Select Your Language

Notifications

webdunia
webdunia
webdunia
webdunia

60 ರನ್ ಬಾರಿಸಿದ ಕೊಹ್ಲಿ: ಗೆಲುವಿಗಾಗಿ ಕೊಹ್ಲಿಯೊಂದಿಗೆ ಸೆಣಸಾಡಿದ ವಿಜಯ್, ಪೂಜಾರಾ

60 ರನ್ ಬಾರಿಸಿದ ಕೊಹ್ಲಿ: ಗೆಲುವಿಗಾಗಿ ಕೊಹ್ಲಿಯೊಂದಿಗೆ ಸೆಣಸಾಡಿದ ವಿಜಯ್, ಪೂಜಾರಾ
ಅಡೆಲೈಡ್ , ಮಂಗಳವಾರ, 25 ನವೆಂಬರ್ 2014 (19:05 IST)
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ತಂಡ, ಕ್ರಿಕೆಟ್ ಆಸ್ಟ್ರೇಲಿಯಾ ಏಲೆವನ್ ತಂಡದ ವಿರುದ್ಧ ಆಡಿದ ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರೂ ಪಂದ್ಯ ಡ್ರಾ ದಲ್ಲಿ ಅಂತ್ಯ ಕಂಡಿದೆ.
 
ಇಲ್ಲಿನ ಗ್ಲೈಡೆರೋಲ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಎಲೆವನ್ ತಂಡದ 219 ರನ್‌ಗಳ ಸವಾಲನ್ನು ಬೆನ್ನಿಟ್ಟಿದ್ದ ಭಾರತ ತಂಡ, 91 ಓವರ್ ಗಳಿಗೆ 8 ವಿಕೆಟ್ ಕಳೆದುಕೊಂಡು 363 ರನ್ ಗಳಿಸಿ ಪಂದ್ಯವನ್ನು ಮುಕ್ತಾಯಗೊಳಿಸಿತ್ತು.
 
ತಂಡದ ನೇತೃತ್ವ ವಹಿಸಿದ್ದ ಅರುಣ್ ಅರೋನ್, ಹಲವು ಷರತ್ತುಗಳೊಂದಿಗೆ ತಂಡವನ್ನು ಮುನ್ನಡೆಸಿದ್ದರು. ಇದು ಉತ್ತಮ ಬ್ಯಾಟಿಂಗ್ ಮಾಡಲು ಸಹಾಯವಾಯಿತು. ಈ ಪಂದ್ಯದಲ್ಲಿ  ಆಟಗಾರರು ಸಾಕಷ್ಟು ಪಳಗಿದ್ದು, ಇದು ಡಿ.4ರಿಂದ ಬ್ರಿಸ್ಬೇನ್ ನಲ್ಲಿ 4ನೇ ಟೆಸ್ಟ್ ಸರಣಿ ಪಂದ್ಯಗಳು ನಡೆಯಲಿದ್ದು, ಅಲ್ಲಿ ಸಹಾಯಕವಾಗಲಿದೆ ಎನ್ನಲಾಗಿದೆ.
 
ಈ ಪಂದ್ಯಗಳಲ್ಲಿ ನಾಯಕ ವಿರಾಟ್ ಕೊಹ್ಲಿ 60 ರನ್‌ಗಳಿಸಿ ತಂಡದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಖ್ಯಾತಿಗೊಳಗಾದರು. ನಂತರದ ಸ್ಥಾನದಲ್ಲಿ ಮುರಳಿ ವಿಜಯ್(51), ಚೇತೇಶ್ವರ್ ಪೂಜಾರ್(55), ಹಾಗೂ ವೃದ್ದೀಮಾನ್ ಸಹ(56) ಮತ್ತು ಕರಣ್ ಶರ್ಮಾ(55) ಜೋಡಿ ಉತ್ತಮ ಪ್ರದರ್ಶನದೊಂದಿಗೆ ಅರ್ಧ ಶತಕ ಬಾರಿಸುವಲ್ಲಿ ಸಫಲರಾದರು.    
 
ಇಂದಿನ ಪಂದ್ಯವನ್ನು ವಿಜಯ್ ಹಾಗೂ ಪೂಜಾರ ಅವರ ಜೋಡಿ ಬ್ಯಾಟ್ ಹಿಡಿಯುವ ಮೂಲಕ ಆಟ ಆರಂಭಿಸಿದರು.  

Share this Story:

Follow Webdunia kannada