Select Your Language

Notifications

webdunia
webdunia
webdunia
webdunia

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 6 ವಿಕೆಟ್ ಭರ್ಜರಿ ಜಯ

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 6 ವಿಕೆಟ್ ಭರ್ಜರಿ ಜಯ
ನಾಟಿಂಗ್‌ಹ್ಯಾಮ್ , ಭಾನುವಾರ, 31 ಆಗಸ್ಟ್ 2014 (11:44 IST)
ಇಂಗ್ಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಅಂಬಾಟಿ ರಾಯುಡು ಅವರ ಅಜೇಯ 64 ರನ್  ಮತ್ತು ಭಾರತದ ಆಲ್ ರೌಂಡ್ ಪ್ರದರ್ಶನದಿಂದ ಇಂಗ್ಲೆಂಡ್ ವಿರುದ್ಧ 6 ವಿಕೆಟ್‌ಗಳಿಂದ ಭಾರತ ತಂಡ  ಭರ್ಜರಿ ಜಯಗಳಿಸಿದೆ.ಇದರಿಂದ ಐದು ಪಂದ್ಯಗಳ ಸರಣಿಯಲ್ಲಿ 2-0ರಿಂದ ಮುನ್ನಡೆಯನ್ನು ಭಾರತ ಸಾದಿಸಿದೆ. 
 
 ರೋಹಿತ್ ಶರ್ಮಾ ಅವರ ಬದಲಿಗೆ ಆಡಲಿಳಿದ ರಾಯುಡು ನಾಲ್ಕನೇ ವಿಕೆಟ್‌ಗೆ ಸುರೇ ಶ್ ರೈನಾ ಅವರೊಂದಿಗೆ 87 ರನ್ ಜೊತೆಯಾಟವಾಡಿದರು.  ಆರಂಭಿಕ ಆಟಗಾರರಾಗಿ ಆಡಲಿಳಿದ ಅಜಿಂಕ್ಯಾ ರಹಾನೆ 45 ರನ್ ಗಳಿಸಿದ್ದು, ವಿರಾಟ್ ಕೊಹ್ಲಿ 40 ರನ್ ಗಳಿಸಿದರು. ಕೊಹ್ಲಿ ಅವರ ಪ್ರವಾಸದಲ್ಲಿ ಅತ್ಯಧಿಕ ಸ್ಕೋರ್ ಇದಾಗಿದೆ.
 
 ರಾಯುಡು ಅವರು 78 ಎಸೆತಗಳಲ್ಲಿ ನಾಲ್ಕು ಬೌಂಡರಿಗಳನ್ನು ಬಾರಿಸಿದ್ದರು. ರಾಯುಡು ಜೇಮ್ಸ್ ಟ್ರೆಡ್‌ವೆಲ್ ಬೌಲಿಂಗ್‌‍ನಲ್ಲಿ 2 ರನ್ ಗಳಿಸುವ ಮೂಲಕ ಗೆಲುವಿನ ಸ್ಕೋರಾದ 43 ಓವರುಗಳಲ್ಲಿ 228 ರನ್ ಮುಟ್ಟಿದರು.
 

Share this Story:

Follow Webdunia kannada