Select Your Language

Notifications

webdunia
webdunia
webdunia
webdunia

2015ರ ವಿಶ್ವಕಪ್‌ವರೆಗೆ ರವಿಶಾಸ್ತ್ರಿ ನಿರ್ದೇಶಕರಾಗಿ ಮುಂದುವರಿಕೆ

2015ರ ವಿಶ್ವಕಪ್‌ವರೆಗೆ ರವಿಶಾಸ್ತ್ರಿ ನಿರ್ದೇಶಕರಾಗಿ ಮುಂದುವರಿಕೆ
ನವದೆಹಲಿ , ಶುಕ್ರವಾರ, 26 ಸೆಪ್ಟಂಬರ್ 2014 (18:58 IST)
ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ಟೀಂ ಇಂಡಿಯಾ ನಿರ್ದೇಶಕರಾಗಿ ನೇಮಕರಾಗಿದ್ದ ರವಿ ಶಾಸ್ತ್ರಿ 2015ರ ಐಸಿಸಿ ವಿಶ್ವಕಪ್‌ ತನಕ ತಂಡದಲ್ಲಿ ಮುಂದುವರಿಯಲಿದ್ದಾರೆ. ಬಿಸಿಸಿಐ ಕಾರ್ಯಕಾರಿ ಸಮಿತಿ ಶುಕ್ರವಾರ ನಿರ್ದೇಶಕರಾಗಿ ರವಿಶಾಸ್ತ್ರಿ ಅಧಿಕಾರಾವಧಿಯನ್ನು ಮುಂದುವರಿಸಿತು.ಡಂಕನ್ ಫ್ಲೆಚರ್ ಹೆಡ್ ಕೋಚ್ ಹುದ್ದೆಯಲ್ಲೇ ಉಳಿಯಲಿದ್ದಾರೆ.

ರವಿಶಾಸ್ತ್ರಿ ಕ್ರಿಕೆಟ್‌ನ ಮಾಧ್ಯಮವ್ಯಕ್ತಿಯಾಗಿ ಬ್ಯುಸಿಯಾಗಿದ್ದರೂ ಹೊಸ ಪಾತ್ರದಲ್ಲಿ ಮುಂದುವರಿಯಲು ಒಪ್ಪಿಕೊಂಡಿದ್ದಾರೆ. ಭಾರತದ ವೆಸ್ಟ್ ಇಂಡೀಸ್ ಜೊತೆ ಸ್ವದೇಶಿ ಸರಣಿ ಮತ್ತು ಆಸ್ಟ್ರೇಲಿಯಾ ಪ್ರವಾಸದಲ್ಲಿ ಹಾಗೂ ನಂತರ ವಿಶ್ವಕಪ್‌ನಲ್ಲಿ ಅವರು ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಾರೆ.

 ಆದರೆ ಭಾರತ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋಲಿನ ಬಳಿಕ ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್‌ಗಳಾದ ಡೇವೆಸ್ ಮತ್ತು ಪೆನ್ನಿ ಅವರನ್ನು ರಜೆ ಮೇಲೆ ಕಳಿಸಲಾಗಿದ್ದು, ಅವರ ಬಗ್ಗೆ ಯಾವುದೇ ಸುದ್ದಿ ಕೇಳಿಬಂದಿಲ್ಲ.

Share this Story:

Follow Webdunia kannada