Webdunia - Bharat's app for daily news and videos

Install App

ಸೌರವ್ ಗಂಗೂಲಿ ನನ್ನ ಅಚ್ಚುಮೆಚ್ಚಿನ ನಾಯಕ: ಯುವರಾಜ್ ಸಿಂಗ್

Webdunia
ಶನಿವಾರ, 25 ಅಕ್ಟೋಬರ್ 2014 (18:25 IST)
ಫಾರಂನಲ್ಲಿಲ್ಲದ ಮತ್ತು ಟೀಂಇಂಡಿಯಾದ ಏಕದಿನ ಪಂದ್ಯಾವಳಿಗೆ ಮತ್ತೆ ಮರಳುವ ಭರವಸೆ ಇಟ್ಟುಕೊಂಡಿರುವ ಯುವರಾಜ್ ಸಿಂಗ್ ತಾವು ಸೌರವ್ ಗಂಗೂಲಿ ನಾಯಕತ್ವದಲ್ಲಿ ಹೆಚ್ಚಾಗಿ ಅರಳಿದ್ದಾಗಿ ತಿಳಿಸಿದ್ದು, ತಾವು ಆಡಿದ ನಾಯಕರಲ್ಲಿ ಸೌರವ್ ಗಂಗೂಲಿ ನೆಚ್ಚಿನವರು ಎಂದು ಹೇಳಿದ್ದಾರೆ.
 
 ಯುವರಾಜ್ ಮಾಧ್ಯಮದ ಜೊತೆ ಮಾತನಾಡುತ್ತಾ, ಮೈದಾನದ ಹೊರಗೆ ಮತ್ತು ಮೈದಾನದ ಒಳಗಿನ ವಿಷಯಗಳನ್ನು ಎತ್ತಿಕೊಂಡು ಮಾತನಾಡಿದರು. ವಿಶೇಷವಾಗಿ ಜೀವಕ್ಕೆ ಬೆದರಿಕೆಯೊಡ್ಡಿದ ಕ್ಯಾನ್ಸರ್ ಮತ್ತು ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಮಾತನಾಡಿದರು.ಶ್ವಾಸಕೋಶದ ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿದ್ದು, ನನ್ನ ಜೀವನದ ಅತ್ಯಂತ ಕಠಿಣ ಹಂತ ಎಂದು ಹೇಳಿದರು.
 
 ನನ್ನ ಮೆಚ್ಚಿನ ನಾಯಕ ಗಂಗೂಲಿ. ಅವರಿಂದ ನನ್ನ ವೃತ್ತಿಜೀವನದಲ್ಲಿ ಅನೇಕ ವಿಷಯ ಕಲಿತೆ.ನಾವು ವಿದೇಶದಲ್ಲಿ ಸರಣಿ ಗೆಲ್ಲಬಹುದೆಂಬ ಭಾವನೆಯನ್ನು ಅವರು ಹುಟ್ಟುಹಾಕಿದರು ಎಂದು ಹೇಳಿದ್ದಾರೆ. ಭಾರತಕ್ಕೆ ವಿಶ್ವ ಕಪ್ ಗೆಲ್ಲಿಸಿಕೊಟ್ಟ ಕೋಚ್ ಗ್ಯಾರಿ ಕಿರ್ಸ್ಟನ್ ಅವರ ಮಾರ್ಗದರ್ಶನದಲ್ಲಿ ತಾನು ಕೌಶಲ್ಯ ವೃದ್ಧಿಸಿಕೊಂಡಿದ್ದಾಗಿ ಯುವರಾಜ್ ಹೇಳಿದ್ದಾರೆ. ಪ್ರಸ್ತುತ ಭಾರತದ ನಾಯಕ ಧೋನಿಯನ್ನು ಕೂಡ ಶ್ಲಾಘಿಸಿದ ಅವರು, ಎಲ್ಲ ಮೂರು ಸ್ವರೂಪದ ಆಟಗಳಲ್ಲಿ ಅವರು ಶ್ಲಾಘನೀಯ ಕೆಲಸ ಮಾಡಿದ್ದು,ಅವರನ್ನು ಬದಲಿಸುವ ಅಗತ್ಯವಿಲ್ಲ ಎಂದು ನುಡಿದರು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments