Select Your Language

Notifications

webdunia
webdunia
webdunia
webdunia

ಭಾರತಕ್ಕೆ ಸತತ ಎರಡನೇ ಸೋಲು: ಇಂಗ್ಲೆಂಡ್‌ಗೆ 9 ವಿಕೆಟ್ ಜಯ

ಭಾರತಕ್ಕೆ ಸತತ ಎರಡನೇ ಸೋಲು: ಇಂಗ್ಲೆಂಡ್‌ಗೆ 9  ವಿಕೆಟ್ ಜಯ
ಬ್ರಿಸ್ಬೇನ್ , ಮಂಗಳವಾರ, 20 ಜನವರಿ 2015 (18:18 IST)
ಏಕದಿನ ಸರಣಿಯಲ್ಲಿ ಭಾರತ ಸತತ ಎರಡನೇ ಸೋಲು ಅನುಭವಿಸಿದೆ. ಇಂಗ್ಲೆಂಡ್ ವಿರುದ್ಧ 9  ವಿಕೆಟ್‌ಗಳ ಸೋಲನ್ನು ಭಾರತವಪ್ಪಿದೆ. ಆರಂಭದಲ್ಲೇ ರನ್ ಗಳಿಸಲು ಪರದಾಡಿದ ಟೀಂ ಇಂಡಿಯಾ ಶಿಖರ್ ಧವನ್ ವಿಕೆಟ್ ಕಳೆದುಕೊಂಡು ಪರದಾಡಿತು.

ರಹಾನೆ ರಾಯುಡು 56 ರನ್ ಜೊತೆಯಾಟವಾಡಿದರು. ಭಾರತ 10 ರನ್ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡಿತು. 60 ರನ್ ಆಗುವಷ್ಟರಲ್ಲಿ ಭಾರತ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇಂತಹ ಸಂಕಷ್ಟದಲ್ಲಿ ಸಂದರ್ಭದಲ್ಲಿ ಧೋನಿ-ಸ್ಟುವರ್ಟ್ ಬಿನ್ನಿ 70 ರನ್ ಜೊತೆಯಾಟವಾಡಿ ತಂಡದ ಮೊತ್ತವನ್ನು 100 ರ ಗಡಿ ದಾಟಿಸಿದರು.

ಆದರೆ 34 ರನ್ ಗಳಿಸಿದ ಧೋನಿ ಔಟಾಗುತ್ತಿದ್ದಂತೆ ಭಾರತದ ಪತನದ ಅಂಚಿಗೆ ತಲುಪಿತು. ಭಾರತ 39.3 ಓವರುಗಳಲ್ಲಿ 153 ರನ್‌ಗೆ ಆಲೌಟಾಯಿತು. ಕರ್ನಾಟಕದ ಸ್ಟುವರ್ಟ್ ಬಿನ್ನಿ 44 ರನ್ ಗಳಿಸಿದರು.  ಭಾರತದ ಪರ ನಾಲ್ವರು ಮಾತ್ರ ಎರಡಂಕಿ ಮುಟ್ಟಿದರು.

ಭಾರತದ ಸಾಧಾರಣ ಮೊತ್ತವನ್ನು ಬೆನ್ನೆತ್ತಿದ ಇಂಗ್ಲೆಂಡ್ ಒಂದು ವಿಕೆಟ್‌ ಕಳೆದುಕೊಂಡು ಗೆಲುವಿನ ಗುರಿಯನ್ನು ಮುಟ್ಟಿತು. ಜೇಮ್ಸ್ ಟೇಲರ್ ಮತ್ತು ಬೆಲ್ ಉತ್ತಮ ಜೊತೆಯಾಟದಿಂದ ಭಾರತದ ಗುರಿಯನ್ನು 29.2 ಓವರುಗಳಲ್ಲಿ ಮುಟ್ಟಿತು. ಬೆಲ್ 88 ಮತ್ತು ಟೈಲರ್ 56 ರನ್ ಹೊಡೆದು ಅಜೇಯರಾಗಿ ಉಳಿದರು. ಭಾರತ ಮುಂದಿನ ಎರಡೂ ಪಂದ್ಯಗಳನ್ನೂ ಉತ್ತಮ ಸರಾಸರಿಯೊಂದಿಗೆ ಗೆದ್ದರೆ ಮಾತ್ರ ಅವಕಾಶವಿದ್ದು, ಇಲ್ಲದಿದ್ದರೆ ಹೊರಬೀಳಲಿದೆ. 

Share this Story:

Follow Webdunia kannada