Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್: ಅನುಷ್ಕಾ ಭೇಟಿಗೆ ಬ್ರೇಕ್?

ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್: ಅನುಷ್ಕಾ ಭೇಟಿಗೆ ಬ್ರೇಕ್?
ಮುಂಬೈ , ಶನಿವಾರ, 26 ಜುಲೈ 2014 (19:39 IST)
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟರ್ ವಿರಾಟ್ ಕೊಹ್ಲಿ ಸಂಬಂಧ ಇನ್ನೊಂದು ಹೆಜ್ಜೆ ಮುಂದೆ ಹೋಗಲಿದೆ ಎಂದು ಭಾವಿಸಿದ್ದರೆ ಅದು ತಪ್ಪುಕಲ್ಪನೆಯಾಗುತ್ತದೆ. ತನ್ನ ಗೆಳೆಯ  ಕೊಹ್ಲಿ ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಅನುಷ್ಕಾಳನ್ನು ದೂರಿರುವುದು ಅವರಿಗೆ ತುಂಬಾ ಬೇಸರ ತಂದಿದೆಯಂತೆ.

ವಿರಾಟ್ ಇಂಗ್ಲೆಂಡ್‌ಗೆ ಭೇಟಿ ನೀಡಿರುವ ಪ್ರಿಯತಮೆಯ ದೆಸೆಯಿಂದ ಅವನು ಆಟದ ಮೇಲೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಎಂದು ಕೆಲವು ಕ್ರಿಕೆಟ್ ಬಳಗದವರ ಸಲಹೆಯಿಂದ ಅನುಷ್ಕಾಗೆ ತೀರಾ ಬೇಸರವಾಗಿದೆ.  ಈ ವರದಿ ಕೇಳಿದಾಗಿನಿಂದ ಅನುಷ್ಕಾ ಮಾನಸಿಕ ಕ್ಷೋಭೆಗೆ ಒಳಗಾಗಿ ವಿರಾಟ್ ಅವರ ಕಳಪೆ ಫಾರಂಗೆ ತಮ್ಮನ್ನು ದೂರುವುದು ಸರಿಯಲ್ಲ ಎಂದು ಭಾವಿಸಿದ್ದಾರೆ.

ವಿರಾಟ್ ದಿಲ್ ದಂಡಾಕ್ನೆ ದೋ ಸೆಟ್‌ಗೆ ಭೇಟಿ ನೀಡಿದ್ದಾಗ ತಮ್ಮ  ಏಕಾಗ್ರತೆಗೆ ಭಂಗವಾಗಲಿಲ್ಲ.ಆದ್ದರಿಂದ ತಾವು ಮಾಡದ ತಪ್ಪಿಗೆ ದೂರುವುದು ಸರಿಯಲ್ಲ ಎನ್ನುವುದು ಅವರ ವಾದ. ಈ ಆರೋಪಗಳಿಂದ ಅನುಷ್ಕಾ ತೀವ್ರ ಬೇಸರವಾಗಿ ಇಬ್ಬರೂ ಕಾರ್ಯನಿರತರಾಗಿದ್ದಾಗ ಪರಸ್ಪರ ಭೇಟಿ ಮಾಡುವ ವಾಡಿಕೆಯನ್ನು ನಿಲ್ಲಿಸಬಹುದೆಂದು ಗುಸು ಗುಸು ಕೇಳಿಬರುತ್ತಿದೆಯಂತೆ.

Share this Story:

Follow Webdunia kannada