Select Your Language

Notifications

webdunia
webdunia
webdunia
webdunia

ಎರಡನೇ ಟೆಸ್ಟ್: ಒಂದು ವಿಕೆಟ್ ಕಳೆದುಕೊಂಡ ಭಾರತ 89 ರನ್

ಎರಡನೇ ಟೆಸ್ಟ್: ಒಂದು ವಿಕೆಟ್ ಕಳೆದುಕೊಂಡ ಭಾರತ  89 ರನ್
ಬ್ರಿಸ್ಬೇನ್ , ಬುಧವಾರ, 17 ಡಿಸೆಂಬರ್ 2014 (09:49 IST)
ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-0ಯಿಂದ ಹಿನ್ನಡೆ ಅನುಭವಿಸಿರುವ ಭಾರತ ಬ್ರಿಸ್ಬೇನ್ ಬೌನ್ಸ್ ಪಿಚ್‌ನಲ್ಲಿ ಮೊದಲ ಬ್ಯಾಟಿಂಗ್ ಆಯ್ಕೆಮಾಡಿಕೊಂಡಿದ್ದಾರೆ. ಆರಂಭಿಕ ಆಟಗಾರರಾದ ಮುರಳಿ ವಿಜಯ್ ಮತ್ತು ಶಿಖರ್ ಧವನ್ ಮೂರು ವರ್ಷಗಳಿಗಿಂತ ಹೆಚ್ಚು ಸಮಯದಿಂದೀಚೆಗೆ ಭಾರತದ ಪ್ರಥಮ ಅರ್ಧಶತಕವನ್ನು ದಾಖಲಿಸಿದರು.

ಪ್ರವಾಸಿ ತಂಡ ಭೋಜನವಿರಾಮದ ವೇಳೆ ಒಂದು ವಿಕೆಟ್ ಕಳೆದುಕೊಂಡು 89 ರನ್ ಗಳಿಸಿದೆ.ಜಾನ್‌ಸನ್ ಬೌಲಿಂಗ್‌ನಲ್ಲಿ ಕೆಲವು ಆತಂಕಕಾರಿ ಕ್ಷಣಗಳ ಬಳಿ ಓಪನರ್‌ಗಳು ಸ್ಥಿರವಾಗಿ ನಿಂತು ಆಫ್‌ಸೈಡ್ ಆಚೆ ಬರುತ್ತಿದ್ದ ಚೆಂಡುಗಳನ್ನು ಹೊಡೆಯದೇ ಹಾಗೇ ಬಿಟ್ಟರು.
 
ಭಾರತದ ಓಪನರ್‌ಗಳು ಆಫ್‌ಸ್ಟಂಪ್‌ನಿಂದಾಚೆ  ಬಂದ ಯಾವುದೇ ಎಸೆತವನ್ನು ಮುಟ್ಟಲಿಲ್ಲ, ಅವರ ಸಹನೆ ಲಾಭ ತಂದುಕೊಟ್ಟಿತು ಮತ್ತು ಇವರಿಬ್ಬರು 12..1 ಓವರುಗಳಲ್ಲಿ 50 ರನ್ ಮುಟ್ಟಿದರು. 
 
ಆದಾಗ್ಯೂ ಮಿಚೆಲ್ ಮಾರ್ಶ್ ಬೌಲಿಂಗ್‌ನಲ್ಲಿ ಧವನ್ 24 ರನ್‌ಗಳಾಗಿದ್ದಾಗ, ವಿಕೆಟ್ ಕೀಪರ್‌ಗೆ ಕ್ಯಾಚಿತ್ತು ಔಟಾದರು. ಜಾನ್ಸನ್ ಎಸೆತದಲ್ಲಿ ಮುರಳಿ ವಿಜಯ್ ಬ್ಯಾಟಿನ ತುದಿಗೆ ತಾಕಿ ಹಾರಿದ ಚೆಂಡನ್ನು ಹಿಡಿಯಲು ಶಾನ್ ಮಾರ್ಷ್ ವಿಫಲರಾಗಿದ್ದರಿಂದ ಮುರಳಿ ವಿಜಯ್  ಒಂದು ಜೀವದಾನ ಪಡೆದರು. ವಿಜಯ್ ಮತ್ತು ಚೇತೇಶ್ವರ್ ಪೂಜಾರ್ ಭೋಜನವಿರಾಮದ ವೇಳೆಗೆ  ಕ್ರಮವಾಗಿ 46 ಮತ್ತು 15 ರನ್‌ಗಳೊಂದಿಗೆ ಆಡುತ್ತಿದ್ದಾರೆ.  

25 ಓವರುಗಳಲ್ಲಿ ಕೇವಲ 8 ಬೌಂಡರಿಗಳನ್ನು ಹೊಡೆದಿದ್ದು ಭಾರತದ ಎಚ್ಚರಿಕೆಯ ಆಟಕ್ಕೆ ಮಾನದಂಡವಾಗಿದ್ದು, 8 ಬೌಂಡರಿಗಳ ಪೈಕಿ ವಿಜಯ್ 7 ಬೌಂಡರಿಗಳನ್ನು ಬಾರಿಸಿದ್ದಾರೆ. ಕೊನೆಯಲ್ಲಿ ಆಶಿಸ್‌ನ ನಾಥನ್ ಲೈಯಾನ್ ತನ್ನ ಆಫ್‌ಸ್ಪಿನ್ ಬೌಲಿಂಗ್‌ನಿಂದ ಪೂಜಾರಾ ತಿಣುಕಾಡುವಂತೆ ಮಾಡಿದರು. 

Share this Story:

Follow Webdunia kannada