Select Your Language

Notifications

webdunia
webdunia
webdunia
webdunia

ದ್ವಿತೀಯ ಟೆಸ್ಟ್‌ನಲ್ಲಿ ಭಾರತ ಮೇಲುಗೈ: ಆಸ್ಟ್ರೇಲಿಯಾ 221ಕ್ಕೆ 4 ವಿಕೆಟ್

ದ್ವಿತೀಯ ಟೆಸ್ಟ್‌ನಲ್ಲಿ ಭಾರತ ಮೇಲುಗೈ:  ಆಸ್ಟ್ರೇಲಿಯಾ 221ಕ್ಕೆ 4 ವಿಕೆಟ್
ಬ್ರಿಸ್ಬೇನ್ , ಗುರುವಾರ, 18 ಡಿಸೆಂಬರ್ 2014 (13:20 IST)
ಬ್ರಿಸ್ಬೇನ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎರಡನೇ ದಿನದಾಟದಲ್ಲಿ  221ಕ್ಕೆ 4 ವಿಕೆಟ್ ಕಳೆದುಕೊಂಡಿದೆ. ತೇಜಸ್ವಿ ಯಾದವ್ ಮೂರು ವಿಕೆಟ್ ಕಬಳಿಸಿದರೆ ಅಶ್ವಿನ್ ಒಂದು ವಿಕೆಟ್ ಪಡೆದಿದ್ದಾರೆ. ರೋಜರ್ಸ್ 55, ವಾರ್ನರ್ 29, ವಾಟಸ್ನ್ 25 ರನ್ ಗಳಿಸಿದ್ದಾರೆ. 

ಸ್ಟೀವನ್ ಸ್ಮಿತ್ ಔಟಾಗದೇ 65 ರನ್ ಗಳಿಸಿದ್ದಾರೆ. ಪ್ರಥಮ ಇನ್ನಿಂಗ್ಸ್‌ನಲ್ಲಿ ಭಾರತ 408 ರನ್‌ಗಳಿಗೆ ಆಲೌಟ್ ಆಗಿತ್ತು.  ಟೀ ವೇಳೆಯಲ್ಲಿ ಆಸ್ಟ್ರೇಲಿಯಾ 3 ವಿಕೆಟ್ ಕಳೆದುಕೊಂಡು 121 ರನ್ ಗಳಿಸಿತ್ತು. ಅಡೆಲೈಡ್‌ನಲ್ಲಿ ಎರಡು ಶತಕಗಳನ್ನು ಬಾರಿಸಿದ ವಾರ್ನರ್ ಯಾದವ್ ಎಸೆತವನ್ನು ಹೊಡೆಯಲು ಹೋಗಿ ಬ್ಯಾಟಿನ ತುದಿಗೆ ತಾಗಿ ಅಶ್ವಿನ್ ಕ್ಯಾಚ್ ಹಿಡಿದರು.

ಮಿಶೆಲ್ ಮಾರ್ಶ್ ಮತ್ತು ಸ್ಟೀವನ್ ಸ್ಮಿತ್ ಕ್ರಮವಾಗಿ 65 ರನ್ ಮತ್ತು 7 ರನ್ ಗಳಿಸಿ ಆಡುತ್ತಿದ್ದಾರೆ. ಒಟ್ಟಿನಲ್ಲಿ ಇನ್ನೊಂದೆರಡು ವಿಕೆಟ್‌ಗಳನ್ನು ಭಾರತ ಕಬಳಿಸಿದರೆ ಎರಡನೇ ಟೆಸ್ಟ್‌ನಲ್ಲಿ ಭಾರತ ಮೇಲುಗೈ ಸಾಧಿಸುವುದು ನಿಶ್ಚಿತ.
 

Share this Story:

Follow Webdunia kannada