Select Your Language

Notifications

webdunia
webdunia
webdunia
webdunia

ಶ್ರೀಲಂಕಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಅಬ್ಬರದ ಶತಕ

ಶ್ರೀಲಂಕಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಅಬ್ಬರದ ಶತಕ
ಮುಂಬೈ , ಗುರುವಾರ, 30 ಅಕ್ಟೋಬರ್ 2014 (19:26 IST)
ಶ್ರಮದ ಕೆಲಸ ನನ್ನನ್ನು ರೂಪಿಸಿದೆಯಲ್ಲದೇ ಸಹಜ ಪ್ರತಿಭೆಯಲ್ಲ ಎಂದು ರೋಹಿತ್ ಶರ್ಮಾ ಹೇಳಿದ ಮರುದಿನವೇ ಅದನ್ನು ಮೈದಾನದಲ್ಲಿ ಸಾಬೀತು ಮಾಡಿದ್ದಾರೆ. ಗಾಯಾಳುವಾಗಿದ್ದು ಆಟದಿಂದ ಹೊರದುಳಿದು 2 ತಿಂಗಳ ನಂತರ ರೋಹಿತ್ ಶ್ರೀಲಂಕಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ.

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಆಡುತ್ತಿದ್ದ ರೋಹಿತ್ ಬೆರಳು ಮತ್ತು ಭುಜದ ಗಾಯದಿಂದ ಪೂರ್ಣವಾಗಿ ಚೇತರಿಸಿಕೊಂಡು 142 ಅಬ್ಬರದ ರನ್ ಬಾರಿಸಿದ್ದಾರೆ. ರೋಹಿತ್ ಉನ್‌ಮುಕ್ತ ಚಾಂದ್ ಜತೆ ಬ್ಯಾಟಿಂಗ್ ಆರಂಭಿಸಿ ಪ್ರಥಮ ವಿಕೆಟ್‌ಗೆ 95 ರನ್ ಜೊತೆಯಾಟವಾಡಿದರು.

ನಂತರ ಮನೀಶ್ ಪಾಂಡೆ ಜೊತೆ 214 ರನ್ ಜೊತೆಯಾಟವಾಡಿ ಲಂಕನ್ನರ ಬೌಲಿಂಗ್ ಅನ್ನು ಬಿಡುಬೀಸಾಗಿ ಚಚ್ಚಿದರು. 

Share this Story:

Follow Webdunia kannada