Select Your Language

Notifications

webdunia
webdunia
webdunia
webdunia

ಸಾನಿಯಾ ಜೊತೆ ವೈವಾಹಿಕ ಜೀವನದಲ್ಲಿ ಬಿರುಕಿಲ್ಲ: ಶೋಯಬ್ ಸ್ಪಷ್ಟನೆ

ಸಾನಿಯಾ ಜೊತೆ ವೈವಾಹಿಕ ಜೀವನದಲ್ಲಿ ಬಿರುಕಿಲ್ಲ: ಶೋಯಬ್ ಸ್ಪಷ್ಟನೆ
ಕರಾಚಿ , ಶನಿವಾರ, 20 ಡಿಸೆಂಬರ್ 2014 (13:29 IST)
ಪಾಕಿಸ್ತಾನ ಕ್ರಿಕೆಟ್  ಹಿರಿಯ ಆಲ್ ರೌಂಡರ್  ಶೋಯಬ್ ಮಲಿಕ್ ತಾವು ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಜೊತೆ ಸಂತೋಷದ ವೈವಾಹಿಕ ಜೀವನ ನಡೆಸುತ್ತಿದ್ದು, ದಂಪತಿ ನಡುವೆ ಯಾವುದೇ ಭಿನ್ನಾಭಿಪ್ರಾ.ಯವಿಲ್ಲ ಎಂದು ಹೇಳಿದ್ದಾರೆ. ಈಗಲೂ ಕೂಡ ಸಾನಿಯಾ ಮತ್ತು ನಾನು ದುಬೈನಲ್ಲಿದ್ದು, ಸಾಧ್ಯವಾದಷ್ಟು ಸಮಯ ಒಟ್ಟಿಗೆ ಕಳೆಯಲು ಬಯಸುತ್ತೇವೆ.

ಆದರೆ ವೃತ್ತಿಪರ ಆಟಗಾರರಾಗಿ ಇತರೆ ಬದ್ಧತೆಗಳನ್ನೂ ನಾವು ಪೂರೈಸಬೇಕಾಗಿದ್ದು, ಅದರ ಅರ್ಥ ನಮ್ಮ ವೈವಾಹಿಕ ಜೀವನ ಬಿರುಕು ಬಿಟ್ಟಿದೆ ಎಂದರ್ಥವಲ್ಲ.  ಪಾಕಿಸ್ತಾನ ಮತ್ತು ಭಾರತದ ಮಾಧ್ಯಮಗಳಲ್ಲಿ ಅವರ ವೈವಾಹಿಕ ಜೀವನ ತೊಂದರೆಯಲ್ಲಿದೆ ಎಂದು ವರದಿಯಾಗಿತ್ತು. ನಟ ಹುಮೈಮಾ ಮಲಿಕ್ ಮತ್ತು ಅವರ ಕುಟುಂಬದ ಜೊತೆ ಮಲಿಕ್ ತಿರುಗಾಡುತ್ತಿದ್ದರೆಂದು ಮಾಧ್ಯಮಗಳು ಹೇಳಿದ್ದವು. ಹುಮೈಮಾ ನಮ್ಮ ಸ್ನೇಹಿತೆ ಮಾತ್ರ ಆಗಿದ್ದಾರೆ.

ಸಾನಿಯಾ ಮತ್ತು ನನ್ನ ನಡುವೆ ದೃಢವಾದ ಸಂಬಂಧವಿದೆ. ಆದರೂ ಕೆಲವು ಬಾರಿ ನಮ್ಮ ವಿವಾಹದ ಬಗ್ಗೆ  ನಿರಾಧಾರ ಕಥೆಗಳನ್ನು ಕೇಳಿದಾಗ ಬೇಸರವಾಗುತ್ತದೆ ಎಂದಿದ್ದಾರೆ. ತಾವು ವಿಶ್ವಕಪ್‌ನಲ್ಲಿ ಆಡಲು ಬಯಸಿಲ್ಲ ಎಂದು ಹೇಳುತ್ತಿರುವ ಟೀಕಾಕಾರರನ್ನು ಅವರು ತರಾಟೆಗೆ ತೆಗೆದುಕೊಂಡರು.

ನಾನು ವಿಶ್ವಕಪ್‌ನಲ್ಲಿ ಆಡುವುದಕ್ಕೆ ಬಯಸಿಲ್ಲ ಎಂದು ಯಾವಾಗಲೂ ಹೇಳಿಲ್ಲ.ನಾನು ಪಾಕಿಸ್ತಾನಕ್ಕೆ ಆಡಲು ಸದಾ ಲಭ್ಯವಾಗುತ್ತೇನೆ. ತಮ್ಮ ಮುಖ್ಯ ಆದ್ಯತೆ ಪಾಕಿಸ್ತಾನಕ್ಕೆ ಆಡುವುದು ಹೊರತು ವಿದೇಶಿ ಲೀಗ್‌ಗಳಿಗೆ ಆಡುವುದಲ್ಲ ಎಂದು ಮಲಿಕ್ ಹೇಳಿದರು.

Share this Story:

Follow Webdunia kannada