Select Your Language

Notifications

webdunia
webdunia
webdunia
webdunia

17 ವರ್ಷದ ಬಾಲಕಿಯನ್ನು ವಿವಾಹವಾಗುತ್ತಿರುವ ಶೋಯಿಬ್ ಅಖ್ತರ್

17 ವರ್ಷದ ಬಾಲಕಿಯನ್ನು ವಿವಾಹವಾಗುತ್ತಿರುವ ಶೋಯಿಬ್ ಅಖ್ತರ್
ಇಸ್ಲಾಮಾಬಾದ್ , ಶನಿವಾರ, 7 ಜೂನ್ 2014 (16:32 IST)
ವಿಶ್ವದಲ್ಲಿಯೇ ಅಪಾಯಕಾರಿ ಬೌಲರ್ ರಾವಲ್‌ಪಿಂಡಿ ಎಕ್ಸ್‌ಪ್ರೆಸ್ ಎನ್ನುವ ಖ್ಯಾತಿ ಪಡೆದ ಶೋಯಿಬ್ ಅಖ್ತರ್ ಕೊನೆಗೂ ಮದುವೆಯಾಗಲು ನಿರ್ಧರಿಸಿದ್ದಾರೆ. ಉದ್ಯಮಪತಿಯೊಬ್ಬರ 17 ವರ್ಷ ವಯಸ್ಸಿನ ಪುತ್ರಿಯನ್ನು ವಿವಾಹವಾಗಲಿದ್ದಾರೆ. 
 
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಾಮೆಂಟರಿ ಹೇಳಲು ಭಾರತಕ್ಕೆ ಬಂದಿದ್ದ ಅಖ್ತರ್ ಟಿವಿ ಚಾನೆಲ್‌‌ನಲ್ಲಿ ತಮ್ಮ ಕ್ರಿಕೆಟ್ ಜೀವನ ಸೇರಿದಂತೆ ಜೂನ್ ಮೂರನೇ ವಾರದಲ್ಲಿ ವಿವಾಹವಾಗುತ್ತಿರುವುದಾಗಿ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದರು. 
 
ಪಾಕ್ ಮಾಧ್ಯಮಗಳ ಪ್ರಕಾರ, ವಿವಾಹ ಕಾರ್ಯಕ್ರಮಗಳಿಗೆ ಹಾಜರಾಗಲು ಶೋಯಿಬ್ ಅಖ್ತರ್ ಜೂನ್ 12 ರಂದು ತವರೂರಾದ ರಾವಲ್‌ಪಿಂಡಿಗೆ ಭೇಟಿ ನೀಡುತ್ತಿದ್ದಾರೆ. ಕಳೆದ ವರ್ಷವಷ್ಟೆ ಅಬ್ಬೊತಾಬಾದ್‌ನಲ್ಲಿ ಪಿಯುಸಿ ಪರೀಕ್ಷೆ ಬರೆದ ಶೋಯಿಬ್ ಭಾವಿ ಪತ್ನಿ ರುಬಾಬ್‌ಗೆ ಮೂವರು ಅಣ್ಣಂದಿರಿದ್ದು, ಒಬ್ಬಳು ಕಿರಿಯ ಸಹೋದರಿಯಿದ್ದಾಳೆ     
 
ವರದಿಗಳ ಪ್ರಕಾರ, ಕಳೆದ ವರ್ಷ ಅಖ್ತರ್ ಕುಟುಂಬ ಹಜ್ ಪ್ರವಾಸದಲ್ಲಿದ್ದಾಗ ಹರಿಪುರ್‌ ನಗರದ ಉದ್ಯಮಿ ಮುಷ್ತಾಖ್ ಖಾನ್ ಅವರನ್ನು ಭೇಟಿಯಾದಾಗ ಶೋಯಿಬ್ ಮತ್ತು ರುಬಾಬ್ ವಿವಾಹದ ಬಗ್ಗೆ ನಿರ್ಧರಿಸಲಾಗಿದೆ ಎನ್ನಲಾಗಿದೆ.    

Share this Story:

Follow Webdunia kannada