Webdunia - Bharat's app for daily news and videos

Install App

ಫ್ಲೆಚರ್‌ಗೆ ಕೊಕ್ ನೀಡಿ, ರವಿ, ವೆಂಗ್‌ಸರ್ಕಾರ್ ಮುನ್ನಡೆಸಲಿ: ಇಂಜಿನಿಯರ್

Webdunia
ಶುಕ್ರವಾರ, 12 ಸೆಪ್ಟಂಬರ್ 2014 (18:53 IST)
ಭಾರತದ ಮಾಜಿ ವಿಕೆಟ್‌ಕೀಪರ್  ಫರೂಕ್ ಇಂಜಿನಿಯರ್  ಭಾರತ ತಂಡದ ಹೆಡ್ ಕೋಚ್  ಡಂಕನ್ ಫ್ಲೆಚರ್  ಅವರಿಗೆ ಕೊಕ್ ನೀಡಿ ತಂಡವನ್ನು ಮುನ್ನಡೆಸಲು ರವಿಶಾಸ್ತ್ರಿ ಮತ್ತು ದಿಲೀಪ್ ವೆಂಗ್‌ಸರ್ಕಾರ್  ಅವರನ್ನು ನೇಮಿಸಬೇಕೆಂದು ಬಯಸಿದ್ದಾರೆ. ರವಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಹುಡುಗರಿಗೆ ಪ್ರೇರಕಶಕ್ತಿಯಾಗಿದ್ದು, ಸೃಜನಶೀಲ ವ್ಯಕ್ತಿತ್ವ ಹೊಂದಿದ್ದಾರೆ. ವಾಸ್ತವವಾಗಿ ಏಕದಿನ ಕ್ರಿಕೆಟ್‌  ಅಲ್ಲದೇ ಟೆಸ್ಟ್  ಕ್ರಿಕೆಟ್  ಉಸ್ತುವಾರಿ ವಹಿಸಬೇಕು ಎಂದು ಮಾಜಿ ಟೆಸ್ಟ್ ಕೀಪರ್  ಹೇಳಿದರು.  ಭಾರತದ ಒಳಾಂಗಣ ಅಕಾಡೆಮಿ ಕ್ರಿಕೆಟ್ ಕ್ಲಬ್ ಉದ್ಘಾಟಿಸಿದ ಬಳಿಕ ಅವರ ಹೇಳಿಕೆ ಹೊರಬಿದ್ದಿದೆ. 
 
 ಏಕದಿನ ಸರಣಿಗಳಿಗೆ ತಂಡದ ನಿರ್ದೇಶಕರಾಗಿ ರವಿ ಶಾಸ್ತ್ರಿಯನ್ನು ಆಯ್ಕೆ ಮಾಡಿದ ಬಳಿಕ ಭಾರತ 3-1ರಿಂದ ಜಯಗಳಿಸಿದೆ. ಆದರೂ ಫ್ಲೆಚರ್  ಅವರನ್ನು ಹುದ್ದೆಯಲ್ಲಿ ಮುಂದುವರಿಸಲಾಗಿತ್ತು. ಮಾಜಿ ನಾಯಕ ವೆಂಗ್‌ಸರ್ಕಾರ್  ಅವರು ಹಿಂದೆ ಮುಖ್ಯ ಆಯ್ಕೆದಾರರಾಗಿ ಕೆಲಸ ಮಾಡಿದ್ದರು.  ರವಿ ಜೊತೆಗೆ ದಿಲೀಪ್ ವೆಂಗ್‌ಸರ್ಕಾರ್ ಮುಂತಾದವರು ಇರಬೇಕು. ಆಟದ ಒಳಹೊರಗನ್ನು ಇಬ್ಬರೂ ಚೆನ್ನಾಗಿ ಬಲ್ಲವರಾಗಿದ್ದಾರೆ ಎಂದು ಇಂಗ್ಲೆಂಡ್ ಮೂಲದ ಇಂಜಿನಿಯರ್  ಹೇಳಿದರು. 
 
ಇವರಿಬ್ಬರು ಭಾರತ ಕ್ರಿಕೆಟ್  ಅದೃಷ್ಟವನ್ನು ಬದಲಾಯಿಸಬಹುದು. ವೆಂಗ್ಸರ್ಕಾರ್  ಸ್ವಂತ ಅಕಾಡೆಮಿಗಳನ್ನು ಹೊಂದಿದ್ದಾರೆ. ಕೋಚಿಂಗ್ ಅಥವಾ ವ್ಯವಸ್ಥಾಪನೆಗೆ ಭಾರತದ ಕ್ರಿಕೆಟ್‌ಗೆ ಅವರನ್ನು ಸೇರ್ಪಡೆ ಮಾಡುವುದಕ್ಕೆ ಯೋಗ್ಯ ವ್ಯಕ್ತಿ ಎಂದು ಹೇಳಿದರು.  ಭಾರತ ಸಂಜಾತ ಕ್ರಿಕೆಟಿಗರು ತಂಡದ ಉಸ್ತುವಾರಿ ವಹಿಸಬೇಕು ಎಂದು ಹೇಳಿದರು.  ನಾನು ಡಂಕನ್ ಫ್ಲೆಚರ್  ವಿರುದ್ಧವೇನೂ ನಿಂತಿಲ್ಲ. ಅವರು ನನಗೆ ಗೊತ್ತೂ ಇಲ್ಲ. ಅವರ ಸಿಡುಕು ಮೋರೆ ಸ್ವಭಾವ ನನಗೆ ರುಚಿಸುತ್ತಿಲ್ಲ. 

ಆಟಗಾರರಿಂದ ಉತ್ತಮ ಸಾಧನೆಯನ್ನು ಅವರು ತಂದಿಲ್ಲ. ಅವರು ಸಕ್ರಿಯರಾಗಿಯೂ ತೊಡಗಿಸಿಕೊಂಡಿಲ್ಲ. ಹುಡುಗರಿಗೆ ತಮ್ಮಲ್ಲೇ ನಂಬಿಕೆ ಹುಟ್ಟಲು  ಕೆಲವು ಅಬ್ಬರದ ವ್ಯಕ್ತಿಗಳು ಬೇಕಾಗಿದೆ ಎಂದು ಅವರು ನುಡಿದರು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments