ್ಯಾವಳಿ ನಿರ್ವಹಿಸಲು ಅಡ್ಡಿಯಾಗುತ್ತದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ಈ ಹಂತದಲ್ಲಿ ಬಿಸಿಸಿಐಯನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯನ್ನು ಏಕೆ ವಜಾ ಮಾಡಬಾರದು ಎಂದು ಪ್ರಶ್ನಿಸಿತು.

ಮೇಯಪ್ಪನ್ ವಿರುದ್ಧ ಏಕೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಕೋರ್ಟ್ ಪ್ರಶ್ನಿಸಿತು. ಶ್ರೀನಿವಾಸನ್ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದಂತೆ ಕೂಡ ತಿಳಿಸಿದೆ. ಬಿಸಿಸಿಐಗೆ ಹೊಸ ಆಡಳಿತ ಮಂಡಳಿ ರಚಿಸಬೇಕೆಂದು ಕೂಡ ಸೂಚಿಸಿದೆ.

Share this Story:

Follow Webdunia kannada