Select Your Language

Notifications

webdunia
webdunia
webdunia
webdunia

ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನಲ್ಲಿ ಆಡುವುದಕ್ಕೆ ಪೂಜಾರ ನಿರ್ಧಾರ

ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನಲ್ಲಿ ಆಡುವುದಕ್ಕೆ ಪೂಜಾರ ನಿರ್ಧಾರ
ಮುಂಬೈ , ಬುಧವಾರ, 20 ಆಗಸ್ಟ್ 2014 (19:34 IST)
ಐದು ಟೆಸ್ಟ್ ಸರಣಿಯಲ್ಲಿ ಕ್ಲಿಕ್ ಆಗಲು ವಿಫಲರಾಗಿರುವ ಮೇಲಿನ ಕ್ರಮಾಂಕದ ಬ್ಯಾಟ್ಸ್‌ಮನ್  ಚೇತೇಶ್ವರ್ ಪೂಜಾರ ಇಂಗ್ಲಿಷ್ ಕೌಂಟಿ ಸೀಸನ್‌ನ ಉಳಿದ ಪಂದ್ಯಗಳಲ್ಲಿ ಆಡುವುದಕ್ಕೆ ಅವಕಾಶ ನೀಡುವಂತೆ ಬಿಸಿಸಿಐಗೆ ಕೋರಿದ್ದಾರೆ. 
 
"ಪೂಜಾರ ಏಕದಿನ ಪಂದ್ಯ ಅಥವಾ ಟಿ20 ತಂಡದ ಭಾಗವಾಗಿ ಉಳಿಯುವುದಿಲ್ಲ.ಅವರು ಕೌಂಟಿ ಕ್ರಿಕೆಟ್‌ನಲ್ಲಿ ಆಡುವುದಕ್ಕೆ ಅನುಮತಿ ಕೇಳಿದ್ದು ನಾನು ವಿವರ ಕಳಿಸುವಂತೆ ಹೇಳಿದ್ದೇನೆ. ಅವರಿಗೆ ಆಡುವುದಕ್ಕೆ ಅವಕಾಶ ನೀಡಲು ತೀರ್ಮಾನಿಸಿದ್ದೇನೆ" ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ವಡೋದರದಿಂದ ತಿಳಿಸಿದ್ದಾರೆ. ನಮ್ಮ ಸ್ಥಳೀಯ ಕ್ರಿಕೆಟ್ ರಣಜಿ ಟ್ರೋಫಿಗೆ ಅಡ್ಡಿಯಾಗದಿದ್ದರೆ ನಾವು ಯಾವುದೇ ಆಟಗಾರನಿಗೆ ಕೌಂಟಿಯಲ್ಲಿ ಆಡಬಾರದೆಂದು ತಿಳಿಸಿಲ್ಲ ಎಂದು ಅವರು ಹೇಳಿದರು.

ನಾವು ಗೌತಮ್ ಗಂಭೀರ್ ಅವರಿಗೆ ಇಂಗ್ಲೀಷ್ ಕೌಂಟಿ ಕ್ರಿಕೆಟ್‌ನಲ್ಲಿ ಆಡುವುದಕ್ಕೆ ಅವಕಾಶ ನೀಡಿದ್ದೆವು ಎಂದು ಪಟೇಲ್ ಹೇಳಿದರು.  ಪೂಜಾರ ಟೆಸ್ಟ್ ಸ್ಪೆಷಲಿಸ್ಟ್ ಎನಿಸಿದ್ದು, ಜೊತೆಗೆ ವಿರಾಟ್ ಕೊಹ್ಲಿ ಯುವ ಬ್ಯಾಟಿಂಗ್ ಲೈನ್ ಅಪ್ ಬೆನ್ನೆಲುಬಾಗಿದ್ದರು. ಆದರೆ ಇಂಗ್ಲೆಂಡ್‌ನಲ್ಲಿ ಸ್ವಿಂಗ್ ಬೌಲಿಂಗ್‌ಗೆ ಅನುಕೂಲಕರವಾದ ಸ್ಥಿತಿಯಲ್ಲಿ ಆಡಲು ಅವರಿಬ್ಬರೂ ವಿಫಲರಾಗಿ ಟೀಕಾಪ್ರವಾಹ ಎದುರಿಸಿದ್ದಾರೆ.

Share this Story:

Follow Webdunia kannada