Select Your Language

Notifications

webdunia
webdunia
webdunia
webdunia

ಮೂರನೇ ಟೆಸ್ಟ್ ಪಂದ್ಯಕ್ಕೆ ಜೋಸ್ ಬಟ್ಲರ್ ಆಯ್ಕೆ

ಮೂರನೇ ಟೆಸ್ಟ್ ಪಂದ್ಯಕ್ಕೆ ಜೋಸ್ ಬಟ್ಲರ್ ಆಯ್ಕೆ
ಲಂಡನ್ , ಬುಧವಾರ, 23 ಜುಲೈ 2014 (20:18 IST)
ಇಂಗ್ಲೆಂಡ್ ಭಾರತದ ವಿರುದ್ಧ ಮೂರನೇ ಟೆಸ್ಟ್ ಪಂದ್ಯಕ್ಕೆ ವಿಕೆಟ್ ಕೀಪರ್ ಜೋಸ್ ಬಟ್ಲರ್ ಅವರನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ. ಇದೊಂದು ನಿಜವಾದ ಕನಸು ಎಂದು ಪ್ರತಿಕ್ರಿಯಿಸಿದ ಬಟ್ಲರ್, ಇಷ್ಟೊಂದು ಬೇಗ ಕರೆ ಬರುತ್ತದೆಂದು ನಿರೀಕ್ಷಿಸಿರಲಿಲ್ಲ ಎಂದು ನುಡಿದಿದ್ದಾರೆ. ನಾನು ಇನ್ನೂ ಸುಧಾರಣೆಯಾಗಬೇಕೆಂಬ ಭಾವನೆಯಿದೆ. ಆದರೆ ತಂಡದಲ್ಲಿ ಆಯ್ಕೆಯಾಗಿರುವುದು ಹರ್ಷ ತಂದಿದೆ ಎಂದು ಹೇಳಿದ್ದಾರೆ. 
 
 23 ವರ್ಷ ವಯಸ್ಸಿನ ಬಟ್ಲರ್ ಕಳೆದ ಚಳಿಗಾಲದಲ್ಲಿ ಲಂಕಾಶೈರ್ ಕ್ಲಬ್‌ನಿಂದ ಸಾಮರ್‌ಸೆಟ್ ಕ್ಲಬ್‌ಗೆ ಆಡುತ್ತಿದ್ದು, ಇಂಗ್ಲೆಂಡ್ ಪರ 61 ಏಕದಿನಪಂದ್ಯಗಳನ್ನು ಆಡಿದ್ದು, ಸೌತಾಂಪ್ಟನ್‌ನಲ್ಲಿ ಟೆಸ್ಟ್‌ಗೆ ಚೊಚ್ಚಲ ಪ್ರವೇಶ ಮಾಡಿದ್ದಾರೆ.

ಬಟ್ಲರ್ ಇಂಗ್ಲೆಂಡ್ ಬ್ಯಾಟಿಂಗ್ ಕ್ರಮಾಂಕಕ್ಕೆ ಹೊಸ ಚೈತನ್ಯ ತುಂಬುವರೆಂದು ನಿರೀಕ್ಷಿಸಲಾಗಿದ್ದು, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಏಕದಿನ ಪಂದ್ಯದಲ್ಲಿ ಅತಿ ವೇಗದ ಶತಕದ ದಾಖಲೆ ಹೊಂದಿದ್ದಾರೆ.

Share this Story:

Follow Webdunia kannada