Select Your Language

Notifications

webdunia
webdunia
webdunia
webdunia

ಫಿಲ್ ಹ್ಯೂಸ್ ಸಾವು ಶೂನ್ಯವನ್ನು ಸೃಷ್ಟಿಸಿದೆ: ಕ್ಯಾಲಿಸ್

ಫಿಲ್ ಹ್ಯೂಸ್ ಸಾವು ಶೂನ್ಯವನ್ನು ಸೃಷ್ಟಿಸಿದೆ: ಕ್ಯಾಲಿಸ್
ನವದೆಹಲಿ , ಶುಕ್ರವಾರ, 28 ನವೆಂಬರ್ 2014 (15:50 IST)
ಫಿಲ್ ಹ್ಯೂಸ್ ಅವರ ದುರಂತ ಸಾವು ಬೃಹತ್ ಶೂನ್ಯವನ್ನು ಸೃಷ್ಟಿಸಿದೆ ಎಂದು ಜಾಕ್ವೆಸ್ ಕ್ಯಾಲಿಸ್ ಪ್ರತಿಕ್ರಿಯಿಸಿದ್ದಾರೆ. ಕ್ರಿಕೆಟ್ ಆಟವನ್ನು ಅತ್ಯಂತ ಗೌರವದಿಂದ ಕಾಣಬೇಕೆಂಬ ಪರಂಪರೆಯನ್ನು ನ್ಯೂ ಸೌತ್ ವೇಲ್ಸ್ ಬ್ಯಾಟ್ಸ್‌ಮನ್ ಬಿಟ್ಟುಹೋಗಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾ ವೆಬ್‌ಸೈಟ್‌ನಲ್ಲಿ ಹೃದಯಸ್ಪರ್ಶಿ ಗೌರವ ನೀಡಿದ ಕ್ಯಾಲಿಸ್, ಹ್ಯೂಸ್ ಬ್ಯಾಟ್ ಮಾಡುವುದನ್ನು ವೀಕ್ಷಿಸಿದಾಗ ತಮಗಾದ ಭಾವನೆಯನ್ನು ಹೇಳಿದ್ದಾರೆ.  ಲಕ್ಷಾಂತರ ಜನರ ರೀತಿ ಫಿಲಿಪ್ ಹ್ಯೂಸ್ ಹೆಸರನ್ನು ನಾನು ಮರೆಯುವುದಿಲ್ಲ. ಅವರ ನಗು ಚಿತ್ರಗಳಲ್ಲಿ ಜೀವಂತವಾಗಿದೆ. ಅವರ ರೀತಿಯಲ್ಲಿ ಆಟವನ್ನು ಗೌರವದಿಂದ ಕಾಣುವಂತೆ ಕ್ರಿಕೆಟ್ ಆಡುವ ಎಲ್ಲರಿಗೂ ಅವರ ಪರಂಪರೆ ನೆನಪಾಗಿ ಉಳಿಯುತ್ತದೆ ಎಂದು ಕ್ಯಾಲಿಸ್ ಹೇಳಿದರು.

ಆಸ್ಟ್ರೇಲಿಯಾದ 2009ನೇ ಪ್ರವಾಸಿ ತಂಡಕ್ಕೆ  ಹ್ಯೂಸ್ 20ನೇ ವಯಸ್ಸಿನಲ್ಲಿ ಚೊಚ್ಚಲ ಪ್ರವೇಶ ಮಾಡಿದ್ದಾಗ ಕ್ಯಾಲಿಸ್ ದಕ್ಷಿಣ ಆಫ್ರಿಕಾ ತಂಡದ ಭಾಗವಾಗಿದ್ದರು. ನ್ಯೂ ಸೌತ್ ವೇಲ್ಸ್ ಎಡಗೈ ಬ್ಯಾಟ್ಸ್‌ಮನ್ ಪ್ರಥಮ ಇನ್ನಿಂಗ್ಸ್‌ನಲ್ಲಿ ಸೊನ್ನೆ ಹೊಡೆದರೂ ಎರಡೇ ಇನ್ನಿಂಗ್ಸ್‌ನಲ್ಲಿ 75 ರನ್ ಸ್ಕೋರ್ ಮಾಡಿದರು.  

ಅದಾದ ನಂತರ ದರ್ಬಾನ್‌ನಲ್ಲಿ ಒಂದೇ ಪಂದ್ಯದಲ್ಲಿ ಎರಡು ಶತಕಗಳನ್ನು ಟೆಸ್ಟ್ ಇತಿಹಾಸದಲ್ಲಿ ಸ್ಕೋರ್ ಮಾಡಿದ ಅತೀ ಕಿರಿಯ ಆಟಗಾರನೆನಿಸಿದ್ದರು. 

Share this Story:

Follow Webdunia kannada