Select Your Language

Notifications

webdunia
webdunia
webdunia
webdunia

ನಾಲ್ಕನೇ ಕ್ರಮಾಂಕದಲ್ಲಿ ಕೊಹ್ಲಿ: ಧೋನಿಯ ಪ್ರಯೋಗ ಫೇಲ್

ನಾಲ್ಕನೇ ಕ್ರಮಾಂಕದಲ್ಲಿ ಕೊಹ್ಲಿ: ಧೋನಿಯ ಪ್ರಯೋಗ ಫೇಲ್
ನವದೆಹಲಿ , ಬುಧವಾರ, 21 ಜನವರಿ 2015 (19:28 IST)
ಕೆಲವು ಸಮಯದ ಹಿಂದೆ, ಮಹೇಂದ್ರ ಸಿಂಗ್ ಧೋನಿಯ ವಿಶ್ವಕಪ್ ಮುನ್ನೋಟದಲ್ಲಿ ಸುರೇಶ್ ರೈನಾ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸುವುದಾಗಿತ್ತು. ಭಾರತದ ಟೈಟಲ್ ರಕ್ಷಣೆಗೆ ಯುವರಾಜ್ ಸಿಂಗ್ ಇಲ್ಲದಿದ್ದರೆ ರೈನಾ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸುವುದು ಅವರ ಯೋಜನೆಯಾಗಿತ್ತು.

ಆದರೆ ಯುವರಾಜ್ ವಾಸ್ತವವಾಗಿ ತಂಡದಲ್ಲಿ ಇಲ್ಲ ಮತ್ತು ಧೋನಿಯ 2015ರ ಮುನ್ನೋಟ ಕೂಡ ಇಲ್ಲ. ಬದಲಿಗೆ 3ನೇ ಕ್ರಮಾಂಕದಲ್ಲಿ ಒಗ್ಗಿಕೊಂಡಿದ್ದ ವಿರಾಟ್ ಕೊಹ್ಲಿಗೆ 4 ಕ್ರಮಾಂಕದಲ್ಲಿ ಆಡಿಸುವ ಪ್ರಯೋಗ ಮಾಡಲಾಗುತ್ತಿದೆ. 
 
 ನಾಲ್ಕು ಟೆಸ್ಟ್ ಸರಣಿಯಲ್ಲಿ ದಾಖಲೆಯ ಆಟವಾಡಿದ ಕೊಹ್ಲಿ ನಾಲ್ಕು ಟೆಸ್ಟ್ ಶತಕಗಳನ್ನು ಬಾರಿಸಿದರು. ಇದಕ್ಕೆ ಮುಂಚೆ ಸೀಮಿತ ಓವರುಗಳ ಸ್ವರೂಪದಲ್ಲಿ ರನ್ ಚೇಸ್‌ನಲ್ಲಿ ಕೌಶಲ್ಯ ಮೆರೆದಿದ್ದ ಕೊಹ್ಲಿ ನಂ. 3 ಸ್ಥಾನ ಪಡೆದಿದ್ದರು. ತ್ರಿಕೋನ ಸರಣಿಯಲ್ಲಿ ಕೂಡ ಅದೇ ರೀತಿಯ ಅಬ್ಬರದ ಆಟ ನಿರೀಕ್ಷಿಸಲಾಗಿತ್ತು. ಆದರೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೊಹ್ಲಿಯನ್ನು ನಾಲ್ಕನೇ ಸ್ಥಾನಕ್ಕೆ ಇಳಿಸಿದ್ದು, ಭಾರತದ ಸೋಲಿಗೆ ಕಾರಣಗಳಲ್ಲೊಂದು ಎಂದರೂ ತಪ್ಪಿಲ್ಲ.

ಆದರೆ ಈ ಪ್ರಯೋಗ ಹೀಗೆ ಮುಂದುವರಿದರೆ ಭಾರತ ಒಬ್ಬ ಅಗ್ರಮಾನ್ಯ ಬ್ಯಾಟಿಂಗ್ ಆಸ್ತಿಯನ್ನು ಕಳೆದುಕೊಳ್ಳಬೇಕಾಗಬಹುದು. 2013ರ ಅಕ್ಟೋಬರ್‌ನಲ್ಲಿ ಧೋನಿ ತನ್ನ ಪ್ಲಾನ್ ಬಿಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ರೈನಾರನ್ನು ಆಡಿಸಿದರು. ಆದರೆ ರೈನಾ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಯಾವುದೇ ಲಕ್ಷಣ ಕಾಣಿಸದೇ ಕೊಹ್ಲಿಯನ್ನು ನಾಲ್ಕನೇ ಕ್ರಮಾಂಕದ ಪ್ರಯೋಗ ಶಾಲೆಗೆ ಇಳಿಸಲಾಯಿತು. ಸುರೇಶ್ ರೈನಾ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸುವ ಧೋನಿ ಯೋಜನೆ ಏನಾಯಿತು,

ಆದರೆ ಈಗ ಆಗುತ್ತಿರುವುದಕ್ಕೆ ಮಾತ್ರ ವಿವರಣೆ ನೀಡಲು ಸಾಧ್ಯವಿಲ್ಲದಂತಾಗಿದೆ. ನಾಲ್ಕನೇ ಕ್ರಮಾಂಕದಲ್ಲಿ ಆಡದ ಕೊಹ್ಲಿ ಗಳಿಸಿದ್ದು ಕ್ರಮವಾಗಿ 9 ಮತ್ತು 4 ರನ್‌ಗಳು. ಭಾರತದ ಅತ್ಯುತ್ತಮ ಮ್ಯಾಚ್ ವಿನ್ನರ್ ಆಟಗಾರನಿಗೆ ನಾಲ್ಕನೇ ಕ್ರಮಾಂಕದ ಆಟ ಒಗ್ಗುತ್ತಿಲ್ಲ ಮತ್ತು ವಿಶ್ವಕಪ್‌ಗೆ ಮುನ್ನ ಕೊಹ್ಲಿಯ ನೈಜ ಆಟಕ್ಕೆ ಪೆಟ್ಟು ಬೀಳುತ್ತಿದೆ. 

Share this Story:

Follow Webdunia kannada