Webdunia - Bharat's app for daily news and videos

Install App

ಅಬಾಟ್ ಕ್ರಿಕೆಟ್‌ನಲ್ಲಿ ಮುಂದುವರಿಯಬೇಕೇ: ವಾಖರ್ ಯೂನಿಸ್ ಪ್ರಶ್ನೆ

Webdunia
ಶುಕ್ರವಾರ, 28 ನವೆಂಬರ್ 2014 (19:01 IST)
ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಫಿಲಿಪ್ ಹ್ಯೂಸ್ ಸಾವಿಗೆ ಕಾರಣವಾದ ಬೌನ್ಸರ್ ಪ್ರಯೋಗಿಸಿದ ಸೀನ್ ಅಬಾಟ್ ಕ್ರಿಕೆಟ್‌ನಲ್ಲಿ ಮುಂದುವರಿಯಬೇಕೇ ಎಂದು ಪಾಕಿಸ್ತಾನದ ಮಾಜಿ ಬೌಲರ್ ವಾಕರ್ ಯೂನಿಸ್ ಪ್ರಶ್ನಿಸಿದ್ದಾರೆ.

ದಕ್ಷಿಣ ಆಸ್ಟ್ರೇಲಿಯಾ ಪರವಾಗಿ ನ್ಯೂ ಸೌತ್ ವೇಲ್ಸ್ ವಿರುದ್ಧ ಬ್ಯಾಟಿಂಗ್ ಆಡುತ್ತಿದ್ದ ಹ್ಯೂಸ್ ಅಬಾಟ್‌ನ ಮಾರಕ ಬೌನ್ಸರ್ ಎಸೆತವೊಂದು ತಲೆಬುರುಡೆಯ ಕೆಳಕ್ಕೆ ಬಡಿದು ಸಾವನ್ನಪ್ಪಿದ್ದರು.
 
ಹೆಲ್ಮೆಟ್ ರಕ್ಷಣೆಯಿರದ ಕುತ್ತಿಗೆಯ ಮೇಲ್ಬಾಗದಲ್ಲಿ ಚೆಂಡು ಹ್ಯೂಸ್ ಅವರಿಗೆ ಬಡಿದಿತ್ತು. ಅಬಾಟ್ ಅವರಿಗೆ ಕೌನ್ಸಲಿಂಗ್ ಆಗತ್ಯವಿದ್ದು, ಅವರು ಶಾಂತಚಿತ್ತರಾಗಿ ಇರಬೇಕು ಎಂದು ಯೂನಿಸ್ ಹೇಳಿದರು.
 
ಆದರೆ ಇಂಗ್ಲೆಂಡ್ ಮಾಜಿ ವೇಗಿ ಡೇವಿಡ್ ಲಾರೆನ್ಸ್ ,ಅಬಾಟ್ ಈ ದುರಂತದಿಂದಾಗಿ ಮತ್ತೆ ಕ್ರಿಕೆಟ್ ಆಡುವುದಿಲ್ಲವೆಂಬ ಭಯ ಉಂಟಾಗಿದೆ ಎಂದು ಹೇಳಿದ್ದಾರೆ. ಅಬಾಟ್ ಸ್ಥಿತಿಯನ್ನು ಲಾರೆನ್ಸ್ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸೂಕ್ತ ವ್ಯಕ್ತಿ.

ಏಕೆಂದರೆ ಗ್ಲೌಸೆಸ್ಟರ್‌‍ಶೈರ್ ವೇಗಿಯಾಗಿದ್ದ ಲಾರೆನ್ಸ್ ಎಸೆತವೊಂದು ವೆಸ್ಟ್ ಇಂಡೀಸ್ ಆಟಗಾರ ಫಿಲ್ ಸಿಮ್ಮನ್ಸ್‌ಗೆ ಬಡಿದಿದ್ದರಿಂದ ಅವರ ಹೃದಯಬಡಿತ ನಿಂತುಹೋಗಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿ ಸಿಮ್ಮನ್ಸ್ ಜೀವವುಳಿಸಲಾಗಿತ್ತು.

ಆಗ ಲಾರೆನ್ಸ್ ಮನಸ್ಸಿನ ನೋವು, ಯಾತನೆ ವರ್ಣಿಸಲು ಸಾಧ್ಯವಿಲ್ಲ. ತಾವು ಸಿಮ್ಮನ್ಸ್ ಜೊತೆ ಮಾತನಾಡಿದ್ದು ತುಂಬಾ ನೆರವಾಯಿತು. ಆದರೆ ಇಂತಹ ಸಮಾಧಾನದ ಮಾತಿಲ್ಲದೇ ಆಬಾಟ್ ಹೇಗೆ ಬೌಲಿಂಗ್ ಮುಂದುವರಿಸುತ್ತಾರೆನ್ನುವುದೇ ಪ್ರಶ್ನೆಯಾಗಿದೆ ಎಂದು ಲಾರೆನ್ಸ್ ಹೇಳಿದ್ದಾರೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments