Select Your Language

Notifications

webdunia
webdunia
webdunia
webdunia

5ನೇ ಏಕದಿನದಲ್ಲಿ ಇಂಗ್ಲೆಂಡ್‌ಗೆ ಜಯ: ಭಾರತಕ್ಕೆ ತಪ್ಪಿದ ಕ್ಲೀನ್ ಸ್ವೀಪ್ ಅವಕಾಶ

5ನೇ ಏಕದಿನದಲ್ಲಿ ಇಂಗ್ಲೆಂಡ್‌ಗೆ ಜಯ: ಭಾರತಕ್ಕೆ ತಪ್ಪಿದ ಕ್ಲೀನ್ ಸ್ವೀಪ್ ಅವಕಾಶ
leads , ಶನಿವಾರ, 6 ಸೆಪ್ಟಂಬರ್ 2014 (13:15 IST)
ಲೀಡ್ಸ್: ಕೊನೆಯ ಏಕದಿನ ಪಂದ್ಯದಲ್ಲಿ ಯಾರ್ಕ್‌ಶೈರ್ ತವರುನೆಲದಲ್ಲಿ  ಜೋಯ್ ರೂಟ್ ಶತಕದ ಮೂಲಕ ಇಂಗ್ಲೆಂಡ್ ಭಾರತದ ವಿರುದ್ಧ 41 ರನ್ ಜಯಗಳಿಸಿದ್ದರಿಂದ ಭಾರತಕ್ಕೆ ಇಂಗ್ಲೆಂಡ್ ತಂಡವನ್ನು ಕ್ಲೀನ್ ಸ್ವೀಪ್ ಮಾಡುವ ಅವಕಾಶ ತಪ್ಪಿಹೋಗಿದೆ.

 ಆದರೂ ಭಾರತ 3-1ರಿಂದ ಸರಣಿಯನ್ನು ಗೆದ್ದುಕೊಂಡು ದಾಖಲೆ ನಿರ್ಮಿಸಿದೆ.  ಇಂಗ್ಲೆಂಡ್ ಏಳು ವಿಕೆಟ್‌ಗೆ 294 ರನ್‌ ಗಳಿಸುವುದಕ್ಕೆ ರೂಟ್ ಅವರ 113 ರನ್ ಸ್ಕೋರ್ ನೆರವಾಯಿತು.

ಇದು ರೂಟ್ ಅವರ ಸೀಸನ್‌ನ ಅತ್ಯುತ್ತಮ ಏಕದಿನ ಸ್ಕೋರಾಗಿದೆ.  ಇಂಗ್ಲೆಂಡ್ 295 ರನ್ ಬೆನ್ನಟ್ಟಿದ ಭಾರತದ ಪರ ರವೀಂದ್ರ ಜಡೇಜಾ 87 ರನ್ ಗಳಿಸಿ ಭರ್ಜರಿ ಆಟವಾಡಿದರೂ ಭಾರತ 253 ರನ್ ಗಳಿಸಲು ಮಾತ್ರ ಶಕ್ತವಾಗಿದ್ದರಿಂದ  ಕೊನೆಯ ಪಂದ್ಯ ಇಂಗ್ಲೆಂಡ್ ಪಾಲಾಯಿತು.

ಭಾರತದ ಪರ ಅಂಬಟಿ ರಾಯ್ಡು ಮತ್ತು ಜಡೇಜಾ ಕ್ರಮವಾಗಿ 53 ಮತ್ತು 87 ರನ್ ಗಳಿಸಿದರು. ಭಾರತ ಮೊದಲಿಗೆ ಫೀಲ್ಡಿಂಗ್ ತೆಗೆದುಕೊಂಡು ಇಂಗ್ಲೆಂಡ್ ತಂಡವನ್ನು 29 ಓವರುಗಳಲ್ಲಿ ನಾಲ್ಕುವಿಕೆಟ್‌ಗಳಿಗೆ 117 ರನ್ ನೀಡಿ ಕಟ್ಟಿಹಾಕಿತ್ತು.

ಆದರೆ ರೂಟ್ ಮತ್ತು ಜೋಸ್ ಬಟ್ಲರ್ ಐದನೇ ವಿಕೆಟ್‌ಗೆ 108 ರನ್ ಜೊತೆಯಾಟದ ಮೂಲಕ ಹಾನಿಯನ್ನು ಸರಿಪಡಿಸಿದರು. ಏಕದಿನ ಪಂದ್ಯದಲ್ಲಿ ಪ್ರಥಮ ಶತಕ ದಾಖಲಿಸಿದ ಮೊದಲ ಯಾರ್ಕ್‌ಶೈರ್ ಆಟಗಾರ ಎನಿಸಿದರು. ಇಂಗ್ಲೆಂಡ್ 294 ರನ್ ಗಳಿಸಿ ಭಾರತಕ್ಕೆ ಕಠಿಣ ಸವಾಲನ್ನು ಒಡ್ಡಿತು.  ಭಾರತದ ರನ್ ಬೆನ್ನಟ್ಟುವಿಕೆ ಕೆಟ್ಟದಾಗಿ ಆರಂಭವಾಗಿ ಅಜಿಂಕ್ಯ ರಹಾನೆ ಮೂರನೇ ಎಸೆತಕ್ಕೆ ಡಕ್ ಔಟ್ ಆದರು.
 
 ವಿರಾಟ್ ಕೊಹ್ಲಿ ಅವರ ಶೋಚನೀಯ ಪ್ರವಾಸ ಮುಂದುವರಿದು 13 ರನ್ ಗಳಿಸಿದ್ದಾಗ ಆಂಡರ್‌ಸನ್ ಎಸೆತಕ್ಕೆ ಬಲಿಯಾದರು.  ಶಿಖರ್ ಧವನ್ ಸಿಕ್ಸರು ಬಾರಿಸಲು ಪ್ರಯತ್ನಿಸಿ, 31ರನ್‌‌ಗೆ ಅಲಿಗೆ ಔಟಾದರು. ಭಾರತ ಮುಂದಿನ ಓವರಿನಲ್ಲೇ ಇನ್ನೂ ಎರಡು ವಿಕೆಟ್ ಕಳೆದುಕೊಳ್ಳಬೇಕಿತ್ತು. ಆದರೆ ಸ್ಟೀವನ್ ಫಿನ್ ಬೌಲಿಂಗ್‌ನಲ್ಲಿ ಕ್ರಿಸ್ ವೋಕ್ಸ್ ಕ್ಯಾಚ್ ಬಿಟ್ಟು ಅಂಬಾಟಿ ರಾಯುಡುಗೆ ಮತ್ತು ಸ್ಲಿಪ್ ಕ್ಯಾಚ್ ಹಿಡಿಯಲು  ಕುಕ್ ವಿಫಲರಾಗಿದ್ದರಿಂದ ರೈನಾಗೆ ತಲಾ ಒಂದು ಜೀವದಾನ ಸಿಕ್ಕಿತು. ರಾಯುಡು ಎರಡನೇ ಅರ್ಧಶಕತಕದ 53 ರನ್ ಗಳಿಸಿದರು.

ನಾಯಕ ಧೋನಿ ಫಿನ್ ಎಸೆತವನ್ನು ಕಟ್ ಮಾಡಲು ಹೋಗಿ ಔಟಾದಾಗ ಭಾರತದ ಸ್ಕೋರು 37ನೇ ಓವರಿನಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್‌ಗಳಾಗಿತ್ತು. ಕೊನೆಯ ವಿಕೆಟ್‌ಗೆ ಬಿಡುಬೀಸಾಗಿ ಆಟವಾಡಿದ ಜಡೇಜಾ 44 ರನ್ ಜೊತೆಯಾಟವಾಡಿದರೂ ಎಂಟು ಎಸೆತಗಳು ಬಾಕಿವುಳಿದಿರುವಂತೆ 253 ರನ್‌ಗೆ  ಎಲ್ಲಾ ವಿಕೆಟ್  ಕಳೆದುಕೊಂಡಿತು.

Share this Story:

Follow Webdunia kannada