Select Your Language

Notifications

webdunia
webdunia
webdunia
webdunia

ಸುನಿಲ್ ನಾರಾಯಣ್ ಶಂಕಿತ ಬೌಲಿಂಗ್‌ಗೆ ಎಚ್ಚರಿಕೆ

ಸುನಿಲ್ ನಾರಾಯಣ್ ಶಂಕಿತ ಬೌಲಿಂಗ್‌ಗೆ ಎಚ್ಚರಿಕೆ
ಕೊಲ್ಕತ್ತಾ , ಮಂಗಳವಾರ, 30 ಸೆಪ್ಟಂಬರ್ 2014 (20:20 IST)
ವೆಸ್ಟ್ ಇಂಡೀಸ್ ನಿಗೂಢ ಸ್ಪಿನ್ನರ್ ಸುನಿಲ್ ನಾರಾಯಣ್ ಅವರು ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಡಾಲ್ಫಿನ್ಸ್ ನಡುವೆ ಚಾಂಪಿಯನ್ಸ್ ಲೀಗ್ ಪಂದ್ಯದಲ್ಲಿ ಶಂಕಿತ ಬೌಲಿಂಗ್ ಶೈಲಿಯನ್ನು ಮಾಡಿದ್ದಾರೆಂದು ವರದಿಯಾಗಿದೆ.
 
ಸಿಎಲ್‌ಟಿ 20 ಸಂಘಟನಾ ಸಮಿತಿಯು ಮಾಧ್ಯಮ ಪ್ರಕಟಣೆಯನ್ನು ನೀಡಿದ್ದು, ಈ ಬೆಳವಣಿಗೆಯನ್ನು ಖಚಿತಪಡಿಸಿದೆ.  ಮೈದಾನದಲ್ಲಿದ್ದ ಅಂಪೈರ್‌ಗಳಾದ ಅನಿಲ್ ಚೌಧರಿ ಮತ್ತು ಚೆಟ್ಟಿಹೋಡಿ ಶಾಮ್ಸುದ್ದೀನ್ ಮತ್ತು ಮೂರನೇ ಅಂಪೈರ್ ಧರ್ಮಸೇನ, ನಾರಾಯಣ್ ಅವರ ವೇಗದ ಎಸೆತದ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
 
ಶಂಕಿತ ಅಕ್ರಮ ಬೌಲಿಂಗ್ ಶೈಲಿ ನೀತಿಯ ಪ್ರಕಾರ, ಬಿಸಿಸಿಐ ಶಂಕಿತ ಬೌಲಿಂಗ್ ಆಕ್ಷನ್ ಸಮಿತಿಯಿಂದ ಅಧಿಕೃತ ವರದಿಗೆ ಮನವಿ ಮಾಡಬಹುದು. ನಾರಾಯಣ್ ಅವರನ್ನು ಎಚ್ಚರಿಕೆಯ ಪಟ್ಟಿಯಲ್ಲಿ ಇಡಲಾಗಿದ್ದು, ಪಂದ್ಯದಲ್ಲಿ ತಂಡಕ್ಕೆ ಬೌಲಿಂಗ್ ಮುಂದುವರಿಸಬಹುದು ಎಂದು ಪ್ರಕಟಣೆ ತಿಳಿಸಿದೆ.ಆದರೆ ನಾರಾಯಣ್ ಇದೇ ರೀತಿಯ ಬೌಲಿಂಗ್ ಶೈಲಿ ಮುಂದುವರಿಸಿದರೆ, ಚಾಂಪಿಯನ್ಸ್ ಲೀಗ್ ಟಿ20ಯ ಮುಂದಿನ ಪಂದ್ಯಗಳಲ್ಲಿ ಬೌಲಿಂಗ್‌ನಲ್ಲಿ ನಿಷೇಧ ವಿಧಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. 

Share this Story:

Follow Webdunia kannada